ಸುದ್ದಿಗಳು

ಶಿವಣ್ಣ ಮೆಚ್ಚಿಕೊಂಡ ‘ಮಜ್ಜಿಗೆ ಹುಳಿ’ ಚಿತ್ರದ ‘ಮಚ್ಚಾ ಮಚ್ಚಿ’ ಸಾಂಗ್ ರಿಲೀಸ್

ಆಂಥೋನಿ ದಾಸ್ ಮತ್ತು ಜೋಗಿ ಸುನೀತಾ ಹಾಡಿರುವ ‘ಟಪ್ಪಾಂಗುಚ್ಚಿ’ ಡ್ಯೂಯೆಟ್ ಸಾಂಗ್

ಬೆಂಗಳೂರು.ಫೆ.10

ಈಗಾಗಲೇ ಟೈಟಲ್ ಮತ್ತು ಪೋಸ್ಟರ್ ಮೂಲಕವೇ ಎಲ್ಲರ ಗಮನ ಸೆಳೆದಿರುವ ಚಿತ್ರ ‘ಮಜ್ಜಿಗೆ ಹುಳಿ-ಒಳ್ಳೆ ಬಾಡೂಟ ಗುರೂ’. ಈ ಚಿತ್ರದ ‘ಟಪ್ಪಾಂಗುಚ್ಚಿ’ ಡ್ಯೂಯೆಟ್ ಸಾಂಗ್ ರಿಲೀಸ್ ಆಗಿ, ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ.

ಟಪ್ಪಾಂಗುಚ್ಚಿ.. ಸಾಂಗ್

ಈ ಹಾಡನ್ನು ‘ಟಗರು’ ಮತ್ತು ‘ಅಯೋಗ್ಯ’ ಚಿತ್ರಗಳ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಆಂಥೋನಿ ದಾಸ್ ಹಾಡಿದ್ದು, ಇದೇ ಮೊದಲ ಬಾರಿಗೆ ಅವರು ಟಪ್ಪಾಂಗುಚ್ಚಿ ಡ್ಯೂಯೆಟ್ ಸಾಂಗ್ ಗೆ ಧ್ವನಿ ನೀಡಿದ್ದಾರೆ.

ಶಿವಣ್ಣ ಮೆಚ್ಚಿಕೊಂಡ ಹಾಡು

“ಕೊಳ್ಳೆಗಾಲ.. ಚಿತ್ರದ ನಂತರ ದಿಕ್ಷೀತ್ ವೆಂಕಟೇಶ್ ನಟಿಸಿರುವ ‘ಮಜ್ಜಿಗೆ ಹುಳಿ’ ಚಿತ್ರದ ‘ಮಚ್ಚಾ ಮಚ್ಚಿ’ ಹಾಡಿಗೆ ಮತ್ತು ಚಿತ್ರತಂಡಕ್ಕೆ ಶುಭವಾಗಲಿ” ಎಂದು ಶಿವರಾಜ್ ಕುಮಾರ್ ಶುಭ ಹಾರೈಸಿದ್ದಾರೆ.

ಹಾಡಿನ ಬಗ್ಗೆ

ಈ ಹಾಡನ್ನು ಟಪ್ಪಾಂಗುಚ್ಚಿ ಡ್ಯೂಯೆಟ್ ಹಾಡಾಗಿದ್ದು, ಕೇಳುತ್ತಿದ್ದಂತೆಯೇ ನಮಗೆ ನಾವೇ ಸ್ಟೇಪ್ ಹಾಕಲು ಶುರು ಮಾಡುತ್ತೇವೆ. ಈ ಲಿರಿಕಲ್ ವಿಡಿಯೋನಲ್ಲಿ ಚಿತ್ರದ ಮೇಕಿಂಗ್ ದೃಶ್ಯಗಳನ್ನು ಸಹ ತೋರಿಸಲಾಗಿದೆ.

ಚಿತ್ರದ ಬಗ್ಗೆ

ಹೊಸದಾಗಿ ಮದುವೆಯಾದ ನವಜೋಡಿಯೊಂದು ಮೊದಲ ರಾತ್ರಿಯನ್ನು ಜೀವನದ ಅತ್ಯಂತ ಮಧುರರಾತ್ರಿಯಾಗಿಸಿಕೊಳ್ಳಲು ಮದುವೆ ಮನೆಯ ಗದ್ದಲದಿಂದ ದೂರವಾಗಿ ಗೋವಾದಲ್ಲಿ ಆ ರಾತ್ರಿಯನ್ನು ಕಳೆಯುವುದಕ್ಕೆ ಮುಂದಾಗುತ್ತಾರೆ. ಹೀಗೆ ಮುಂದಾದ ಆ ಜೋಡಿಯ ಜೀವನದಲ್ಲಿ ಆ ರಾತ್ರಿ ಏನೆಲ್ಲಾ ಘಟನಾವಳಿಗೂ ನಡೆಯುತ್ತದೆ ಎನ್ನುವುದೇ ‘ಮಜ್ಜಿಗೆಹುಳಿ’ ಕಥಾಹಂದರ.

ಅಂದ ಹಾಗೆ ಈ ಲಿರಿಕಲ್ ವಿಡಿಯೋವನ್ನು ಲಹರಿ ಮ್ಯೂಸಿಕ್ ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದೆ. ಈ ಹಾಡನ್ನು ನಿರ್ದೇಶಕ ರವೀಂದ್ರ ಕೊಟಕಿಯವರೇ ಬರೆದಿದ್ದು, ಎಮ್ ಸಂಜೀವ್ ರಾವ್ ಸಂಗೀತ ಸಂಯೋಜಿಸಿದ್ದಾರೆ.

ಕಾಂಟ್ರೋವರ್ಸಿಯಲ್ಲಿ ಸಿಲುಕಿಹಾಕಿಕೊಂಡ ಸ್ಟೈಲೀಶ್ ಸ್ಟಾರ್

#majjigehuli, #balkaninews #filmnews, #kannadasuddigalu, #shivarajkumar, #anthionydas

Tags