
ಮುಂಬೈ,ಸೆ.08: ಚೈಯ್ಯ ಚೈಯ್ಯ… ಕಾಲ್ ಧಮಾಲ್… ಮುನ್ನಿ ಬದ್ನಾಮ್… ಸೇರಿದಂತೆ ಅನೇಕ ಸೂಪರ್ ಹಿಟ್ ಡ್ಯಾನ್ಸ್ ನಂಬರ್ ಗಳಲ್ಲಿ ಸೊಂಟ ಬಳುಕಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್ ನ ಗ್ಲಾಮರಸ್ ನಟಿ ಮಲೈಕಾ ಅರೋರ ಇದೀಗ`ಆಜಾ, ನೆಟ್ವರ್ಕ್ ಕೆ ಬೀತರ್ ಕಹಕೆ ಹಲೋ ಹಲೋ’… ಎಂಬ ಹಾಡು ಯುಟ್ಯೂಬ್ ನಲ್ಲಿ ಕಮಾಲ್ ಮಾಡುತ್ತಿದೆ. . ವಿಶಾಲ್ ಭಾರದ್ವಾಜ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ರೇಖಾ ಭಾರದ್ವಾಜ್ ಹಾಡಿದ್ದಾರೆ. ರೇಖಾ ಮಾದಕ ಧ್ವನಿಗೆ ಹೆಜ್ಜೆ ಹಾಕಿದ್ದಾರೆ ಮಲೈಕಾ..
ಕೋಟಿ ವೀಕ್ಷಣೆ
ಈ ಹಾಡಿಗೆ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಲ್ಕೈದು ದಿನಗಳ ಹಿಂದೆ ತೆರೆಕಂಡ ಹಾಡನ್ನು ಇಲ್ಲಿಯವರೆಗೆ ಎಷ್ಟು ಜನ ವೀಕ್ಷಿಸಿರಬಹುದು ಗೊತ್ತೇ? ಬರೋಬ್ಬರಿ 1 ಕೋಟಿ 19 ಲಕ್ಷಕ್ಕೂ ಹೆಚ್ಚು ಬಾರಿಈ ವಿಡಿಯೋವನ್ನು ನೋಡಿದ್ದಾರೆ. ಪಟಾಖಾ ಚಿತ್ರದ ಹಾಡು ಇದಾಗಿದೆ. ಪಟಾಖಾ ಸದಾ ಜಗಳವಾಡುವ ಇಬ್ಬರು ಸಹೋದರಿಯರ ಕಥೆಯಾಗಿದೆ.
ಸೆಪ್ಟೆಂಬರ್ 28 ರಂದು ತೆರೆಗೆ
ದಂಗಲ್ ಗರ್ಲ್ ಸಾನ್ಯಾ ಹಾಗೂ ಟಿವಿ ನಟಿ ರಾಧಿಕಾ ಮದನ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಭಾರಾದ್ವಾಜ್ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 28 ರಂದು ತೆರೆಗೆ ಬರಲಿದೆ. 20 ವರ್ಷಗಳ ಹಿಂದೆ ಬಾಲಿವುಡ್ ಐಟಂ ಹಾಡಿಗೆ ಮೊದಲ ಬಾರಿ ಹೆಜ್ಜೆ ಹಾಕಿದ್ದ ಮಲೈಕಾ ಈಗಲೂ ಅದೇ ರೀತಿ ಡಾನ್ಸ್ ಮಾಡಿದ್ದಾಳೆ.