ಸುದ್ದಿಗಳು

ಟಾಲಿವುಡ್ನಲ್ಲಿ ದಾಖಲೆ ಬರೆದ ಮಹೇಶ್ ಬಾಬು `ಮಹರ್ಷಿ’..!

ವಂಶಿ ಪೈದಿಪಲ್ಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಮಹರ್ಷಿ’

ಹೈದರಾಬಾದ್, ನ.12: ಸೂಪರ್ ಸ್ಟಾರ್ ಮಹೇಶ್ ಬಾಬು ಬಹುನಿರೀಕ್ಷಿತ `ಮಹರ್ಷಿ’ ಚಿತ್ರದ ಶೂಟಿಂಗ್ ಸಖತ್ ಆಗಿ ನಡೆಯುತ್ತಿದೆ. ವಂಶಿ ಪೈದಿಪಲ್ಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಮಹರ್ಷಿ’ ಚಿತ್ರವನ್ನು ಸಂಯುಕ್ತವಾಗಿ ಪಿವಿಪಿ ಸಿನಿಮಾ, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ವೈಜಯಂತಿ ಮೂವಿಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ `ಮಹರ್ಷಿ’ ಚಿತ್ರ ಅತೀ ಹೆಚ್ಚು ಬೆಲೆ ಮಾರಾಟವಾಗುತ್ತಿದೆ.

ಜೆಮಿನಿ ಟಿವಿ

ಜೆಮಿನಿ ಟಿವಿ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಪಡೆದುಕೊಂಡಿದೆ. ಅದೂ ಅತ್ಯಾಧಿಕ ಬೆಲೆಗೆ ಚಿತ್ರ ಹಕ್ಕು ಮಾರಾಟವಾಗಿ ದಾಖಲೆ ಬರೆದಿದೆ. ಮತ್ತೊಂದು ವಿಶಿಷ್ಟ ವಿಚಾರವೆಂದರೆ, ಅಮೇಜಾನ್ ಪ್ರೇಮ್ ಸಂಸ್ಥೆಯು ಡಿಜಿಟಲ್ ರೈಟ್ಸ್ ಅನ್ನು ೧೨ ಕೋಟಿ ರೂ. ಪಡೆದುಕೊಂಡಿದೆ. ಟಾಲಿವುಡ್‌ನಲ್ಲಿ ಈವರೆಗೂ ಯಾವ  ಚಿತ್ರ ಡಿಜಿಟಲ್ ರೈಟ್ಸ್ ಇಷ್ಟೊಂದು ಮೊತ್ತಕ್ಕೆ ಸೇಲ್ ಆಗಿಲ್ಲ. ಆದ್ದರಿಂದ ಇದೂ ಕೂಡ ಒಂದು ದಾಖಲೆಯಾಗಿದೆ.

 

೨೫ನೇ ಚಿತ್ರ

ಎಲ್ಲಾ ಮಾತುಕತೆಗಳೂ ಮುಗಿದಿದ್ದು, ಅಗ್ರೀಮೆಂಟ್ ಸಹಿ ಹಾಕುವುದೊಂದು ಬಾಕಿ ಉಳಿದಿವೆ. ಚಿತ್ರದ ಇತರೆ ಹಕ್ಕುಗಳ ಮಾರಾಟವೂ ಜೋರಾಗಿಯೇ ನಡೆಯುತ್ತಿವೆ. `ಮಹರ್ಷಿ’, ಮಹೇಶ್ ಬಾಬು ಅವರ ೨೫ನೇ ಚಿತ್ರವಾಗಿದ್ದು, ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ.

 

Tags

Related Articles