ಸುದ್ದಿಗಳು

ಫ್ಯಾನ್ ಬಾಯ್ ಮೊಮೆಂಟ್: ಲೆಜೆಂಡರಿ ಕ್ರಿಕೆಟಿಗನನ್ನು ಭೇಟಿಯಾದ ಸೂಪರ್ ಸ್ಟಾರ್!!!

ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಈಗ ಯುರೋಪ್ನಲ್ಲಿ ರಜಾದಿನವನ್ನು ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಮಹೇಶ್ ಬಾಬು ಅವರು ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2019 ಪಂದ್ಯವನ್ನು ಆನಂದಿಸಿದರು. ಮಹೇಶ್ ಬಾಬು, ಪುತ್ರ ಗೌತಮ್ ಮತ್ತು ಪತ್ನಿ ನಮ್ರಾತಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ಪಂದ್ಯದಿಂದ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದರು.

Related image

 

ವಿಶ್ವಕಪ್‌ ನ ಭಾರತ ಮತ್ತು ಆಸ್ಟ್ರೇಲಿಯಾ ಲೀಗ್ ಪಂದ್ಯವನ್ನು ಮಹೇಶ್ ಬಾಬು ವೀಕ್ಷಿಸಿದರು ಎಂಬ ಸುದ್ದಿ ತಿಳಿದಿದೆ. ಇದೇ ಸಂದರ್ಭದಲ್ಲಿ ಮಹೇಶ್ ಬಾಬು ವಿವಿಧ ದೇಶಗಳ ಇಬ್ಬರು ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ ಮತ್ತು ಇತ್ತೀಚಿಗೆ ವೆಸ್ಟ್ ಇಂಡೀಸ್ನ ಪ್ರಸಿದ್ಧ ಕ್ರಿಕೆಟಿಗ ಆಂಡಿ ರಾಬರ್ಟ್ಸ್ ಅವರೊಂದಿಗೆ ಫೋಟೋ ತೆಗೆದುಕೊಂಡಿದ್ದು, ಅದನ್ನು ಇನ್ಸ್ಟಾಗ್ರಾಂನನಲ್ಲಿ ಹಂಚಿಕೊಂಡಿದ್ದಾರೆ..

“ಆಂಡ್ರೆ ರಾಬರ್ಟ್ಸ್ … ಒಂದು ದೊಡ್ಡ ಫ್ಯಾನ್ ಬಾಯ್ ಮೊಮೆಂಟ್  “ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮಾಜಿ ವೇಗದ ಬೌಲರ್ ಆಂಡಿ ರಾಬರ್ಟ್ಸ್ ಅವರೊಂದಿಗೆ ನೋಟಿ ಖುಷಿ ವ್ಯಕ್ತ ಪಡಿಸಿದ್ದಾರೆ..

View this post on Instagram

 

With the legend himself… Andy Roberts… huge fanboy moment 😎😎😎

A post shared by Mahesh Babu (@urstrulymahesh) on

ಮೊದಲ ಪಂದ್ಯದಲ್ಲಿಯೇ ಭರ್ಜರಿ ಜಯ ತಮ್ಮದಾಗಿಸಿಕೊಂಡ ಕಿಚ್ಚ ಸುದೀಪ್ ತಂಡ

#maheshbabu #maheshbabumovie #maheshbabucricekter #maheshbabumeetsroberts

Tags