ಸುದ್ದಿಗಳು

ಕುಟುಂಬದೊಂದಿಗೆ ಸೂಪರ್‌ ಸ್ಟಾರ್‌‌‌ ಜಾಲಿ ಟ್ರಿಪ್!

ಸಿನಿಮಾ ನಟ/ನಟಿಯರು ಹಾಗು  ಸೆಲೆಬ್ರೆಟಿಗಳು ತಮ್ಮ ಶೂಟಿಂಗ್ ನಡುವೆ ಕುಟುಂಬದೊಂದಿಗೆ ಜಾಲಿಯಾಗಿ ಕಾಲ ಕಳೆಯಲು ಬೇಕಾದ ಸಮಯ ಸಿಗುವುದು ಕಷ್ಟವೇ ಸರಿ! ಅದರಲ್ಲೂ ಸ್ವಲ್ಪ ಸಮಯ ಸಿಕ್ಕರೆ ಸಾಕು ಕುಟುಂಬದೊಂದಿಗೆ ಕಾಲ ಕಳೆಯಲು ಎಲ್ಲರೂ ಕಾತುರರಾಗಿರುತ್ತಾರೆ.

ಟಾಲಿವುಡ್ ನಲ್ಲಿ ಬಾರೀ ನಿರೀಕ್ಷೆ ಹುಟ್ಟಿಸಿರುವ ‘ಭರತ್ ಅನೇ ನೇನು’ ಸಿನಿಮಾದ ಶೂಟಿಂಗ್‌‌, ಡಬ್ಬಿಂಗ್ ಎಂದು ಇದುವರೆಗೂ ಬ್ಯುಸಿ ಇದ್ದ ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಈಗ ಕುಟುಂಬ ಸದಸ್ಯರಿಗಾಗಿ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಮ್ಮರ್ ಟ್ರಿಪ್ ಗಾಗಿ ಪ್ಯಾರಿಸ್‌‌‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಭರತ್ ಅನೇ ನೇನು’ ಬರುವ  ಏಪ್ರಿಲ್ 20 ರಂದು ಪ್ರಪಂಚದಾದ್ಯಂತ ತೆರೆ ಕಾಣಲಿದ್ದು ಅಭಿಮಾನಿಗಳಲ್ಲಿ ಅತಿಯಾದ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಕೆಲಸ ಮುಗಿಸಿಕೊಂಡ ಮಹೇಶ್ ಬಾಬು ಪ್ಯಾರೀಸ್‌ ನಲ್ಲಿ ಜಾಲಿಯಾಗಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಪೋಟೋಗಳನ್ನು ಪ್ರಿನ್ಸ್ ಮಹೇಶ್ ಬಾಬು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಜಾಲಿ ಟ್ರಿಪ್ ನಂತರ ಸೂಪರ್ ಸ್ಟಾರ್ ‘ಭರತ್ ಅನೇ ನೇನು’ ಸಿನಿಮಾ ಪ್ರಮೋಶನ್‌‌‌‌‌ನಲ್ಲಿ ತೊಡಗಲಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.

Tags