ಸುದ್ದಿಗಳು

ಮಹರ್ಷಿ ಮೇಲೆ ಹೆಚ್ಚುತ್ತಿದೆ ಅಭಿಮಾನಿಗಳ ಒತ್ತಡ…

ಅಭಿಮಾನಿಗಳು ಚಿತ್ರದ ಹಿರೋ ಹಿರೋಯಿನ್ ಗಳ ಪಾಲಿಗೆ ಪ್ಲಸ್ . ಅದೆಷ್ಟೋ ನಟರು ಅಭಿಮಾನಿಗಳನ್ನ ಅಭಿಮಾನಿ ದೇವರು ಎಂದೆ ಕರೆಯುವುದುಂಟು. ಚಿತ್ರರಂಗದಲ್ಲಿನ ತಮ್ಮ ಯಶಸ್ಸಿಗೆ ಈ ಅಭಿಮಾನಿಗಳ ಪ್ರೋತ್ಸಾಹ, ಪ್ರೀತಿಯ ಕಾರಣ ಎನ್ನುವುದು ಅವರ ಮಾತು. ಅಷ್ಟೇ ಅಲ್ಲ ಈ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಹಿರೋಗಳ ಪಾಲಿಗೆ ಸಿಕ್ಕಾಪಟ್ಟೆ ನಿಷ್ಠೆಯಿಂದ , ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಹಾಗಾಂತ ಯಾವಾಗಲೂ ಅವರ ಸಂಯಮದಿಂದ ಇರುವುದಿಲ್ಲ. ನಮ್ಮ ನೆಚ್ಚಿನ ಹಿರೋ ಮೇಲೆ ಅವರ ಒತ್ತಡವೂ ಹೆಚ್ಚಾಗುತ್ತಲೇ ಇರುತ್ತದೆ. ಇದು ಕೆಲವೊಮ್ಮೆ ಹಿರೋಗಳನ್ನು ಇಕ್ಕಟ್ಟಿನಲ್ಲಿ, ಸಂಕಷ್ಟಕ್ಕೀಡು ಮಾಡುತ್ತದೆ ಎಂಬುದು ಕೂಡ ನಿಜ.

Related image

ಏಪ್ರಿಲ್ 5ರಂದೆ ಬಿಡುಗಡೆಗೊಳಿಸುವಂತೆ ಆಗ್ರಹ..

ದಿಲ್ ರಾಜು ಅವರ ಮಹರ್ಷಿ ಚಿತ್ರ ಸದ್ಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಮಹೇಶ್ ಬಾಬು ಅವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರೈತನ ಪಾತ್ರಕ್ಕ ಬಣ್ಣ ಹಚ್ಚಿರುವ ಮಹೇಶ್ ಅಭಿನಯದ ಮಹರ್ಷಿ ಸಹಜವಾಗಿಯೇ ದಿನದಿಂದ ದಿನಕ್ಕೆ ಕುತೂಹಲವನ್ನುಂಟು ಮಾಡುತ್ತಿದೆ. ಈ ನಡುವೆ ಮಹರ್ಷಿ ಚಿತ್ರವನ್ನು ಏಪ್ರಿಲ್ 5ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇದೀಗ ಚಿತ್ರ ರಿಲೀಸ್ ಡೇಟ್ ಏಪ್ರಿಲ್ 25ಕ್ಕೆ ಮುಂದೂಡಲ್ಪಟ್ಟಿದ್ದು, ಇದು ಸಹಜವಾಗಿಯೇ ಮಹೇಶ್ ಅವರನ್ನು ತೆರೆ ಮೇಲೆ ನೋಡಲು ಕಾತರದಿಂದಕಾಯುತ್ತಿರುವ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಮಹರ್ಷಿ ಚಿತ್ರ ಬೇಸಿಗೆಯ ಆರಂಭದಲ್ಲೇ ಬಿಡುಗಡೆಯಾದರೆ. ಮತ್ತೊಂದು ರಂಗಸ್ಥಳಂ ದಾಖಲೆ ಬರೆಯಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಇದೇ ಕಾರಣಕ್ಕೆ ಅವರು ಮಹೇಶ್ ಬಾಬು ಹಾಗೂ ನಿರ್ಮಾಪಪಕ ದಿಲ್ ರಾಜು ಮೇಲೆ ಒತ್ತಡ ಹೇರುತ್ತದ್ದು, ಏಪ್ರಿಲ್ 5ರಂದೇ ಚಿತ್ರ ಬಿಡುಗಡೆಗೊಳಿಸಬೇಕು…

 

Tags