ಸುದ್ದಿಗಳು

ಬಹಿರಂಗವಾದ ಮ್ಯಾಕ್ ಮಿಲ್ಲರ್ ಅವರ ಸಾವಿನ ಕಾರಣ

ಬಹಿರಂಗವಾದ ಮ್ಯಾಕ್ ಮಿಲ್ಲರ್ ಅವರ ಸಾವಿನ ಕಾರಣ

ನ.8: ಅಮೆರಿಕನ್ ಸಿಂಗರ್ ಮ್ಯಾಕ್ ಮಿಲ್ಲರ್ ಅವರು ವಿಷಯುಕ್ತ ಔಷಧದ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿದೆ.

ಲಾಸ್ ಎಂಜಲೀಸ್ ಕೌಂಟಿಯ ವೈದ್ಯಕೀಯ ಪರೀಕ್ಷೆಯಲ್ಲಿ ರಾಪರ್ ಸಾವಿನ ಕಂಡು ಬಂದಿದೆ ಎಂದು ಇ! ಆನ್ಲೈನ್ ವರದಿ ಮಾಡಿದೆ. ಮಿಲ್ಲರ್ ನ ದೇಹದಲ್ಲಿ ಫೆಂಟಾನಿಲ್, ಕೊಕೇನ್ ಮತ್ತು ಎಥನಾಲ್, ಕರೋನರ್ ಅಂಶಗಳು ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.

‘ಸೆಲ್ಫ್ ಕೇರ್ ಸಿಂಗರ್ ಆಗಿರುವ ಮ್ಯಾಕ್ ಮಿಲ್ಲರ್ ಅವರ ನಿಜವಾದ ಹೆಸರು ಮಾಲ್ಕಮ್ ಮ್ಯಾಕ್ಕಾರ್ಮಿಕ್. ಇವರು ಸೆಪ್ಟೆಂಬರ್ ತಿಂಗಳಿನಲ್ಲಿ ನಿಧನರಾದರು. ಸಂಗೀತ ಉದ್ಯಮದಲ್ಲಿ ಅವರು ‘ಮರೂನ್ 5’, ಗಾಯಕ ಫಾರೆಲ್ ವಿಲಿಯಮ್ಸ್, ಮತ್ತು ರಾಪರ್ಸ್ ಲಿಲ್ ವೇಯ್ನ್ ಮತ್ತು 2 ಚೈನ್ಸ್ರೊಂದಿಗೆ ಪ್ರವಾಸ ಮಾಡಿದ್ದರು. ಅವರ ಚೊಚ್ಚಲ ಆಲ್ಬಂ 2011 ‘ಬ್ಲೂ ಸ್ಲೈಡ್ ಪಾರ್ಕ್’ ಮ್ಯೂಸಿಕ್ ಚಾರ್ಟ್ ನಲ್ಲಿ ಅಗ್ರಸ್ಥಾನಕ್ಕೇರಿತು.

ಮಿಲ್ಲರ್ ಅವರ ದುರಂತ ಮರಣದ ನಂತರ, ಅನೇಕ ಅಭಿಮಾನಿಗಳು ಮತ್ತು ಪ್ರಸಿದ್ಧ ಸಂಗೀತಗಾರರು ಗೌರವ ಸಲ್ಲಿಸಿದರು. ಅವರ ಮಾಜಿ ಗೆಳತಿ ಅರಿಯಾನಾ ಗ್ರಾಂಡೆ ಸಹ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಪೋಸ್ಟ್ ಗಳ ಮೂಲಕ ನೆನಪಿಸಿಕೊಂಡರು.

Tags