ಸುದ್ದಿಗಳು

ಅದೃಷ್ಟವಶಾತ್ ಪಾರಾದ ಪುಟ್ಟಗೌರಿ ಮಹೇಶ..

ಎದುರಾಳಿ ಟ್ಯೂಬ್ ಲೈಟ್ ನಿಂದ  ಒಡೆಯವ ಪ್ರಸಂಗ

 ಬೆಂಗಳೂರು,ಸೆ.08: ಪುಟ್ಟಗೌರಿ ಧಾರಾವಾಹಿ ಶೂಟಿಂಗ್ ವೇಳೆ ಟ್ಯೂಬ್ ಲೈಟ್ ನಿಂದ ಸ್ಟಂಟ್ ಮಾಡುವ ವೇಳೆ ಅನಾಹುತವೊಂದು ತಪ್ಪಿದ್ದು, ಅದೃಷ್ಟವಶಾತ್ ಪುಟ್ಟಗೌರಿ ಮಹೇಶ್ ಪಾರಾಗಿದ್ದಾರೆ.

ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರಾವಾಹಿ ಯಶಸ್ವಿಯಾಗಿ ಸಾಗುತ್ತಿದೆ. ಸಾಮಾನ್ಯವಾಗಿ ಶೂಟಿಂಗ್ ವೇಳೆ ಸ್ಟಂಟ್ ಮಾಡೋದು ಸಾಮಾನ್ಯ. ಅದರೆಡೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಫಘಾತವಾಗೋದು ಖಚಿತ..

ಕಣ್ಣಿಗೆ ತಾಕಿದ ಟ್ಯೂಬ್ ಲೈಟ್

ಹೀಗೆ ಪುಟ್ಟಗೌರಿ ಮದುವೆ ಧಾರಾವಾಹಿ ಚಿತ್ರೀಕರಣದ ವೇಳೆ ನಾಯಕನಿಗೆ ಎದುರಾಳಿ ಟ್ಯೂಬ್ ಲೈಟ್ ನಿಂದ  ಒಡೆಯವ ಪ್ರಸಂಗ ಒಂದು ಎದುರಾಗುತ್ತೆ. ಈ ವೇಳೆ ಅದನ್ನ ನಾಯಕ ತಡೆಯಬೇಕು. ಈ ವೇಳೆ ಅಕಸ್ಮಾತ್ ಮಹೇಶನಿಗೆ ಟ್ಯೂಬ್ ಲೈಟ್ ಚೂರು ಕಣ್ಣಿಗೆ ತಾಕಬೇಕಿತ್ತು. ಆದರೆ ಅದರ ಗಾಳಿ  ಮಾತ್ರ ಒಳಗೆ ಹೋಗಿದ್ದು, ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.

 

Tags

Related Articles