ಸುದ್ದಿಗಳು

ನಟ ಮಹೇಶ್ ಬಾಬು ದಂಪತಿಗೆ 14 ನೇ ವೈವಾಹಿಕ ಸಂಭ್ರಮ….

ಹೈದರಾಬಾದ್,ಫೆ.10:

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಮತ್ತು ಇವರ ಪತ್ನಿ ನಮ್ರತಾ ಶಿರೋದ್ಕರ್ ಗೆ 14 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂಭ್ರಮದ ದಿನದ ಆಚರಣೆ ವೇಳೆ ತೆಗೆದ ಫೋಟೋ ವನ್ನು ನಟ ಮಹೇಶ್ ಬಾಬು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ದಂಪತಿಗಳ ಈ ಫೋಟೋ ಮುದ್ದಾಗಿದೆ. ಜೊತೆಗೆ ಮಹೇಶ್ ಬಾಬು ಈ ಕುರಿತು ಹೀಗೆ ಬರೆದುಕೊಂಡಿದ್ದಾರೆ.

” ಕ್ಯಾಂಡಿಡ್ ಕ್ಷಣಗಳು ಸೆರೆಯಾಗಿದೆ. ನಮ್ಮ ಬಾಂಧವ್ಯಕ್ಕೆ 14 ನೇ ವಾರ್ಷಿಕೋತ್ಸವ. ಸಂತೋಷದ ವಾರ್ಷಿಕೋತ್ಸವ, ಓ ನನ್ನ ಪ್ರೀತಿಯ ನಮ್ರತಾ ಶಿರೋದ್ಕರ್ ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪತ್ನಿ ನಮ್ರತಾ ಕೂಡಾ ರಿಪ್ಲೈ ಮಾಡಿದ್ದಾರೆ. ಅದು ಹೀಗಿದೆ.

Image result for namrata mahesh 14 year wedding anniversary

– ‘ನನ್ನ ಜೀವನದಲ್ಲಿ ಅತ್ಯುತ್ತಮ 14 ವರ್ಷಗಳನ್ನು ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೇ ನಟ ಮಹೇಶ್ ಮತ್ತು ನಮ್ರತಾ 2000 ಇಸವಿಯಲ್ಲಿ ಬಿ.ಗೋಪಾಲ್ ‘ವಂಶಿ’ ಚಿತ್ರೀಕರಣದ ಸಂದರ್ಭದಲ್ಲಿ ಭೇಟಿಯಾಗಿದ್ದರು. ನಾಲ್ಕು ವರ್ಷಗಳ ಪ್ರಣಯದ ನಂತರ ಇವರಿಬ್ಬರು ಫೆಬ್ರವರಿ 10, 2005 ರಂದು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 12 ವರ್ಷದ ಗೌತಮ್ ಕೃಷ್ಣ ಮತ್ತು 6 ವರ್ಷದ ಸಿತಾರ ಇವರಿಬ್ಬರ ಮಕ್ಕಳ ಹೆಸರು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಮಹೇಶ್ ಬಾಬು

23 ಸಿನಿಮಾಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ಇವರು ನಟಿಸಿದ ಬ್ರಹ್ಮೋತ್ಸವಂ, ಸ್ಪೈಡರ್, ಭರತ್ ಅನೆ ನೇನು ಚಿತ್ರ ಬ್ಯಾಕ್ ಟು ಬ್ಯಾಕ್ ಹಿಟ್ ಆಯಿತು. ಸದ್ಯ ಮಹೇಶ್ ಬಾಬು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ‘ಮಹರ್ಷಿ’ ಎಂಬ ಹೆಸರಿನ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹ-ನಟಿಯಾಗಿ ಪೂಜಾ ಹೆಗಡೆ ನಟಿಸಲಿದ್ದಾರೆ. ಅದಲ್ಲದೇ ನಿರ್ದೇಶಕರಾದ ಸುಕುಮಾರ್ ಮತ್ತು ಸಂದೀಪ್ ವಂಗರೊಂದಿಗೆ ಹೆಸರಿಡದ ಎರಡು ಚಲನಚಿತ್ರಗಳಲ್ಲಿ ನಟಿಸಲಿದ್ದಾರೆ.

ಅಂದಹಾಗೇ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋದ್ಕರ್ ಮಾಜಿ ಮಾಡೆಲ್, ನಿರ್ಮಾಪಕಿ ಮತ್ತು ನಟಿಯಾಗಿದ್ದಾರೆ. ಇವರು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. ಇವರು 1993 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದರು. ಮದುವೆಯ ನಂತರ  ನಟನೆಯನ್ನು ತೊರೆದಿದ್ದರೂ 2004 ರಲ್ಲಿ ರಿಲೀಸ್ ಆಗಿದ್ದ ‘ಬ್ರೈಡ್ & ಪ್ರಿಜ್ಯುಡೈಸ್’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

 

View this post on Instagram

 

Thank you for the best 14 years of my life🤗 Happy anniversary❤❤ @urstrulymahesh

A post shared by Namrata Shirodkar (@namratashirodkar) on

Tags