ಸುದ್ದಿಗಳು

ಮನೆಯಲ್ಲಿ ವಿಲನ್ ಆಗಿದ್ದಾರಂತೆ ಮಹೇಶ್ ಪತ್ನಿ ನಮ್ರತಾ

ತಮ್ಮ ಪ್ರೀತಿಯ ಕಥೆ ಹೇಳಿದ ಮಹೇಶ್ ಪತ್ನಿ ನಮ್ರತಾ

ಹೈದ್ರಾಬಾದ್, ಫೆ.12:

ನಮ್ರತಾ ಶಿರೋಡ್ಕರ್. ಮಿಸ್ ಇಂಡಿಯಾ ವಿಜೇತ ಸುಂದರಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಧರ್ಮಪತ್ನಿಯೂ ಹೌದು. ಇವರಿಬ್ಬರದ್ದು ಅನ್ಯೋನ್ಯ ದಾಂಪತ್ಯ. ವಂಶಿ ಚಿತ್ರದಲ್ಲಿ ತೆರೆ ಮೇಲೆ ರೋಮ್ಯಾನ್ಸ್ ಮಾಡಿದ ಈ ಜೋಡಿಯ ಮಧ್ಯೆ ಅರಳಿದ ಪ್ರೀತಿ ದಾಂಪತ್ಯದವರೆಗೂ ಮುಂದುವರೆದು ಇದೀಗ ಇವರ ಪ್ರೀತಿಗೆ ದ್ಯೋತಕವಾಗಿ ಇಬ್ಬರು ಮಕ್ಕಳಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿ 14 ವರ್ಷ ಕಳೆದಿದೆ.

14ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಜೋಡಿ ಇತ್ತೀಚೆಗೆ ಹೈದ್ರಾಬಾದ್ ನ  ದೇವನೂರ್ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳೊಂದಿಗೆ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಅನ್ನದಾನವನ್ನು ಏರ್ಪಡಿಸಿತ್ತು. ಈ ನಡುವೆ ತಮ್ಮ 14 ವರ್ಷದ ಪ್ರೀತಿ-ಪ್ರೇಮದ ಕುರಿತಂತೆ ಮಾತನಾಡಿರುವ ನಮ್ರತಾ, ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮೊದಲು ಪ್ರೀತಿಯಲ್ಲಿ ಬಿದ್ದಿದ್ದು ಯಾರು…?

ನಮ್ರತಾ ಹಾಗೂ ಮಹೇಶ್ ಬಾಬು ‘ವಂಶಿ’ ಚಿತ್ರದಲ್ಲಿ ಜೊತೆಯಾಗಿ ತೆರೆಹಂಚಿಕೊಂಡ ನಂತರ ಇವರಿಬ್ಬರ ನಡುವೆ ಅರಳಿದ ಸ್ನೇಹ ಪ್ರೀತಿಗೆ ಪರಿವರ್ತನೆಯಾಗಿತ್ತು. ಇವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಇವರಿಬ್ಬರಿಗೂ ತಿಳಿದಿದ್ದರೂ ಯಾರು ಮೊದಲು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು ಎಂಬ ಬಗ್ಗೆ ನಮ್ರತಾ ಹೇಳಿಕೊಂಡಿದ್ದಾರೆ.

‘ವಂಶಿ’ ಚಿತ್ರದ ಚಿತ್ರೀಕರಣಕ್ಕಾಗಿ ನಾವು ನ್ಯೂಜಿಲೆಂಡ್ ಗೆ ತೆರಳಿದ್ದೇವು. 25 ದಿನಗಳ ಶೂಟಿಂಗ್ ಅದು. ನಾನು ಸಾಮಾನ್ಯವಾಗಿ ಔಟ್ ಡೋರ್ ಶೂಟಿಂಗ್ ಗಾಗಿ ಹೆಚ್ಚು ದಿನಗಳ ಕಾಲ ಕಳೆಯುವುದಿಲ್ಲ. ಮಹೇಶ್ ಬಾಬು ಸಿಕ್ಕಾಪಟ್ಟೆ ನಾಚಿಕೆ ಸ್ವಾಭಾವದ ವ್ಯಕ್ತಿಯ ಅವರು ಹೆಚ್ಚಾಗಿ ಯಾರೊಂದಿಗೂ ಮಾತನಾಡುವುದಿಲ್ಲ. ಆದರೆ ನನ್ನೊಂದಿಗೆ ಕೊಂಚ ಆರಾಮವಾಗಿ ಮಾತನಾಡುತ್ತಿದ್ದರು. ಹೀಗಾಗಿ ನಮ್ಮಿಬ್ಬರ ನಡುವೆ ಉತ್ತಮ ಗೆಳೆತನ ಬೆಳೆಯಿತು. ನ್ಯೂಜಿಲ್ಯಾಂಡ್ ನಿಂದ ವಾಪಾಸ್ಸಾದ ಬಳಿಕ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂಬುದು ನಮಗೆ ತಿಳಿಯಿತು.

ನನಗನಿಸುವ ಪ್ರಕಾರ ನಾನೇ ಅವರಿಗೆ ಮೊದಲು ಪ್ರೇಮ ನಿವೇದನ ಮಾಡಿಕೊಂಡೆ ಎಂದು ನೆನಪಿಸಿಕೊಂಡಿರುವ ನಮ್ರತಾ. ಅಮೇಲೆ ಖಚಿತವಾಗಿ ಇಲ್ಲ ನಾನೇ ಮೊದಲು ಪ್ರೀತಿಯನ್ನು ನಿವೇದಿಸಿಕೊಂಡೆ ಎಂದಿದ್ದಾರೆ.  ’.  ಇದಕ್ಕೆ ಮಹೇಶ್ ಅವರ ಪ್ರತಿಕ್ರಿಯೆ ಏನಾಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ನಮ್ರತಾ, ನಾನು ಅವರಿಗೆ ಫೋನ್ ನಲ್ಲಿ ಪ್ರಪೋಸ್ ಮಾಡಿದ್ದೆ. ನಾವು ಪರಸ್ಪರ ತುಂಬಾ ದೂರವಿದ್ದ ಕಾರಣ ಅವರ ಪ್ರತಿಕ್ರಿಯೆ ನೋಡಲು ನನಗೆ ಸಾಧ್ಯವಾಗಲಿಲ್ಲ. ಆದರೆ ನಾನು ಪ್ರಫೋಸ್ ಮಾಡುವ ಸಮಯದಲ್ಲಿ ಅವರು ಕೂಡ ಪ್ರೀತಿಯಲ್ಲಿ ಬಿದ್ದಿದ್ದರು. ನನ್ನ ಬಗ್ಗೆ ಅವರಿಗೂ ಸಂಪೂರ್ಣ ಗೊತ್ತಾಗಿತ್ತು. ಪ್ರೀತಿಯ ನಿವೇದನೆ ಬಳಿಕ ನಾವಿಬ್ಬರು ಮದುವೆಯಾಗುವ ತೀರ್ಮಾನಕ್ಕೆ ಬಂದೆವು ಎಂದಿದ್ದಾರೆ ನಮ್ರತಾ.

ಪ್ರೀತಿಯಲ್ಲಿ ಬಿದ್ದ ನಂತರ ನೀವು ಯಾಕೆ ಮದುವೆಯಾಗಲು ನಾಲ್ಕು ವರ್ಷಗಳ ಕಾಲ ಕಾದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಒಪ್ಪಿಕೊಂಡ ಎಲ್ಲಾ ಚಿತ್ರಗಳನ್ನು ಮುಗಿಸಬೇಕಿತ್ತು. ‘ವಂಶಿ’ ಚಿತ್ರ ಮಹೇಶ್ ಅವರ ಮೂರನೇ ಚಿತ್ರವಾಗಿತ್ತು. ಅವರ ಸಿನಿ ಪಯಣ ಆಗಷ್ಟೇ ಆರಂಭವಾಗಿತ್ತು. ಹೀಗಾಗಿ ಮುಂದಿನ ಹಂತಕ್ಕೆ ಹೋಗುವ ಮೊದಲು ಕೊಂಚ ಯೋಚಿಸಬೇಕಿತ್ತು. ನಾನು ಕೂಡ ಕೆಲವೊಂದು ಚಿತ್ರಗಳಿಗೆ ಸಹಿ ಹಾಕಿದ್ದೆ. ಹೀಗಾಗಿ ಕೆಲವು ಸಮಯವನ್ನು ತೆಗೆದುಕೊಂಡು ಭವಿಷ್ಯದ ಬಗ್ಗೆ ಚೆನ್ನಾಗಿ ಪ್ಲಾನ್ ಮಾಡಿ ನಿರ್ಧಾರಕ್ಕೆ ಬರಬೇಕಿತ್ತು ಎಂದವರು ಹೇಳಿದ್ದಾರೆ.

ಇದೇ ವೇಳೆ ಮಹೇಶ್ ಹಾಗೂ ನನ್ನ ನಡುವೆ ಇದುವರೆಗೂ ಯಾವುದೇ ಸಮಸ್ಯೆ ಬಂದಿಲ್ಲ. ಮಹೇಶ್ ಅವರ ವೃತ್ತಿಪರ ಜೀವನದಲ್ಲಿ ನಾನು ಮೂಗುತೂರಿಸುವುದಿಲ್ಲ. ಆದರೆ ಪೋಷಕರಾಗಿ ನಾನು ಮಕ್ಕಳಿಗೆ ತುಂಬಾ ಶಿಸ್ತಿನಿಂದ ವರ್ತಿಸುತ್ತೇನೆ. ಹೀಗಾಗಿ ನಾನು ನಮ್ಮ ಮನೆಯಲ್ಲಿ ಒಂಥಾರ ವಿಲನ್ ಎಂದು ಜೋರಾಗಿ ನಗುತ್ತಾರೆ ನಮ್ರತಾ.

ವೈರಲ್ ಆಯ್ತು ಮಹೇಶ್ ಬಾಬುರವರ ಈ ಎರಡು ಫೋಟೋ…!!!

#maheshbabu #namrathashirodkar #balkaninews #maheshbabuinstagram #namrathashirodkarmovies

Tags