ಸುದ್ದಿಗಳು

ಮಹಾತ್ಮನಿಗೆ ಗೌರವ ನಮನ

ಬೆಂಗಳೂರು, ಆ.10: ಆಗಸ್ಟ್ ತಿಂಗಳು ಬಂತೆಂದರೇ…. ಭಾರತೀಯರಿಗೆಲ್ಲರಿಗೂ ಹಬ್ಬದ ಸಂಭ್ರಮ. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ದೇಶದೆಲ್ಲಡೆ ತುಳುಕಾಡುತ್ತಿರುತ್ತದೆ! ‘ಸ್ವಾತಂತ್ರ್ಯ’ ಎನ್ನುವ ಪದದ ಅರ್ಥ ತಿಳಿಯದ ನಮಗೆ, ನಮ್ಮ ನಾಡಿನಲ್ಲಿ, ನಮ್ಮ ಊರಿನಲ್ಲಿ, ನಮ್ಮ ಮನೆಯಲ್ಲಿ, ಬೇಕಾದ್ದನ್ನು ತಿನ್ನುವ, ಬೇಕಾದ್ದನ್ನು ತೊಡುವ, ಬೇಕಾದ್ದನ್ನು ಓದುವ, ಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಎಲ್ಲಿಂದ ಬಂತು?, ಅಷ್ಟೇ ಏಕೆ, ಮಹಿಳೆಯರ ಮೇಲೆ, ಅಪ್ರಾಪ್ತ ಬಾಲಕಿಯರ ಮೇಲೆ, ಮುದುಕಿಯರ ಮೇಲೆ ಅತ್ಯಾಚಾರ ಮಾಡುವಷ್ಟು ಸ್ವೇಚ್ಛೆ ಕೂಡ ಎಲ್ಲಿಂದ ಬಂತು ಎನ್ನುವುದನ್ನು ಒಂಚೂರು ಇತಿಹಾಸ ಪುಟ ತೆಗೆದು ನೋಡಿದರೇ ತಿಳಿಯುತ್ತದೆ. ಗಾಂಧೀಜಿ ನಮಗೆಲ್ಲಾ ಸ್ವಾತಂತ್ರ್ಯ ಕೊಡಿಸಿ ರಾಷ್ಟ್ರಪಿನಂತೂ ಆದರು! ಮಾರನೇ ವರ್ಷಕ್ಕೆ ನಮ್ಮವರಿಂದಲೇ ಹತ್ಯೆಗೊಳಗಾದರು. ಇದೂ ಕೂಡ ನಮಗೆ ದೊರೆತ ಸ್ವಾತಂತ್ರ್ಯಕ್ಕೆ ನಾವೇ ಕಂಡುಕೊಂಡ ವಿಪರ್ಯಾಸ.

ಕೇವಲ ಎಪ್ಪತ್ತೆರಡು ವರ್ಷಗಳ ಹಿಂದೆ ನಾವೆಲ್ಲಾ, ಅಂದರೇ ಭಾರತೀಯರೆಲ್ಲಾ, ಬ್ರಿಟಿಷ್ ಗುಲಾಮಗಿರಿಯಲ್ಲಿ, ಸ್ವತಂತ್ರವಾಗಿ ಉಸಿರಾಡುವ ಹಕ್ಕಿಲ್ಲದೇ ನಲುಗುತ್ತಿದ್ದೆವು. ಈ ಬಂಧನದಿಂದ ಮುಕ್ತಗೊಳಿಸಿ ನಮ್ಮೆಲ್ಲರ ಜೀವನವನ್ನು ಹಸನಾಗಿಸಲು ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಆಲೋಚನೆ, ಸಾಮರ್ಥ್ಯಕ್ಕನುಸಾರವಾಗಿ ಹೋರಾಡುವುದರ ಮೂಲಕ ತ್ಯಾಗ ಬಲಿದಾನಗಳನ್ನು ಮಾಡಿ ಮಣ್ಣಲ್ಲಿ ಮಣ್ಣಾಗಿದ್ದಾರೆ.

ಹೀಗೇ, ಸ್ವತಂತ್ರ ಚಳುವಳಿ ಕಾವೇರುವ ಸಮಯದಲ್ಲಿ ದಕ್ಷಿಣ ಆಫ್ರಿಕಾದಿಂದ ಬ್ಯಾರಿಸ್ಟರ್ ಪದವಿ ಮುಗಿಸಿ ಬಂದಿದ್ದ ಮೋಹನ್ ದಾಸ್ ಕರಮ್ ಚಂದ್ ಗಾಂಧಿಯವರು ದೇಶದಲ್ಲಿನ ಗುಲಾಮಗಿರಿಯನ್ನು ನೋಡಿ, ದೇಶದ ಸ್ವಾತಂತ್ರ್ಯದ ವಿಚಾರವಾಗಿ ಇಡೀ ದೇಶದ ದ್ದಗಲಕ್ಕೂ ಸಂಚರಿಸಿ, ಅಂದಿನ ನಮ್ಮ ದೇಶ ಭಾಂಧವರ ವಸ್ತುವಿಷ್ಠ ಸ್ಥತಿಗತಿಗಳನ್ನು ಅರಿತರು. ಅವರ ಈ ಸಂಚಾರದ ಮೂಲಕ ದೇಶವಾಸಿಗಲ ಪರಿಸ್ಥಿತಿಯನ್ನು ಅವಲೋಕಿಸಿ, ನಮ್ಮ ನಾಡಿನ ಜನರ ಮುಕ್ತ ಬದುಕಿಗೋಸ್ಕರ, ಇಡೀ ಜೀವನವನ್ನು ಮುಡುಪಾಗಿಟ್ಟರು. ನಂತರ ಸತ್ಯ, ಅಹಿಂಸೆ, ಶಾಂತಿ ಮಾರ್ಗವನ್ನನುಸರಿಸಿ, ಅಖಂಡ ಭಾರತದ ನಾಯಕತ್ವವಹಿಸಿಕೊಂಡು ಯುವಕರನ್ನೂ, ಮಹಿಳೆಯರನ್ನೂ, ದೇಶದ ಎಲ್ಲಾ ಪ್ರಜೆಗಳನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದರು.

‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’(ಕ್ವಿಟ್ ಇಂಡಿಯಾ ಚಳುವಳಿ) ಆಂದೋಲನವನ್ನು ಆಯೋಜಿಸಿ, 1947 ಆಗಸ್ಟ್ 15ರಂದು ನಾಡಿಗೆ ತಮ್ಮ ನಾಯಕತ್ವದಲ್ಲಿ ಸ್ವಾತಂತ್ರ್ಯ ತಂದುಕೊಡುವುದರ ಮೂಲಕ ನಾಡಿನ ಜನಮಾನಸದಲ್ಲಿ ಮಹಾತ್ಮರಾಗಿ, ರಾಷ್ಟ್ರಪಿತರಾಗಿ ಚಿರಂಜೀವಿಯಾಗಿದ್ದಾರೆ.

‘ಭೋಲೋ ಮಹಾತ್ಮ ಗಾಂಧೀಕಿ ಜೈ’

Tags

Related Articles