ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

‘ಮಹಿರ’ ಚಿತ್ರದ ಮತ್ತೊಂದು ಇಂಪಾದ ಹಾಡು ರಿಲೀಸ್

ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಮಹಿರ’ ಸಿನಿಮಾ ಇದೇ ತಿಂಗಳ ಕೊನೆಯ ವಾರ ರಿಲೀಸ್ ಆಗುತ್ತಿದೆ. ಈಗಾಗಲೇ ತನ್ನ ವಿಭಿನ್ನ ಶೀರ್ಷಿಕೆ ಮತ್ತು ಹಾಡುಗಳಿಂದ ಗಮನ ಸೆಳೆದಿದ್ದ ಈ ಚಿತ್ರದಿಂದ ಮತ್ತೊಂದು ಹಾಡು ಬಿಡುಗಡೆಯಾಗಿದೆ.

‘ನಾನು ನಾನೇನಾ..’ ಎಂಬ ಸಾಲುಗಳನ್ನು ಒಳಗೊಂಡ ಲಿರಿಕಲ್ ವಿಡಿಯೋ ಹಾಡೀಗ ‘ಪಿ.ಆರ್.ಕೆ’ ಆಡಿಯೋ ಸಂಸ್ಥೆಯ ಮೂಲಕ ರಿಲೀಸ್ ಆಗಿದೆ. ಈ ಹಾಡನ್ನು ವಿಶ್ವಜಿತ್ ರಾವ್ ಮತ್ತು ಪ್ರತಾಪ್ ಭಟ್ ರಚಿಸಿದ್ದು, ನಿಲಿಮಾ ರಾಮ್ ಮತ್ತು ರಾಕೇಶ್ ಯು ಪಿ ಸಂಗೀತ ನೀಡಿದ್ದಾರೆ.

ನಾನು ನಾನೇನಾ.. ನನ್ನದು ನನ್ನದಲ್ಲವೋ.. ನಾ ನನ್ನದಾನೇನೋ..

ಹಾದಿ ಪೂರ ಅಂಟಿದೆ.. ನೆನಪಿನಾ ಮೇಣಾ..

ಚಿಪ್ಪ ಕೆಳಗೆ ಮುತ್ತ ಮೆತ್ತಿ.. ಮುದ್ದು ಮಾಡಿದಂತಾ.. ಸಮಯ ಮಾಯೆನಾ..

ಎಂಬ ಸಾಲುಗಳನ್ನು ಒಳಗೊಂಡ ಈ ಹಾಡು ಮುದ್ದಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನು ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಚೈತ್ರಾ ಆಚಾರ್, ಬಾಲಾಜಿ ಮನೋಹರ್, ಗೋಪಾಲ್ ಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ ಸೇರಿದಂತೆ ಅನೇಕರಿದ್ದಾರೆ.

ಶಾಂತಿಯುತ ಜೀವನ ನಡೆಸುವ ತಾಯಿ-ಮಗಳ ಜೀವನದಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಶಾಂತಿ ಭಂಗವಾಗುತ್ತದೆ. ಹಾಗೂ ಊಹೆಯೂ ಮಾಡದೇ ಬರುವ ಬೆದರಿಕೆಗಳ ಸರಣಿ ಬರಲು ಪ್ರಾರಂಭವಾದಾಗ ತಾಯಿ ಅದೆಲ್ಲವನ್ನೂ ಮೀರಿ ತನ್ನ ಮಗಳ ರಕ್ಷಣೆಗೆ ಹೇಗೆ ಹೋರಾಡುತ್ತಾಳೆ ಎಂಬುದೇ ಸಿನಿಮಾದ ಒಂದು ಎಳೆಯ ಕಥೆಯಾಗಿದೆ.

4 ನೇ ವರ್ಷದ ಸಂಭ್ರಮದಲ್ಲಿ ‘ರಂಗಿತರಂಗ’

#mahira #movie #lyricalsong #balkaninews #rajbshetty ,#filmnews, #kannadasuddigalu #maheshbhat

Tags