ಸುದ್ದಿಗಳು

ಪ್ರಿನ್ಸ್ ಮಹೇಶ್, ಚಿರಂಜೀವಿ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಜೂ.ಎನ್ ಟಿಆರ್

ಹೈದ್ರಾಬಾದ್, ಜ.18:

ಟಾಲಿವುಡ್ ನ ಪ್ರಸಿದ್ಧ ನಟ ಜೂನಿಯರ್ ಎನ್ ಟಿಆರ್ ಇದೀಗ ಮೆಘಾಸ್ಟಾರ್ ಚಿರು ಹಾಗೂ ಸೂಪರ್ ಸ್ಟಾರ್ ಮಹೇಶ್ ಅವರ ದಾರಿಯನ್ನೇ ಫಾಲೋ ಮಾಡುತ್ತಿದ್ದಾರೆ.  ಈ ಹಿಂದೆ ಮೆಘಾಸ್ಟಾರ್ ಚಿರು ಹಾಗೂ ಪ್ರಿನ್ಸ್ ಮಹೇಶ್ ಅನುಸರಿಸಿದ ದಾರಿಯನ್ನು ಇದೀಗ ತಾರಕ್ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದ್ದು.  ಅರೆ ಇದೇನಪ್ಪಾ ಎನ್ನುತ್ತಿದ್ದೀರಾ. ಹಾಗಾದರೆ ಈ ಸ್ಟೋರಿ ನೋಡಿ.

ಅಕ್ಕಿನೇನಿ ಅಖಿಲ್ ಮೊದಲ ಚಿತ್ರದ ಆಡಿಯೋ ಲಾಂಚ್ ನಲ್ಲಿ ಮಹೇಶ್ ಬಾಬು

ಅಕ್ಕಿನೇನಿ ಅಖಿಲ್ ಅವರ ಮೊದಲ ಚಿತ್ರ ‘ಅಖಿಲ್’ ಚಿತ್ರದ ಆಡಿಯೋ ಲಾಂಚ್ ಗೆ ಪ್ರಿನ್ಸ್ ಮಹೇಶ್ ಬಾಬು ಭಾಗವಹಿಸಿದ್ದರು. ಚಿತ್ರ ಬಾಕ್ಸ್ ಆಫೀಸ್ ನಲ್ಲಿ  ಸೋತು ಹೋಯ್ತು. ಅಂದಹಾಗೆ ಮಹೇಶ್ ಬಾಬು ಅಖಿಲ್ ಚಿತ್ರದ ಆಡಿಯೋ ಲಾಂಚ್  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಕಾರಣವೂ ಇದೆ. ಮಹೇಶ್ ಬಾಬು ಅವರ ಟಾಲಿವುಡ್ ಮೊದಲ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನಾಗಾರ್ಜುನ್ ಅವರು ಪಾಲ್ಗೊಂಡು ಚಿತ್ರತಂಡಕ್ಕೆ ಶುಭಕೋರಿದ್ದರು. ಹೀಗಾಗಿ ಮಹೇಶ್ ಬಾಬು ನಾಗಾರ್ಜುನ್ ಅವರ ಪುತ್ರನ ಮೊದಲ ಚಿತ್ರದ ಆಡಿಯೋ ಲಾಂಚ್ ನಲ್ಲಿ ಪಾಲ್ಗೊಂಡಿದ್ದರು. ಇನ್ನೂ ಅಖಿಲ್ , ಮೆಘಾಸ್ಟಾರ್ ಚಿರಂಜೀವಿ ಅವರ ಕುಟುಂಬದಲ್ಲಿ ಚರಣ್ ಅವರ ಕಿರಿಯ ಸಹೋದರ ಎಂದೇ ಗುರುತಾಗಿದ್ದಾರೆ. ಅಖಿಲ್ ಅವರ ‘ಹೆಲೋ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಚಿರಂಜೀವಿ ಪಾಲ್ಗೊಂಡಿದ್ದರು.ಅಖಿಲ್ ಕೂಡ ಚಿರಂಜೀವಿ ಅವರನ್ನು ಪೆದ್ದ ನಾನಾ ಗಾರು ಎಂದೇ ಸಂಭೋದಿಸುತ್ತಾರೆ. ಅಖಿಲ್ ಅವರ ಮತ್ತೊಂದು ಚಿತ್ರ ‘ಮಿ.ಮಜ್ನು’  ಸದ್ಯದಲ್ಲೇ ರಿಲೀಸ್ ಆಗಲಿದೆ. ಜನವರಿ 19ರಂದು ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜೂನಿಯರ್ ಎನ್ ಟಿಆರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಂದಹಾಗೆ ಜೂನಿಯರ್ ಎನ್ ಟಿಆರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣವೂ ಇದೆ. ಇದೇ ಕಾರಣಕ್ಕಾಗಿ ನಾವು ಹೇಳುತ್ತಿರುವುದು  ಎನ್ ಟಿಆರ್ ರವರು ಮಹೇಶ್ ಬಾಬು ಹಾಗೂ ಚಿರಂಜೀವಿ ಅವರ ಮಾರ್ಗವನ್ನು ಅನುಸರಿಸುತ್ತಿದ್ದಾರೆಂದು.  ಈ ಹಿಂದೆ ಓಪಿರಿ ಚಿತ್ರದಲ್ಲಿ ತಾರಕ್ ಹಾಗೂ ನಾಗ ಜೊತೆಯಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಇದೀಗ ಅಭಿಮಾನಿಗಳು ಈ ಇಬ್ಬರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಜೊತೆಯಾಗಿ ನೋಡುವ ಅವಕಾಶ ಒದಗಿ ಬಂದಿದೆ.

#juniorntr #tollywood #telugumovies #balkaninews #maheshbabuandchiranjeevi #juniorntrandnagarjuna

Tags