ಸುದ್ದಿಗಳು

ಟಾಲಿವುಡ್ ಪ್ರಿನ್ಸ್ ಗೆ ಜೋಡಿಯಾಗಲಿರುವ ಕ್ಯಾಟ್!!?!!

ಹೈದರಾಬಾದ್,ಜ.12: ಹೌದು,  ಟಾಲಿವುಡ್ ನಟ , ಮಹೇಶ್ ಬಾಬುೀ ಬಾಲಿವುಡ್ ನಟಿಯೊಂದಿಗೆ ನಟಿಸಲಿದ್ದಾರೆಯಂತೆ..  ಅದು ಕೂಡ ನಟಿ ಕತ್ರಿನಾ ಕೈಫ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆಯಂತೆ. ವರದಿ ಪ್ರಕಾರ ತೆಲುಗು ಚಿತ್ರ ನಿರ್ದೇಶಕ ಸುಕುಮಾರ್ ಈ ಇಬ್ಬರು ಪ್ರಸಿದ್ಧ  ನಟರನ್ನು ಒಂದೇ ಚಿತ್ರದಲ್ಲಿ ತೆರೆ ಮೇಲೆ ತರುವ ಪ್ರಯತ್ನದಲ್ಲಿದ್ದಾರೆ… ಚಿತ್ರದ ಶೀರ್ಷಿಕೆಯು ಇನ್ನೂ ನಿರ್ಧಾರವಾಗಿಲ್ಲ.

ಇನ್ನೂ ಹೆಸರಿಡದ ಚಿತ್ರ

ಚಿತ್ರದ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲವೆಂದು ವರದಿಗಳು ಸೂಚಿಸಿವೆ ಆದರೆ ಮಹೇಶ್ ಬಾಬು ಈಗಾಗಲೇ ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರೆ ಮತ್ತು ಕತ್ರಿನಾ ಓಕೆ ಅನ್ನುವುದು ಒಂದೇ ಬಾಕಿ ಉಳಿದಿದೆ..

Image result for katrina kaif

ಮಹೇಶ್ ಜೊತೆ ಕ್ಯಾಟ್

ಎಲ್ಲಾ  ಅಂದುಕೊಂಡಂತೆ ಆದರೆ ಒಂದು ದಶಕದ ನಂತರವೂ  ಕತ್ರೀನಾ ಮೂರನೇ  ಬಾರಿ ತೆಲುಗು ಚಲನಚಿತ್ರದಲ್ಲಿ ಕಾಣಿಸಲಿದ್ದಾಳೆ. ಕತ್ರಿನಾ ಅವರು ತೆಲುಗು ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ ಜೊತೆ ಮಲ್ಲಿಶ್ವರಿ (2004) ಮತ್ತು ನಂದಮುರಿ ಬಾಲಕೃಷ್ಣ ಜೊತೆಯಲ್ಲಿ ಅಲ್ಲಾರಿ ಪಿಡುಗು (2005) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

#maheshbabu #katrinakaif #balkaninews

Tags