ಸುದ್ದಿಗಳು

ಮಾರೀ-2 ಸಿನಿಮಾದಲ್ಲಿ ಧನುಶ್ ಜೊತೆ ಸಾಯಿ ಪಲ್ಲವಿ !

ಕಾಲಿವುಡ್ ಸೆನ್ಸೇಷನಲ್ ಮಾಸ್ ಹೀರೋ ಧನುಶ್ ಅವರು ಈ ಹಿಂದೆ ಪಕ್ಕಾ ಲೋಕಲ್ ಪಾತ್ರದಲ್ಲಿ ‘ಮಾರೀ’ ಎನ್ನುವ ಚಿತ್ರದಲ್ಲಿ ನಟಿಸಿ ಮಿಂಚುವುದರ ಮೂಲಕ ತಮ್ಮ ಯುನಿಕ್ ಸ್ಟೈಲ್ ಅನ್ನು ಪ್ರೆಸೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾರೀ ಸಿನಿಮಾ ಬಾರೀ ಯಶಸ್ಸು ಗಳಿಸುವುದರ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು ಎನ್ನುವ ಸುದ್ದಿ ಈಗಾಗಲೇ ತಳಿದ ವಿಷಯ. ಪ್ರಸ್ತುತ ಇದೇ ಸೀಕ್ವೆಲ್ ಆಧಾರಿತ ‘ಮಾರೀ-2’ ಶೀರ್ಷಿಕೆಯೊಂದಿಗೆ ನೂತನವಾಗಿ ಸಿನಿಮಾ ಸೆಟ್ಟೇರಲು ಭರ್ಜರಿ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.

ಈ ನೂತನ ಚಿತ್ರಕ್ಕೆ ಬಾಲಾಜಿ ಮೋಹನ್ ಯಾಕ್ಷನ್ ಕಟ್ ಹೇಳಲಿದ್ದು ಲೀಡಿಂಗ್ ಕ್ಯಾರೆಕ್ಟರ್ ನಲ್ಲಿ ಕ್ಯೂಟ್ ಬೆಡಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಜೋಡಿ ನೂತನ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ವಿಷಯವನ್ನು ಕೇಳಿದ ಅಭಿಮಾನಿಗಳಿಗೆ ಎದೆ ಬಿಸಿಯಾಗುವುದಂತೂ ಖಂಡಿತ!

ಜೊತೆಗೆ ಈ ಸಿನಿಮಾಕ್ಕೆ ಯುವನ್ ಶಂಕರ್ ರಾಜಾ ಹಿನ್ನೆಲೆ ಸಂಗೀತ ನೀಡಲಿದ್ದು ದೊಡ್ಡ ತಾರಾ ಬಳಗವೇ ತೆರೆಯನ್ನು ಹಂಚಿಕೊಳ್ಳಲಿದ್ದಾರೆ ಎನ್ನುವುದನ್ನು ಸಿನಿ ಮೂಲಗಳು ತಿಳಿಸಿವೆ.

Tags

Related Articles

Leave a Reply

Your email address will not be published. Required fields are marked *