ಸುದ್ದಿಗಳು

ದೇಶದ ಉಪ್ಪಿಗೆ ಬೆಲೆ ಕಟ್ಟಿದ ಬ್ರಿಟಿಷರ ವಿರುದ್ದ ದಂಡೆತ್ತಿ ನಡೆದ ಅತಿ ಕಿರಿಯ ಚಳುವಳಿಗಾರ

ಬೆಂಗಳೂರು, ಆ. 10: ಅಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೋರಾಟ ಮಾಡಿದವರ ಪೈಕಿಯಲ್ಲಿ ಮೈಲಾರ ಮಹಾದೇವಪ್ಪ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನವರಾದ ಇವರು ಹೈಸ್ಕೂಲಿನಲ್ಲಿ ಹರ್ಡೇಕರ್ ಮಂಜಪ್ಪರಿಂದ ರಾಷ್ಟ್ರದ ಭಾವನೆಯ ಉದಯವಾಯಿತು. ಇದರಿಂದ 1929 ರಲ್ಲಿ ಕಾಂಗ್ರೇಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಖಾದಿ ಪ್ರಚಾರದಲ್ಲಿ ತೊಡಗಿದರು. ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿ ದಂಡೀ ಯಾತ್ರೆ ಕೈ ಗೊಂಡಾಗ ಅದರಲ್ಲಿ ಭಾಗವಹಿಸಿದ ಅತಿ ಕಿರಿಯ ಚಳುವಳಿಗಾರರಾಗಿದ್ದರು.

ಮೈಲಾರ ಮಹಾದೇವಪ್ಪನವರು 1942 ರಲ್ಲಿ ಚಲೇಜಾವ್ ಚಳುವಳಿ ಪ್ರಾರಂಭವಾಗಿ ಮಹಾತ್ಮ ಗಾಂಧೀಜಿಯವರು ಸೆರೆಯಾದ ಬಳಿಕ ಚಳುವಳಿ ಉಗ್ರ ರೂಪ ತಾಳಿತು. ಅವರು ಯುವ ಹೋರಾಟಗಾರರನ್ನು ಸಂಘಟಿಸಿದರು.

1942 ಮಾರ್ಚ್ 31 ರಂದು ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ಮಾಡಿದಾಗ ಪೋಲೀಸರ ಗುಂಡಿಗೆ ಬಲಿಯಾದರು. ಅವರು ಹುತಾತ್ಮರಾದಾಗ ಕೇವಲ 32 ವರ್ಷ ಪ್ರಾಯ. ಸ್ವಾತಂತ್ರ್ಯ ಚಳುವಳಿಯಲ್ಲಿ ತಾನಾಗಿ, ತಾನು ಸಾಯಬಹುದೆಂದು ತಿಳಿದೂ ತಿಳಿದೂ, ಸ್ವಯಂ ಸ್ಫೂರ್ತಿಯಿಂದ ದೀಪಕ್ಕೆ ಎರಗಿದ ಹಾರುವ ಹುಳದಂತೆ ಪ್ರಾಣನೀಗಿದ ಪುಣ್ಯ ಪುರುಷ ಇವರಾಗಿದ್ದರು.

 

 

 

 

Tags

Related Articles