ಸುದ್ದಿಗಳು

ಇವರಿಬ್ಬರಲ್ಲಿ ಯಾರಾಗಲಿದ್ದಾರೆ ‘ಮದಗಜ’…!!!

'ಅಯೋಗ್ಯ' ನಿರ್ದೇಶಕರ ಎರಡನೆಯ ಸಿನಿಮಾ

ಬೆಂಗಳೂರು, ಸ.11: ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಯಶಸ್ವಿ 25 ನೇ ದಿನಗಳನ್ನು ಪೂರೈಸಿ, 50 ನೇ ದಿನದತ್ತ ಮುನ್ನುಗ್ಗುತ್ತಿರುವ ಈ ಚಿತ್ರಕ್ಕೆ ಮಹೇಶ್ ಗೌಡ ನಿರ್ದೇಶಕರು. ಇವರಿಗೆ ಈಗಾಗಲೇ ಹತ್ತಾರು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇನ್ನು ಈ ಚಿತ್ರದ ಬಿಡುಗಡೆಗೂ ಮುನ್ನವೇ ಅವರ ಎರಡನೇ ಚಿತ್ರದ ಬಗ್ಗೆ ಸುದ್ದಿಯಾಗಿತ್ತು.

ಮದಗಜ

ಹೌದು, ಅಯೋಗ್ಯ ಚಿತ್ರವು ಇನ್ನು ಚಿತ್ರೀಕರಣದ ಹಂತದಲ್ಲಿರುವಾಗಲೇ ಧ್ರವ ಸರ್ಜಾರ ಐದನೇಯ ಚಿತ್ರವನ್ನು ಮಹೇಶ್ ಗೌಡ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ‘ಮದಗಜ’ ಎಂಬ ಹೆಸರನ್ನು ಇಟ್ಟಿದ್ದಾರೆ ಎಂಬ ಸುದ್ದು ಸಾಕಷ್ಟು ಸದ್ದು ಮಾಡಿತ್ತು. `ಪೊಗರು’ ನಂತರ ಈ ಚಿತ್ರ ಪ್ರಾರಂಭವಾಗಬೇಕಿತ್ತು. ಆದರೆ ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಚಿತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ.

‘ಮದಗಜ’ನಾಗಲಿರುವ ಶ್ರೀಮುರುಳಿ

‘ಅಯೋಗ್ಯ’ ಚಿತ್ರದ ಯಶಸ್ಸಿನ ಬಳಿಕ ಮಹೇಶ್ ‘ಮದಗಜ’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮದಗಜನಾಗಿ ಅಬ್ಬರಿಸಲು ಶ್ರೀ ಮುರುಳಿ ಹೆಸರುಗಳು ಕೇಳಿ ಬರುತ್ತಿವೆ. ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಇಷ್ಟರಲ್ಲೇ ಅಧಿಕೃತವಾಗಿ ಘೋಷಿಸಲಾಗುತ್ತದೆ.

ಸಾಹಸಮಯ ಚಿತ್ರ

ಮೊದಲ ಚಿತ್ರದಲ್ಲಿ ಗ್ರಾಮೀಣ ಭಾಗದ ಸೋಡಗಿನೊಂದಿಗೆ ಪಕ್ಕಾ ಪ್ರೇಮಮಯ ಚಿತ್ರವನ್ನು ಹೇಳಿದ್ದ ನಿರ್ದೇಶಕರು , ಈ ಬಾರಿ ಪಕ್ಕಾ ಮಾಸ್ ಕಥೆಯನ್ನು ಹೇಳುತ್ತಿದ್ದಾರೆ. “ಒಬ್ಬ ಅಭಿಮಾನಿ ತಮ್ಮ ಮೆಚ್ಚಿನ ನಟನನ್ನು ಹೇಗೆ ನೋಡುವುದಕ್ಕೆ ಇಷ್ಟಪಡುತ್ತಾನೋ, ಚಿತ್ರದ ಕಥೆಯೂ ಅದೇ ತರಹ ಇರಲಿದೆ. ಇದೊಂದು ಪಕ್ಕಾ ಮಾಸ್ ಚಿತ್ರವಾಗಲಿದ” ಎಂದು ಮಹೇಶ್ ಅವರು ಹೇಳುತ್ತಾರೆ.

ಗಣೇಶ್ ಹಬ್ಬದಂದು ಈ ಚಿತ್ರದ ತಾರಾಗಣದ ಕುರಿತು ನಿರ್ದೇಶಕರು ಮಾಹಿತಿ ನೀಡಲಿದ್ದು, ಈ ಚಿತ್ರವನ್ನು ‘ಹೆಬ್ಬುಲಿ’, ‘ಒಂದಲ್ಲಾ ಎರಡಲ್ಲಾ’ ಖ್ಯಾತಿಯ ಉಮಾಪತಿ ಶ್ರೀನಿವಾಸ್ ನಿರ್ಮಿಸಲಿದ್ದಾರೆ.

Tags