ಸುದ್ದಿಗಳು

ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಬಾಲಿವುಡ್ ಗೆ ಎಂಟ್ರಿ!!

ಕರಣ್ ಜೋಹರ್ ಸಿನಿಮಾ ಮೂಲಕ ಬಾಲಿವುಡ್ ಗೆ ಪ್ರವೇಶ

‘ಮಿಸ್ ವರ್ಲ್ಡ್’ ಕಿರೀಟ ಸ್ವೀಕರಿಸಿದ ಮನುಷಿ ಚಿಲ್ಲರ್ ಕೂಡ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಮನಸ್ಸು ಮಾಡಿದಂತಿದೆ

ಮುಂಬೈ,ಸೆ.04: ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಈಗಾಗಲೇ ಅನೇಕ ನಟರ ಮಕ್ಕಳನ್ನುಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅಲಿಯಾ ಭಟ್, ಜಾಹ್ನವಿ ಕಪೂರ್,ಸರಾ ಅಲಿಖಾನ್, ಖುಷಿ ಕಪೂರ್  ವರೆಗೆ ಅನೇಕ ನಟಿ ಮಣಿಯರನ್ನು ಕರಣ್ ಜೋಹರ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದವರು.

Related image

ಮಾನುಷಿ ಬಾಲಿವುಡ್ ಗೆ       

ಈಗ ಹೊಸ ಸುದ್ದಿ ಏನೆಂದರೆ ಕಳೆದ ವರ್ಷದ ‘ಮಿಸ್ ವರ್ಲ್ಡ್’ ಕಿರೀಟ ಸ್ವೀಕರಿಸಿದ ಮನುಷಿ ಚಿಲ್ಲರ್ ಕೂಡ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಮನಸ್ಸು ಮಾಡಿದಂತಿದೆ. ನಿರ್ದೇಶಕ ಕರಣ್ ಜೋಹರ್ ಮನುಷಿಯವರನ್ನು ಬಾಲಿವುಡ್ ಗೆ ಪರಿಚಯಿಸಲು ಉತ್ಸುಕವಾಗಿದ್ದು 2019ರಲ್ಲಿ ಸಿನಿಮಾ ಆರಂಭವಾಗಲಿದೆ ಎನ್ನುತ್ತಿದೆ ಬಿ-ಟೌನ್..

ಹಾಗಾಗಿ ಮನುಷಿ ಚಿಲ್ಲರ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಧರ್ಮ ಪ್ರೊಡಕ್ಷನ್ ಗೆ ಲುಕ್ ಟೆಸ್ಟ್ ಕೂಡ ಮಾಡಿಸಿಕೊಂಡಿದ್ದಾರೆಯಂತೆ.ಈ ಹಿಂದೆ ಜಾಹಿರಾತುವೊಂದರಲ್ಲಿ ನಟ ರಣವೀರ್ ಸಿಂಗ್ ಜೊತೆ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಮಲಬಾರ್ ಜ್ಯುವೆಲರ್ಸ್ ಗೆ ಬ್ರಾಂಡ್ ಅಂಬಾಸಿಡರ್ ಆಗಿಯೂ ಕಾಣಿಸಿಕೊಂಡಿದ್ದರು..

Image result for manushi chhillar

Tags