ಸುದ್ದಿಗಳು

ಮದಗಜನ ಘರ್ಜನೆಗೆ ಇಂದು ಮುಹೂರ್ತ…!!

ಸಿನಿಮಾದ ಮುಹೂರ್ತ ಬನಶಂಕರಿ ದೇವಸ್ಥಾನದಲ್ಲಿ ನೆಡೆಯಲಿದೆ.

ರೋರಿಂಗ್ ಸ್ಟಾರ್ ಶ್ರೀಮುರುಳಿಯವರ ಚಿತ್ರ ಮದಗಜ ಸಿನಿಮಾಗೆ ಇಂದು ಮುಹೂರ್ತ ನೆಡೆಯಲಿದೆ. ಈಗಾಗಲೇ ಸದಾ ಸುದ್ದಿಯಲ್ಲಿರುವ ಚಿತ್ರತಂಡ, ಸಿನಿಮಾದ ಟೈಟಲ್ ಬಿಡುಗಡೆ  ಮಾಡಿಸಿದ್ದು ‘ಒಂಟಿಸಲಾಗ’ ‘ಡಿ ಬಾಸ್’ ದರ್ಶನ್ ಬಳಿ. ಮೊನ್ನೆಯಷ್ಟೆ ಸಿನಿಮಾದ ನಾಯಕಿಯನ್ನಾಗಿ ಆಶಿಕಾ ರಂಗನಾಥ್ ಅವರನ್ನು ಆಯ್ಕೆ ಮಾಡಿದ್ದಾರೆ. ಇಂದು ಸಿನಿಮಾದ ಮುಹೂರ್ತ ಬನಶಂಕರಿ ದೇವಸ್ಥಾನದಲ್ಲಿ ನೆಡೆಯಲಿದೆ.

Image result for madagaja movie

ಅಯೋಗ್ಯ ಸಿನಿಮಾದ ನಂತರ ನಿರ್ದೇಶ ಮಹೇಶ್ ಮಾದಗಜನನ್ನು ತೆರೆಯಮೇಲೆ ತರುತ್ತಿದ್ದಾರೆ. ‘ಹೆಬ್ಬುಲಿ’ ಹಾಗು ‘ರಾಬರ್ಟ್’ ಸಿನಿಮಾಗಳಿಗೆ ಬಂಡವಾಳಹೂಡಿದ್ದ, ಡಿ ಉಮಾಪತಿ ಈ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಮದಗಜನ ಮಾಡಕ್ಕೆ ಸಂಗೀತನೀಡಲಿದ್ದಾರೆ. ಬಹಳ ಅದ್ಧುರಿಯಾಗಿ ಸಿನಿಮಾವನ್ನು ತೆಗೆಯುವ ಉದ್ದೇಶದಲ್ಲಿದೆ ಚಿತ್ರತಂಡ. ಈಗಾಗಲೇ ಯಶಸ್ಸಿನ ಉತುಂಗದಲ್ಲಿರುವ ಶ್ರೀ ಮುರುಳಿ,  ಈ ಸಿನಿಮಾದಲ್ಲಿ ಅತಿದೊಡ್ಡ ಶ್ರೀಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ.

Image result for madagaja movie

ಮದಗಜ ಸಿನಿಮಾದ ಮೂಲಕ ಶ್ರೀಮುರುಳಿ ಮತ್ತೆ ಅವರ ಮಾಸ್ ಲುಕ್ ತಾಳಲಿದ್ದಾರೆ, ಹೌದು ಈಗಾಗಲೇ ಭರಾಟೆ ಸಿನಿಮಾ ಮುಗಿಸಿರುವ ಶ್ರೀ ಮುರುಳಿ ಮದಗಜನಿಗೋಸ್ಕರ ಬಹಳ ತಯಾರಿಯನ್ನು ನೆಡೆಸಿಕೊಂಡು ಶೂಟಿಂಗ್ ಗೆ ಸಜ್ಜಾಗಿದ್ದಾರೆ. ಹಲವಾರು ಕುತೂಹಲವನು ಹುಟ್ಟಿಸಿರುವ ಮದಗಜ ಸಿನಿಮಾ ಇಂದಿನಿಂದ ಚಿತ್ರೀಕರಣವನ್ನು ಪ್ರಾರಂಭಿಸಲಿದೆ. ಒಟ್ಟಿನಲ್ಲಿ ಒಂದ್ ಒಳ್ಳೆ ಹಿಟ್ ಸಿನಿಮಾಕೊಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಮೋಷನ್ ಟ್ರೈಲರ್ ನಲ್ಲೆ ಸಾಕಷ್ಟು ಸದ್ದುಮಾಡಿರುವ ಮದಗಜನ ನಡಿಗೆ ಮುಂದಿನದಿನಗಳ್ಲಲಿ ಹೇಗೆ ಸಾಗುತ್ತೆ ಎಂದು ಕಾದುನೋಡಬೇಕಾಗಿದೆ.

ಏಪ್ರಿಲ್ ನಲ್ಲಿ ‘ಪೊಗರು’ ಖದರ್

#balkaninewskannada #shreemuruli #ashikaranganath #arjunjanya #dumapati #kannadacinima #mahesh

Tags