ಸುದ್ದಿಗಳು

ಚಂದನವನದ ಬಹುಬೇಡಿಕೆಯ ಟಾಪ್ ನಟಿ ‘ಮಾಧವಿ’ ಈಗ ಹೀಗಿದ್ದಾರೆ ನೋಡಿ!!

ಮಾಧವಿ ಹೆಸರು ತುಂಬಾ ಮಧುರ.. ನಾವು ಈಗ ಹೇಳುತ್ತಿರುವ ಮಾಧುರಿ ಯಾರು ಅಂದುಕೊಂಡಿರಾ? ಇನ್ನಾರೂ ಅಲ್ಲ! ಒಂದಾನೊಂದು ಕಾಲದಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ನಟಿ ಮಾಧವಿ.. ಸಿನಿಮಾ ರಂಗದಲ್ಲಿ ಬಹು ಬೇಡಿಕೆಯಾಗಿ ಮಿಂಚಿಂದ ಚೆಲುವೆ. ಇವರು ೧೭ ವರ್ಷಗಳ ಅವಧಿಯಲ್ಲಿ ಕನ್ನಡ,ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ..  ಭಾರತೀಯ ಭಾಷೆಗಳಲ್ಲಿ  ಸೂಪರ್ ಸ್ಟಾರ್’ಗಳ’ಜೊತೆ  ನಟಿಸಿದವರು ಇವರು. ಅವರು ಈವರೆಗೆ ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿಬಿಟ್ಟಿದ್ದರು. ಅವರು ಎಲ್ಲಿ ಹೋದರು ಎನ್ನುವುದು ಕೂಡ ಅನೇಕ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು..

ದಿಗ್ಗಜರ ಜೊತೆ ನಟನೆ

ಮಾಧವಿಯವರು ಅಮಿತಾಭ್ ಬಚ್ಚನ್ ಜತೆ ‘ಅಗ್ನಿಪಥ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಮಲಹಾಸನ್ ಜತೆಗೆ ‘ರಾಜಪಾರ್ವೈ’ ಮತ್ತು ‘ಟಿಕ್ ಟಿಕ್ ಟಿಕ್’ ಮುಖ್ಯ ಚಿತ್ರಗಳು . ತೆಲುಗು ನಟ ಚಿರಂಜೀವಿ ಜತೆ ಅವರ ಅನೇಕ ಚಿತ್ರಗಳಿವೆ.

ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ

ಕನ್ನಡದಲ್ಲೂ ಅವರು ಅನೇಕ ಯಶಸ್ವೀ ಚಿತ್ರಗಳಲ್ಲಿ ರಾಜಕುಮಾರ್ , ವಿಷ್ಣುವರ್ಧನ್ , ಅಂಬರೀಶ್ , ಅನಂತನಾಗ್ ಜತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ಮಲೆಯಾಳಂ ನಲ್ಲಿ ಮಮ್ಮೂಟಿ ಮತ್ತು ಮೋಹನಲಾಲ್ ಜತೆ ಅವರ ಅನೇಕ ಚಿತ್ರಗಳಿವೆ.

ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಡಾನ್ಸ್’ನಲ್ಲಿ  ಅಷ್ಟೊಂದು ಪರ್ಫೆಕ್ಟ್ . ಅಣ್ಣಾವ್ರ ಆಕಸ್ಮಿಕ,ಜೀವನ ಚೈತ್ರ ,ಒಡಹುಟ್ಟಿದವರು ಚಿತ್ರಗಳಿಗೆ ಇನ್ನಷ್ಟು ಜೀವ ತುಂಬಿದಾಕೆ.. ಇನ್ನು ನಾಗಿಣಿ ಡಾನ್ಸ್ ಎಂದರೆ ಸಾಕು ಎಲ್ಲರಿಗೂ ಮಾಧವಿಯವರ ಮುಖ ಕಣ್ಣ ಮುಂದೆ ಬರುತ್ತದೆ..ಅಷ್ಟು ಚೆನ್ನಾಗಿ ನೃತ್ಯ ಮಾಡಬಲ್ಲರು ಮಾಧವಿ..

Image result for madhavi family actress

ಗಂಡನ ಜೊತೆ ಅಮೆರಿಕಾಗೆ ಪ್ರಯಣ

1996ರಲ್ಲಿ  ಭಾರತೀಯ ಮತ್ತು ಜರ್ಮನ್ ಹೆಸರಿನ ಔಷಧೀಯ ಉದ್ಯಮಿಯಾದ ರಾಲ್ಫ್ ಶರ್ಮಾ ಅವರನ್ನ ಮಾಧವಿ ಮದುವೆಯಾದರು. ನಂತರ ಗಂಡನ ಜೊತೆ ಅಮೆರಿಕಾಗೆ ಪ್ರಯಣ ಬೆಳೆಸಿದರು. ಈಗ ಗಂಡನ ಮೆಡಿಕಲ್ ಫಾರ್ಮಸಿಯ ಕಂಪನಿಗೆ ಮಾಧವಿ ಸಿಇಓ . ಮಾಧವಿಗೆ  ಮೂರು ಜನ ಹೆಣ್ಣು ಮಕ್ಕಳು ಜನಿಸಿದ್ದಾರೆ.  ಟಿಫಾನಿ ಶರ್ಮಾ, ಎವೆಲಿನ್ ಶರ್ಮಾ, ಪ್ರಿಸ್ಸಿಲಾ ಶರ್ಮಾ ಅಂತಾ ಮುದ್ದಾದ ಹೆಣ್ಣು ಮಕ್ಕಳು. ಮಾಧವಿ ಈಗ ಅಮೆರಿಕಾದಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ.

Image result for madhavi family actress

Image result for madhavi family actress

ಗಮನ ಸೆಳೆದ ಸತೀಶ್ ‘ಬ್ರಹ್ಮಚಾರಿ’ಯ ಲುಕ್ ..!!!

#madhavifamily #madhaviactress #madhavimovies #madhavifamilyphotos

Tags