ಸುದ್ದಿಗಳು

ಮತ್ತೆ ಹೊಸಬರೊಂದಿಗೆ ಪ್ರೇಮಕಥೆ ಶುರು ಮಾಡಿದ ಮಹೇಶ್ ಬಾಬು

ಹೊಸ ರೀತಿಯ ಪ್ರೇಮಕಥೆ ಚಿತ್ರದಲ್ಲಿದೆ

ಬೆಂಗಳೂರು.ಫೆ.19

‘ಆಕಾಶ್’, ‘ಅರಸು’, ‘ಮೆರವಣಿಗೆ’, ‘ಕ್ರೇಜಿಬಾಯ್’.. ಹೀಗೆ ಈ ಎಲ್ಲಾ ಪ್ರೇಮಮಯ ಚಿತ್ರಗಳನ್ನು ಕೊಟ್ಟವರು ನಿರ್ದೇಶಕ ಮಹೇಶ್ ಬಾಬು. ಕಳೆದ ವರ್ಷ ‘ಅತಿರಥ’ ಚಿತ್ರದ ಮೂಲಕ ವಿಭಿನ್ನ ಸಿನಿಮಾ ಕೊಟ್ಟಿದ್ದ ಅವರು ಈಗ ಮತ್ತೊಮ್ಮೆ ಪ್ರೇಮಮಯ ಚಿತ್ರದೊಂದಿಗೆ ಬಂದಿದ್ದಾರೆ.

ಹೊಸ ರೀತಿಯ ಕಥೆ

ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ಸುಗೇಶ್ ಎಂಬ ನಾಯಕ ನಟನನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಮುಹೂರ್ತವಾಗಿದ್ದು, ನಟಿ ರಕ್ಷಿತಾ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ.

ಇನ್ನು ನಿರ್ದೇಶಕರಿಗೆ ‘ಲಕ್ಕಿಹ್ಯಾಂಡ್’ ಎಂಬ ಇನ್ನೊಂದು ಹೆಸರಿದೆ. ಏಕೆಂದರೆ ಅವರು ಪರಿಚಯಿಸಿದ ಐಂದ್ರಿತಾ ರೈ, ಆಶಿಕಾ ರಂಗನಾಥ್ ಹಿಟ್ ಆಗಿದ್ದಾರೆ. ಅಂತವರು ಪುನಃ ಹೊಸಬರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಅವರು ಪರಿಚಯಿಸುವ ನಾಯಕ-ನಾಯಕಿಗೆ ಯಾವ ರೀತಿ ಅದೃಷ್ಟ ಕೈ ಹಿಡಿಯುತ್ತದೆಯೋ ನೋಡಬೇಕಿದೆ.

ಚಿತ್ರದ ಬಗ್ಗೆ

ನಾಯಕ ಸುಗೇಶ್, ಮಹೇಶ್ ಬಾಬು ಅವರ ಗರಡಿಯಲ್ಲಿ ಪಳಗಿದ್ದು ಸಾಕಷ್ಟು ತಯಾರಿಯೊಂದಿಗೆ ಈ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾಗೆ ನಾಯಕಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮಂಡ್ಯ ಮೂಲಕ ಕೆ.ಆರ್. ಮಹೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಈಗಾಗಲೇ ವಿಭಿನ್ನ ರೀತಿಯ ಪ್ರೇಮಕಥೆಗಳನ್ನು ನಿರ್ದೇಶಿಸಿರುವ ಮಹೇಶ್ ಬಾಬು ಈ ಹೊಸ ಚಿತ್ರದ ಮೂಲಕ ಕಮಾಲ್ ಮಾಡಲು ಹೊರಟಿದ್ದಾರೆ. ಸದ್ಯದಲ್ಲಿಯೇ ಚಿತ್ರದ ನಾಯಕಿಯ ಬಗ್ಗೆ ತಿಳಿಯಲಿದೆ.

ಮೋಡಿ ಮಾಡುವ ಡಿಟೆಕ್ಟಿವ್ ದಿವಾಕರ: ‘ಬೆಲ್ ಬಾಟಂ’ ಚಿತ್ರದ ವಿಮರ್ಶೆ

#maheshbabu, #balkaninews #filmnews, #crazyboy, #kannadauddigalu

Tags

Related Articles