ಸುದ್ದಿಗಳು

ಈ ನಟಿ ಸಹ ಬೆತ್ತಲೆಯಾಗಿ ಪ್ರತಿಭಟನೆ ಮಾಡ್ತಾಳಂತೆ!

ತೆಲುಗು ಸಿನಿಮಾ ಪರಿಶ್ರಮದಲ್ಲಿ ಕ್ಯಾಸ್ಟಿಂಗ್ ಕೌಚ್ ವಿಚಾರ ತಾರಕಕ್ಕೇರಿರುವುದು ನಮಗೆಲ್ಲ ತಿಳಿದ ವಿಷಯ. ಈ ವಿಚಾರಕ್ಕೆ ಸಂಭಂದಿಸಿದಂತೆ ಮತ್ತೋರ್ವ ನಟಿ ಶಾಕಿಂಗ್ ನ್ಯೂಸ್ ಹರಿ ಬಿಟ್ಟಿದ್ದಾರೆ. ಟಾಲಿವುಡ್ ನಲ್ಲಿ ಅವಕಾಶಕ್ಕಾಗಿ ನಟಿ ಮಣಿಯರು ನಟರಿಂದ ಹಿಡಿದು ಕೆಲ ನಿರ್ಮಾಪಕ ಹಾಗು ನಿರ್ದೇಶಕರವರೆಗೂ, ಅವರ ಜೊತೆ ಮಂಚ ಏರಲೇಬೇಕು ಎನ್ನುವ ಆರೋಪದಡಿಯಲ್ಲಿ ನಟಿ ಶ್ರೀರೆಡ್ಡಿ ಜನರು ಉಹಿಸದ ರೀತಿಯಲ್ಲಿ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಗಳನ್ನು ಹರಿಬಿಡುತ್ತಿರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಈ ರೀತಿಯ ನಡೆಗೆ ಇಡೀ ಟಾಲಿವುಡ್ ಹಾಗು ‘ಮಾ ಅಸೋಸಿಯೇಷನ್ಸ್’ ನವರು ತಲೆ ತಗ್ಗಿಸುವಂತಾಗಿದೆ ಎಂದು ನಟಿ ಶ್ರೀರೆಡ್ಡಿಯವರನ್ನು ತೆಲುಗು ಚಲನಚಿತ್ರರಂಗದಿಂದ ಬಹಿಷ್ಕಾರ ಮಾಡಿದ್ದಾರೆ. ಹಾಗು ಪ್ರೇಕ್ಷಕ ವರ್ಗದವರು ಕೆಲ ಮಂದಿ ನಟಿ ಶ್ರೀರೆಡ್ಡಿ ಪರ ವಹಿಸಿದರೆ ಇನ್ನು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ .

ಈ ಕುರಿತು ಹಲವಾರು ನಟ- ನಟಿಯರು ಸಹ ಪರ ವಿರೋಧ ವ್ಯಕ್ತ ಪಡಿಸುತ್ತಿರುವುದು ಸಹ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇದೇ ರೀತಿಯ ಕ್ಯಾಸ್ಟಿಂಗ್ ಕೌಚ್ ದೌರ್ಜನ್ಯಕ್ಕೆ ತೆಲುಗಿನ ಮತ್ತೋರ್ವ ನಟಿ ಒಳಗಾಗಿದ್ದಾರೆ ಎನ್ನಲಾಗಿದೆ, ಹಾಗು ಈ ಕುರಿತು ನಟಿ ಶ್ರೀರೆಡ್ಡಿಯ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಮಾಧವಿ ಲತಾ ತಮ್ಮ ಫೇಸ್ ಬುಕ್ ಹಾಗು ಟ್ವಿಟ್ಟರ್ ಮೂಲಕ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಾವೆಲ್ಲ ನಮಗಾಗಿರುವ ದೌರ್ಜನ್ಯದ ವಿರುದ್ದ ನ್ಯಾಯವಾದ ನೆಲೆಗಟ್ಟಿನಲ್ಲಿ ಹೋರಾಡುತ್ತಿದ್ದೇವೆ ಇದನ್ನೇ ನೀವು ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳು ಎಂದರೆ ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ ಹಾಗೆಯೇ ನಮ್ಮ ಸ್ಥಾನದಲ್ಲಿ ನೀವಿದ್ದಿದ್ದರೆ ನಿಮಗೆ ಅರ್ಥವಾಗುತ್ತಿತ್ತು. ಏನೇ ಇರಲಿ ನಾವು ಈ ಹೋರಾಟವನ್ನು ಕೈ ಬಿಡುವ ಮಾತೇ ಇಲ್ಲ, ಒಂದು ವೇಳೆ ನಮಗೆ ನ್ಯಾಯ ಸಿಗದೇ ಹೋದಲ್ಲಿ ಖಂಡಿತವಾಗಿಯೂ ಬಹಿರಂಗವಾಗಿ ನಟಿ ಶ್ರೀರೆಡ್ಡಿಯವರ ಹಾಗೆಯೇ ನಾನು ಸಹ ಬೆತ್ತಲೆ ಹೋರಾಟ ಮಾಡುತ್ತೇನೆ ಎಂದು ಮಾಧವಿ ಲತಾ ಶಾಕಿಂಗ್ ಹೇಳಿಕೆ  ನೀಡಿದ್ದಾರೆ.

 

 

Tags

2 Comments