ಸುದ್ದಿಗಳು

ಅಭಿಮಾನಿಯ ಕುಂಚದಲ್ಲಿ ಅರಳಿತು ಪ್ರಿನ್ಸ್ ನ ಮುದ್ದಾದ ಚಿತ್ತಾರ

ಹೈದ್ರಾಬಾದ್, ಮಾ.21:

ತಮ್ಮ ನೆಚ್ಚಿನ ನಟ – ನಟಿಯನ್ನು ನೋಡುವಾಸೆ, ಅವರ ಜೊತೆ ಮಾತನಾಡುವಾಸೆ, ಅವರಿಗೆ ತಮ್ಮ ಅಭಿಮಾನವನ್ನು ತಿಳಿಸುವಾಸೆ ಎಲ್ಲ ಅಭಿಮಾನಿಗಳಿಗೂ ಇದ್ದೇ ಇರುತ್ತದೆ. ಹೀಗಾಗಿ ಬಹಳಷ್ಟು ಬಾರಿ ನಟರ ಹುಟ್ಟುಹಬ್ಬಕ್ಕೆ ಅಥವಾ ಬೇಕಾದ ಸಮಯದಲ್ಲಿ ಅವರಿಗೆ ಅಭಿಮಾನಿಗಳು ಗಿಫ್ಟ್ ನೀಡುತ್ತಲೇ ಇರುತ್ತಾರೆ. ಇದೀಗ ನಟ ಮಹೇಶ್ ಬಾಬುಗೂ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ ಇವರಿಗೆ ಸುಂದರ ಅದ್ಬುತ ಗಿಫ್ಟ್ ಒಂದು ನೀಡಲಾಗಿದೆ.

ಅಭಿಮಾನಿ ಕೈಯಲ್ಲಿ ಅರಳಿದ ಫೋಟೋ

ಹೌದು, ಸದ್ಯ ಮಹೇಶ್ ಬಾಬುಗೆ ಹುಡುಗರಿಗಿಂತ ಹುಡುಗಿಯರೇ ಫ್ಯಾನ್ಸೇ ಹೆಚ್ಚಾಗಿರುತ್ತಾರೆ. ಯಾಕಂದ್ರೆ ಅವರ ನಟನೆ, ಸರಳತೆ ನೋಡಿದ ಅದೆಷ್ಟೋ ಮಂದಿ ಇವರಿಗೆ ಮನ ಸೋಲದೆ ಇರರು. ಇದೀಗ ಮಹಿಳಾ ಅಭಿಮಾನಿಯೊಬ್ಬರು ಇವರ ಫೋಟೋವನ್ನು ಸ್ಕೆಚ್ ನಲ್ಲಿ ಬಿಡಿಸಿದ್ದಾರೆ. ನಿಜಕ್ಕೂ ಫೋಟೋ ತೆಗೆಸಿದ ರೀತಿಯಲ್ಲೇ ಇದೆ ಈ ಫೋಟೋ.

ಮಹೇಶ್ ಬಾಬು ಫೋಟೋ

ಹೌದು, ಕೀರ್ತಿ ಪ್ರತ್ಯಶ ಎನ್ನುವ ಅಭಿಮಾನಿಯೊಬ್ಬರು ನಟ ಮಹೇಶ್ ಬಾಬು ಅವರ ಫೋಟೋವನ್ನು ಸ್ಕೆಚ್ ಮಾಡಿದ್ದಾರೆ. ಈ ಸ್ಕೆಚ್ ನಿಜಕ್ಕೂ ಫೋಟೋ ತೆಗೆದ ರೀತಿಯಲ್ಲಿಯೇ ಇದೆ. ಇನ್ನೂ ವೈಟ್ ಶರ್ಟ್ ಹಾಕಿರುವ ಸ್ಕೆಚ್ ಮಾಡಿದ್ದಾರೆ ಈ ಅಭಿಮಾನಿ. ಇನ್ನೂ ಮಹೇಶ್ ಬಾಬು ಭೇಟಿ ಮಾಡಿದಾಗ ಈ ಗಿಫ್ಟ್ ನೀಡಬೇಕು ಎಂದುಕೊಂಡಿದ್ದಾರಂತೆ ಈ ಅಭಿಮಾನಿ. ಸದ್ಯ ಈ ಅಭಿಮಾನಿ ಮಾಡಿದ್ದ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

‘ಕನ್ನಡ ಕೋಗಿಲೆ ಸೀಸನ್ 2’ ಗೆ ಬಂದ ಹೊಸ ನಿರೂಪಕಿ ಯಾರು ಗೊತ್ತೆ…?

#balkaninews #maheshbabu #maheshbabusketch #tollywood #telugumovies

Tags