ಸುದ್ದಿಗಳು

ಮಗಳ ಮದುವೆ ಬಗ್ಗೆ ಮಧು ಚೋಪ್ರಾ ಏನು ಹೇಳಿದ್ರು ಗೊತ್ತೆ…?

ಬಾಲಿವುಡ್ ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ತಾಯಿ ಮಧು ಚೋಪ್ರಾ

ಮುಂಬೈ, ನ.18: ಬಾಲಿವುಡ್ ನಲ್ಲಿಈಗಷ್ಟೇ ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆಯ ಅದ್ದೂರಿ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಇದರ ನಡುವೆ ಮತ್ತೊಂದು ಅದ್ದೂರಿ ಸಂಭ್ರಮಕ್ಕೆ ಬಾಲಿವುಡ್ ಸಜ್ಜಾಗುತ್ತಿದ್ದು, ಡಿಸೆಂಬರ್ 1ರಂದು ನಟಿ ಪ್ರಿಯಾಂಕ ಚೋಪ್ರಾ, ಹಾಲಿವುಡ್ ಸಿಂಗರ್ ನಿಕ್ ಜೋನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮದುವೆಗಾಗಿ ಅದ್ದೂರಿ ಸಿದ್ದತೆಗಳು ಸಾಗಿದೆ. ಜೋದ್ಬುರದ ಉಮೈದ್ ಭವನದಲ್ಲಿ ವಿವಾಹ ಕಾರ್ಯಕ್ರಮ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಪ್ರಿಯಾಂಕ ತಾಯಿ ಮಧು ಚೋಪ್ರಾ, ತಮ್ಮ ಮುದ್ದಿನ ಮಗಳ ವಿವಾಹ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಕಾರ್ಯಕ್ರಮದ ವಿನ್ಯಾಸಕರಲ್ಲೂ ಮಾತುಕತೆ ನಡೆಸಿದ್ದು, ಮದುವೆಯ ತಯಾರಿಯ ಕುರಿತಂತೆ ಅವಲೋಕನ ನಡೆಸಿದ್ದಾರೆ. ಮದುವೆ ತಯಾರಿಯಲ್ಲಿ ಬ್ಯುಸಿಯಾದ ಪ್ರಿಯಾಂಕ ತಾಯಿ

ಮಗಳ ಮದುವೆ ಹಿನ್ನೆಲೆಯಲ್ಲಿ ಶಾಪಿಂಗ್, ಸಿದ್ದತೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ತಾಯಿ ಮಧು ಚೋಪ್ರಾ, ಜೋಧ್ಬುರದಲ್ಲಿ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ನೋಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಇಡೀ ಪ್ರಪಂಚದಲ್ಲಿ ಇಷ್ಟವಾದ ಸ್ಥಳವೆಂದರೆ ಜೋಧ್ಬುರ. ಹೀಗಾಗಿ ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.  ಮದುವೆ ಸಿದ್ದತೆಗಳು ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವೆ ನೋಡಿ, ಮದುವೆಯ ಬಳಿಕ ಅದರ ಬಗ್ಗೆ ಮಾತನಾಡೋಣ. ಈಗಲೇ ಬೇಡ ಎಂದು ಹೇಳಿ ಮುಂದೆ ಸಾಗಿದ್ದಾರೆ.

ಪ್ರಿಯಾಂಕ ಚೋಪ್ರಾ ಅವರ ಮದುವೆ ಸಮಾರಂಭಕ್ಕೆ ಹತ್ತಿರ ಬಂಧುಗಳು ಹಾಗೂ ಆತ್ಮೀಯ ಸ್ನೇಹಿತರಿಗಷ್ಟೇ ಅಹ್ವಾನ ನೀಡಲಾಗಿದ್ದು, ಚಿತ್ರರಂಗದ ಸ್ನೇಹಿತರಿಗಾಗಿ ಪ್ರತ್ಯೇಕ ಸಮಾರಂಭವನ್ನು ಆಯೋಜಿಸಲಾಗಿದೆ.

Tags

Related Articles