ಸುದ್ದಿಗಳು

ಮಾನನಷ್ಟ ಮೊಕದ್ದಮ್ಮೆ ಹೂಡಲು ರೆಡಿಯಾದ ಮಹೇಶ್ ಕತ್ತಿ

ಸದ್ಯ ಟಾಲಿವುಡ್ ಸುದ್ದಿಯಲ್ಲಿರೋ ವಿಚಾರ ಅಂದ್ರೆ ಅದು ಕಾಸ್ಟಿಂಗ್ ಕೌಚ್ ವಿವಾದ. ಇದಕ್ಕೆ ಸದ್ಯ ತೆರೆ ಬೀಳುವಂತೆ ಕಾಣಿಸುತ್ತಿಲ್ಲ. ಯಾಕಂದ್ರೆ ಪ್ರತಿದಿನ ಶ್ರೀ ರೆಡ್ಡಿ ಒಂದಲ್ಲೊಂದು ವಿಚಾರಗಳನ್ನ ಹಾಗೂ ಹೆಸರುಗಳನ್ನ ಇದಕ್ಕೆ ತಳುಕು ಹಾಕುತ್ತಲೇ ಇದ್ದಾರೆ. ಹೀಗಿರುವಾಗ ಇದರ ಬೆನ್ನಲ್ಲೇ ಇದೀಗ ಚಿತ್ರ ವಿಮರ್ಶಕ ಹಾಗೂ ನಿರ್ದೇಶಕರ ಮೇಲೆ ಕ್ಯಾರೆಕ್ಟರ್ ಆರ್ಟಿಸ್ಟ್ ಆರೋಪ ಮಾಡಿದ್ದಾರಂತೆ. ಹಾಗಾದ್ರೆ ಯಾರದು ಈ ಸ್ಟೋರಿ ಓದಿ.
ಕಳೆದ ವಾರವಷ್ಟೇ ತೆಲುಗು ನಟಿ ಶ್ರೀರೆಡ್ಡಿ ಅವಕಾಶ ನೀಡುವ ಹೆಸರಿನಲ್ಲಿ ನನ್ನನ್ನು ಬಳಸಿಕೊಂಡಿದ್ದರು ಎಂದು ಟಾಲಿವುಡ್‌ನ ಕೆಲವು ಖ್ಯಾತನಾಮರ ಹೆಸರನ್ನು ಬಹಿರಂಗಪಡಿಸಿದ್ದರು. ಜೊತೆಗೆ ಇಂದು ಇವರ ಹೇಳಿಕೆಗೆ ರಾಮಗೋಪಾಲ ವರ್ಮಾ ಕೂಡ ಸಾಥ್ ನೀಡಿದ್ರು. ಜೊತೆಗೆ ಅವರ ಕಣ್ಮುಂದೆ ಆದ ಘಟನೆ ಬಗ್ಗೆಯೂ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಆದ್ರೀಗ ಚಿತ್ರ ವಿಮರ್ಶಕ, ನಿರ್ದೇಶಕ ಮಹೇಶ್ ಕತ್ತಿ ಮೇಲೂ ಇಂತಹ ಆರೋಪದ ಕತ್ತಿ ತೂಗುತ್ತಿದೆ.

ಹೌದು, ಕ್ಯಾರೆಕ್ಟರ್ ಆರ್ಟಿಸ್ಟ್ ಸುನಿತಾ ಎಂಬಾಕೆ ಚಿತ್ರ ವಿಮರ್ಶಕ, ನಿರ್ದೇಶಕ ಮಹೇಶ್ ಕತ್ತಿ ಮೇಲೆ ಆರೋಪ ಮಾಡಿದ್ದಾರೆ. ನಾನು ಫೇಸ್‌ಬುಕ್‌ನಲ್ಲಿ ಮಹೇಶ್ ಕತ್ತಿಗೆ ಪರಿಚಯವಾಗಿದ್ದೆ. ಒಂದು ದಿನ ನನಗೆ ಅವಕಾಶ ನೀಡುವುದಾಗಿ ಹೇಳಿ ನೇರವಾಗಿ ಭೇಟಿ ಮಾಡಲು ಹೇಳಿದ್ದ ಮಹೇಶ್ ಕತ್ತಿ, ಹೋಟೆಲ್ ರೂಮ್‌ನಲ್ಲಿ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂದು ಸುನಿತಾ ಆರೋಪ ಮಾಡಿದ್ದಾರೆಂತೆ.
ಇನ್ನೂ ಈ ಆರೋಪದ ಕುರಿತು ಆರೋಪ ನಿರಾಕರಿಸಿರುವ ಮಹೇಶ್ ಕತ್ತಿ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಸುನಿತಾ ಮೇಲೆ ಹಾಗೂ ನನ್ನ ವಿರುದ್ಧ ಆಕೆಯನ್ನು ಎತ್ತಿ ಕಟ್ಟುತ್ತಿರುವ ಕೊನಿಡೇಲ ಪ್ರೊಡಕ್ಷನ್ ವಿರುದ್ಧ ೫೦ ಲಕ್ಷ ರೂ. ಮಾನನಷ್ಟ ಮೊಕದ್ದಮ್ಮೆ ದಾಖಲಿಸುವುದಾಗಿ ಹೇಳಿದ್ದಾರೆ ಅಂತಾ ಮೂಲಗಳು ತಿಳಿಸಿವೆ.

ಇನ್ನು ಕೆಲವು ರೀತಿಯ ಆರೋಪಗಳು ಮಹೇಶ್ ಕತ್ತಿಗೆ ಹೊಸದೇನಲ್ಲಾ. ಯಾಕಂದ್ರೆ ಈ ಹಿಂದೆ ಪವನ್ ಕಲ್ಯಾಣ್ ಬಗ್ಗೆ ಮಾತನಾಡಿದ್ದ ಮಹೇಶ್ ಕತ್ತಿ ಪವನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದ ಮಹೇಶ್ ಕತ್ತಿ, ನಂತರ ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಎಲಿಮಿನೇಟ್ ಆಗಿದ್ದರು.

ಇದೀಗ ಮತ್ತೆ ಆರೋಪದ ಸುಳಿಯಲ್ಲಿ ಸಿಲುಕಿರುವ ಮಹೇಶ್ ಕತ್ತಿ ಇದೀಗ ಮಾನನಷ್ಟ ಮೊಕದ್ದಮ್ಮೆಯನ್ನ ಹೂಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವನ್ನ ಕೋರ್ಟ್ ಅಂಗಳಕ್ಕೆ ತೆಗೆದುಕೊಂಡು ಹೋಗಲು ರೆಡಿಯಾಗಿರುವ ಇವರ ಮುಂದಿನ ನಡೆ ಹೇಗಿರುತ್ತೆ ಅಂತಾ ಕಾದು ನೋಡಬೇಕು.

 

Tags