ಸುದ್ದಿಗಳು

‘ಗೀತಾ ಗೋವಿಂದಂ’ ಸಿನಿಮಾ ನೋಡಿ ಮಹೇಶ್ ಬಾಬು ಹಿಂಗಂದ್ರು!!

ಆಂಧ್ರ,ಆ.16: ಹಾಡು ಮತ್ತು ಟೀಸರ್ ಮೂಲಕ ಈಗ ಸದ್ಯ ಬಾರಿ ಸದ್ದು ಮಾಡುತ್ತಿರುವ ಚಿತ್ರ ‘ಗೀತಾ ಗೋವಿಂದಂ’. ಈ ಚಿತ್ರ ಟೀಸರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಗೀತಾ ಮತ್ತು ಗೊವಿಂದ್, ಚಿತ್ರ ನಿನ್ನೆ ತೆರೆಗೆ ಅಪ್ಪಳಿಸಿದೆ. ಗೀತಾ ಗೋವಿಂದಂ, ಟಾಲಿವುಡ್‌ನಲ್ಲಿ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಿನಿಮಾ.. ಟಿಟೌನ್ ಲವ್ಲೀ ಬಾಯ್ ವಿಜಯ್ ದೇವರಕೊಂಡ ಹಾಗೂ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಕಾಂಬಿನೇಶನ್‌ ನಲ್ಲಿ ಸಿನಿಮಾ ಮೂಡಿಬಂದಿದೆ.. ಇದೊಂದು ಪಕ್ಕಾ ಲವ್ ಸ್ಟೋರಿಯ ಚಿತ್ರವಾಗಿದ್ದು, ಚಿತ್ರಕ್ಕೆ ಪುರುಷೋತ್ತಮ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಈ ಚಿತ್ರ ಸಾಕಷ್ಟು ಮೆಚ್ಚುಗೆ ಪಾತ್ರವಾಗಿದ್ದು, ಇದೀಗ ಮೇರು ನಟರು ಕೂಡ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Image result for mahesh babu

ಸಿನಿಮಾ ನೋಡಿ ಹಾಡಿ ಹೊಗಳಿದ ಮಹೇಶ್ ಬಾಬು

ಹೌದು, ಸದ್ಯ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿರೋ ‘ಗೀತಾ ಗೋವಿದಂ’ ಸಿನಿಮಾ ಇದಿಗ ಟಾಲಿವುಡ್ನಲ್ಲಿ ಹವಾ ಕ್ರಿಯೇಟ್ ಮಾಡುತ್ತಾ ಇದೆ. ತೆಲುಗಿನ ಟಾಪ್ ಸ್ಟಾರ್ ಮಹೇಶ್ ಬಾಬು ಚಿತ್ರವನ್ನು ಹಾಗೂ ರಶ್ಮಿಕಾ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ನಿನ್ನೆ ಬಿಡುಗಡೆ ಆಗಿರೋ ಚಿತ್ರವನ್ನು ಮೊದಲನೇ ದಿನವೇ ವೀಕ್ಷಿಸಿದ ಮಹೇಶ್ ಬಾಬು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಗೀತಗೋವಿಂದಂ’ ಚಿತ್ರ ನಿಜಕ್ಕೂ ಗೆದ್ದಿದೆ. ‘ಚಿತ್ರನೋಡಿ ಸಖತ್ ಎಂಜಾಯ್ ಮಾಡಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅಭಿನಯ ಅದ್ಭುತವಾಗಿದೆ. ಇಡೀ ಚಿತ್ರತಂಡಕ್ಕೆ ಶುಭಾಶಯಗಳು’ ಅಂತಾ ತಿಳಿಸಿದ್ದಾರೆ. ಇನ್ನು ಇದಕ್ಕೆ ಕಾಮೆಂಟ್ ಮಾಡಿರೋ ರಶ್ಮಿಕಾ, ‘ತುಂಬಾ ಧನ್ಯವಾದಗಳು. ನಿಮ್ಮಿಂದ ಈ ಮಾತು ಕೇಳಿ ಭಾವಪರವಶಳಾಗಿಬಿಟ್ಟಿದ್ದೀನಿ’ ಅಂತಾ ಪ್ರತಿಕ್ರಿಯಿಸಿದ್ದಾಳೆ.

ಅಂದಹಾಗೆ ಇಲ್ಲಿ ಪ್ರೇಮಿಗಳಾಗಿ ಮಿಂಚಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಿಜಕ್ಕೂ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.. ರಶ್ಮಿಕಾ ಮಾಡ್ರನ್ ಹಾಗೂ ಸಾಂಪ್ರದಾಯಿಕ ಎರಡೂ ಲುಕ್‌ನಲ್ಲೂ ಮಿಂಚಿದ್ದಾಳೆ.. ಇನ್ನು  ಲವರ್ ಬಾಯ್ ಲುಕ್‌ ನಲ್ಲಿರುವ ವಿಜಯ್ ಸಹ ಸಿಕ್ಕಾಪಟ್ಟೆ ಮುದ್ದಾಗಿ ಕಾಣುತ್ತಿದ್ದಾರೆ.. ವಾಸ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿರುವ ಈ ‘ಗೀತಾ ಗೋವಿಂದಂ’ ಚಿತ್ರಕ್ಕೆ ಪರಶುರಾಮ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನೂ ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Tags