ಸುದ್ದಿಗಳು

ಮಹೇಶ್ ಗೆ ನೋ ಎಂದ ರಶ್ಮೀಕಾ ಮಂದಣ್ಣ

ಹೈದ್ರಾಬಾದ್, ಮಾ.20:

ಮಹೇಶ್  ಬಾಬು ಅವರ ಬಹುನಿರೀಕ್ಷಿತ ಹಾಗೂ 26 ನೇ ಸಿನಿಮಾದಲ್ಲಿ ನಟಿಸಲು ನಟಿ ಸಾಯಿಪಲ್ಲವಿಗೆ ಆಹ್ವಾನ ನೀಡಲಾಗಿತ್ತು. ಆದರೆ ಮಹೇಶ್ ಬಾಬು ಅವರ ಅಭಿಮಾನಿಗಳ ಟ್ರೋಲ್ ನಿಂದಬೇಸತ್ತ ಸಾಯಿಪಲ್ಲವಿ, ಚಿತ್ರಕ್ಕ ನೋ ಎಂದಿದ್ದಾರೆ. ಇದಾದ ಬಳಿಕ ಇದೀಗ ಸಾಯಿಪಲ್ಲವಿ ನಿರ್ಗಮನವಾಗಿದ್ದರಿಂದ ಆ ಜಾಗಕ್ಕೆ ಮತ್ತೊಬ್ಬ ಹಿರೋಯಿನ್ ನ ಹುಡುಕಾಟದಲ್ಲಿ ತೊಡಗಿರುವ ನಿರ್ಮಾಪಕರು, ರಶ್ಮಿಕಾ ಮಂದಣ್ಣ ಅವರನ್ನು ಅಪ್ರೋಚ್ ಮಾಡಿದ್ದರು. ಅಚ್ಚರಿ ಎಂಬಂತೆ ಇದೀಗ ‘ಗೀತ ಗೋವಿಂದಂ’ ನಟಿ ಚಿತ್ರಕ್ಕೆ ನೋ ಎಂದಿದ್ದಾರೆ.

ಕಾರಣ ಇಷ್ಟೇ

ಅಂದಹಾಗೆ ರಶ್ಮೀಕಾ ಮಂದಣ್ಣ ಮಹೇಶ್ ಬಾಬು ಅವರ 26ನೇ ಚಿತ್ರಕ್ಕೆ ನೋ ಎನ್ನಲು ಕಾರಣ ಇಷ್ಟೇ. ರಶ್ಮೀಕಾ ಕೈಯಲ್ಲಿ ಬಹಳಷ್ಟು ಸಿನಿಮಾಗಳಿದ್ದು, ಕನ್ನಡ ಹಾಗೂ ತೆಲುಗು ಎರಡು ಚಿತ್ರರಂಗದಿಂದಲ್ಲೂ ಬಹಳಷ್ಟು ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿದ್ದು ಹೀಗಾಗಿ ಮಹೇಶ್ ಬಾಬು ಅವರ 26ನೇ ಚಿತ್ರಕ್ಕ ಸಮಯ ಹೊಂದಿಸಲು ನಟಿಗೆ ಸಾಧ್ಯವಾಗುತ್ತಿಲ್ಲವಂತೆ. ಹೀಗಾಗಿ ಅವರು ಮಹೇಶ್ ಬಾಬುಗೆ ನೋ ಎಂದಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಚಿತ್ರದಲ್ಲಿನ ಪಾತ್ರವೊಂದರಲ್ಲಿ ಅಭಿನಯಿಸುವಂತೆ ನಟ ಉಪೇಂದ್ರ ಅವರಿಗೂ ನಿರ್ಮಾಪಕರು ಮನವಿ ಮಾಡಿದ್ದಾರಂತೆ. ಆದರೆ ಚಿತ್ರಕಥೆ ಇಷ್ಟವಾಗದ ಹಿನ್ನೆಲೆಯಲ್ಲಿ ಉಪ್ಪಿ ಕೂಡ ಚಿತ್ರಕ್ಕೆ ನೋ ಎಂದಿದ್ದಾರಂತೆ.

ಇನ್ನೂ ಮಡಿಕೇರಿಯ ಬ್ಯೂಟಿ ರಶ್ಮಿಕಾ  ‘ಡಿಯರ್ ಕಾಮ್ರೆಡ್’ ಚಿತ್ರದ ಬಿಡುಗಡೆಯ ಸಿದ್ದತೆಯಲ್ಲಿದ್ದು, ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಜೂನಿಯರ್ ಶ್ರೀದೇವಿಯಾದರು ‘ಚಿಟ್ಟೆ’ ಹರ್ಷಿಕಾ ಪೂಣಚ್ಚ

#rashmikamandanna #maheshbabu #maheshbabuandrashmikamandanna #tollywood #balkaninews

Tags