ಸುದ್ದಿಗಳು

‘ಮದಗಜ’ನಿಗೆ ನಾಯಕಿ ಯಾರು..? ಕೇಳಿ ಬರುತ್ತಿವೆ ಮೂವರು ನಾಯಕಿಯರ ಹೆಸರು

‘ಅಯೋಗ್ಯ’ ಚಿತ್ರದ ನಂತರ ಮಹೇಶ್ ಗೌಡ ನಿರ್ದೇಶನ ಮಾಡುತ್ತಿರುವ ಸಿನಿಮಾ

ಬೆಂಗಳೂರು.ಡಿ.30: ಸದ್ಯ “ಭರಾಟೆ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಟಿಸುವ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಅವರ ಮುಂದಿನ ಸಿನಿಮಾವನ್ನು ‘ಅಯೋಗ್ಯ’ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ‘ಮದಗಜ’ ಎಂದು ಹೆಸರಿಡಲಾಗಿದೆ.

ನಾಯಕಿ ಯಾರಾಗಬಹುದು

ಸದ್ಯ ‘ಮದಗಜ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಚಿತ್ರಕ್ಕೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದು ಮಾತ್ರ ಇನ್ನು ತಿಳಿದು ಬಂದಿಲ್ಲ. ಆದರೆ ಸದ್ಯ ಈ ಚಿತ್ರದಲ್ಲಿ ಶ್ರೀಮುರಳಿ ಜೊತೆಗೆ ರೊಮ್ಯಾನ್ಸ್ ಮಾಡಲು ಮೂವರು ಚೆಂದುಳ್ಳಿ ಚೆಲುವೆಯರು ರೇಸ್ ನಲ್ಲಿದ್ದಾರೆ.

ಮೂವರು ನಾಯಕಿಯರು

ಈ ಹಿಂದೆ ಕೇಳಿ ‘ರಥಾವರ’ ಚಿತ್ರದ ನಂತರ ಮತ್ತೊಮ್ಮೆ ರಚಿತಾ ರಾಮ್ , ಶ್ರೀ ಮುರುಳಿಗೆ ಜೊತೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈಗ ಕೇಳಿ ಬರುತ್ತಿರುವ ಮಾಹಿತಿಗಳ ಪ್ರಕಾರ ಚಿತ್ರಕ್ಕೆ ‘ಕೆಜಿಎಫ್’ ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ಹೆಸರುಗಳು ಸಹ ಕೇಳಿ ಬರುತ್ತಿದೆ.

ಇನ್ನು ‘ರಥಾವರ’ ಚಿತ್ರದಲ್ಲಿ ಮುರಳಿ-ರಚಿತಾ ಜೋಡಿ ಗೆದ್ದಿದ್ದರಿಂದ ಅದೇ ಯಶಸ್ವಿ ಜೋಡಿ ಈ ಸಿನಿಮಾದಲ್ಲೂ ಮುಂದುವರೆಯುವ ನಿರೀಕ್ಷೆಯಿದೆ. ಆದರೆ ಸದ್ಯ ‘ಕೆ.ಜಿ.ಎಫ್’ ಮೂಲಕ ದೇಶಾದ್ಯಂತ ಸುದ್ದಿಯಾಗುತ್ತಿರುವ ಶ್ರೀ ನಿಧಿ ಶೆಟ್ಟಿಯ ಹೆಸರು ಸಹ ಕೇಳಿ ಬರುತ್ತಿದೆ. ಹೀಗಾಗಿ ಈ ಮೂವರಲ್ಲಿ ‘ಮದಗಜ’ ನಿಗೆ ನಾಯಕಿಯಾಗುತ್ತಾರೆ ಎಂಬುದು ಸದ್ಯದಲ್ಲಿಯೇ ತಿಳಿದು ಬರಲಿದೆ.

Tags

Related Articles