ಸುದ್ದಿಗಳು

ಟ್ರಾಫಿಕ್ ರೂಲ್ಸ್ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿದ ಮಹೇಶ್ ಬಾಬು: ವಿಡಿಯೋ ವೈರಲ್

ಟಾಲಿವುಡ್ ನಟ ಮಹೇಶ್ ಬಾಬು ಅಭಿನಯದ ‘ಭರತ್ ಅನೆ ನೇನು’ ಚಿತ್ರವು ನೋಡುಗರಿಂದ ಮೆಚ್ಚುಗೆ ಪಡೆಯುವುದರೊಂದಿಗೆ ಬಾಕ್ಸ್ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿತು. ಈ ಚಿತ್ರದಲ್ಲಿ ಮುಖ್ಯಮಂತ್ರಿಯಾಗುವ ನಾಯಕ ನಟ  ತೆಗೆದುಕೊಳ್ಳುವ ಕೆಲವು ನಿಯಮಗಳು ಚರ್ಚೆಗೆ ಗ್ರಾಸವಾಗಿದ್ದವು.

ಹೌದು, ಈ ಚಿತ್ರದಲ್ಲಿ ನಾಯಕ ನಟ, ‘ಸಂಚಾರ ಉಲ್ಲಂಘನೆ ಮಾಡಿದವರಿಗೆ ಅತಿ ಹೆಚ್ಚು ದಂಡ ಹಾಕುವಂತೆ’ ಆದೇಶಿಸುತ್ತಾರೆ. ಅದರಂತೆ ಟ್ರಾಫಿಕ್‌ ರೂಲ್ಸ್‌ ಗಳನ್ನು ಬದಲಾಯಿಸಿ ಸಿಕ್ಕಾಪಟ್ಟೆ ದಂಡ ಹಾಕುತ್ತಾರೆ. ಅಚ್ಚರಿಯೆಂದರೆ ಇದರ ಪ್ರೇರಣೆಯಿಂದಲೇ ಕೇಂದ್ರ ಸರಕಾರ ಜಾರಿಗೆ ತಂದಿದೆ ಎಂಬ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬಂದಿದ್ದವು.

ಸದ್ಯ ಈ ಚಿತ್ರದಲ್ಲಿನ ನಟ ಮಹೇಶ್ ಬಾಬು ತೆಲುಗು ಸಂಭಾಷಣೆಗಳನ್ನು ಕನ್ನಡಕ್ಕೆ ಅನಿಲ್ ಕುಮಾರ್ ಎನ್ನುವವರು ಡಬ್ ಮಾಡಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಕಾಮೆಂಟ್ ಗಳು ಹರಿದು ಬರುತ್ತಿವೆ.

 

#mahesh babu  #maheshbabuMovie #Bharatanenenu  #TrafficRools #sandalwoodmovies  ‍#kannadasuddigalu

Tags