ಸುದ್ದಿಗಳು

ಮತ ಚಲಾಯಿಸಿದ ನಟ ಮಂಡ್ಯ ರಮೇಶ್

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: ಇಂದು ನಡೆಯುತ್ತಿರುವ ಮೊದಲ ಹಂತದ ಲೋಕಸಭಾ ಚುನಾವಣೆ ರಂಗೇರುತ್ತಿದ್ದು, ನಟ ಮಂಡ್ಯ ರಮೇಶ್ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಮೈಸೂರಿನ ಕುವೆಂಪುನಗರದ ಗೋಕುಲ ಶಾಲೆಯಲ್ಲಿ ಮಂಡ್ಯ ರಮೇಶ್ ಪತ್ನಿ ಜೊತೆ ಬಂದು ಮತದಾನ ಮಾಡಿ, ‘ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡಿ ಉತ್ತಮ ನಾಗರಿಕರಾಗಿ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ನಾನು ಎಲ್ಲೇ ಇದ್ದರೂ ಯಾವುದೇ ಚುನಾವಣೆಯನ್ನು ಮಿಸ್ ಮಾಡಿಕೊಂಡಿಲ್ಲ. ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ’ ಎಂದಿದ್ದಾರೆ.

ಮತ ಚಲಾಯಿಸಿದ ರಾಘವೇಂದ್ರ ರಾಜ್ ಕುಮಾರ್ ಆ್ಯಂಡ್ ಫ್ಯಾಮಿಲಿ

#madyaramesh, #voting, #balkaninews #kannadasuddigalu. #lokasabhaelection2019

Tags

Related Articles