ಸುದ್ದಿಗಳು

ಫಿಟ್ ಅಂಡ್ ಫೈನ್ ಮಲೈಕಾ …!

ಬಾಲಿವುಡ್ ಜನಪ್ರಿಯ ನಟಿ ಮಲೈಕಾ ಅರೋರ

ಮುಂಬೈ, ಡಿ.5: ತಮ್ಮ ಸೆಕ್ಸಿ ಮೈಮಾಟದಿಂದ ಈಗಲೂ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಬಾಲಿವುಡ್ ಬೆಡಗಿ ಮಲೈಕಾ ಅರೋರ, ತಮ್ಮ 45ರ ವಯಸ್ಸಿನಲ್ಲೂ ಹೆಚ್ಚು ಫಿಟ್ ನೆಸ್ ಕಡೆ ಗಮನ ಕೊಡುವ ನಟಿ. ಸದ್ಯ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಜಿಮ್ ನಲ್ಲಿ ಬೆವರಿಳಿಸಿ ಹದಿಹರೆಯದ ಹುಡಿಗಿಯರೂ ನಾಚುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.

ತಮ್ಮಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಟೋವನ್ನು ಹಂಚಿಕೊಂಡಿರುವ ಮಲೈಕಾ …!

ಈಗಾಗಲೇ ಬಹಳಷ್ಟು ನಟಿಯರು ಮದುವೆ ಆಗಿ ಮಗು ಆಗಿದ್ದೆ ತಡ ತಮಗೆ ವಯಸ್ಸಾದಂತೆ ತಮ್ಮ ಫಿಟ್ನೆಸ್ ಕಳೆದುಕೊಳ್ಳುತ್ತಾರೆ. ಆದ್ರೆ ನಟಿ ಮಲೈಕಾ ಫಿಟ್ನೆಸ್ ಉತ್ಸಾಹಿ. ಹೀಗಾಗಿ ಅವರು ಇತ್ತೀಚಿಗೆ ತಮ್ಮದೆ ಒಂದು ಯೋಗ ಸ್ಟುಡಿಯೋವೊಂದನ್ನ ಆರಂಭಿಸಿದ್ದಾರೆ. ಹೌದು, ನಟಿ ಮಲೈಕಾ ಆಗಾಗ ಫಿಟ್ನೆಸ್ ವಿಡಿಯೋಗಳನ್ನ ತಮ್ಮಇನ್ಸ್ಟಾಗ್ರಾಮ್  ಅಕೌಂಟ್ ನಲ್ಲಿ ಹಂಚಿಕೊಳ್ಳುತ್ತಾರೆ.ವಾಕಿಂಗ್, ಸೈಕ್ಲಿಂಗ್ ಅಥವಾ ಜಾಗಿಂಗ್ ಮಾಡಬೇಕಂತೆ …!

ಸದ್ಯ ಅವರು ಅಚ್ಚು ಮೆಚ್ಚಿನ ಫಿಟ್ನೆಸ್ ವರ್ಕ್ಔಟ್, ದೇಹದ ಸದೃಡತೆ ಕಾಪಾಡಿಕೊಳ್ಳಲು ಉಪಕಾರಿಯಾಗಿದೆ. ಇದು ಮಾಂಸ ಖಂಡಗಳನ್ನು ಹುರಿಗೊಳಿಸುತ್ತದೆ. ಜೊತೆಗೆ ನಮ್ಮ ಚಯಾಪಚಯ ಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. ನೀವು ನಿಮ್ಮ ಹೃದಯ ಆರೋಗ್ಯವಾಗಿರಬೇಕು ಎಂದು ನೀವು  ಬಯಸಿದರೆ ಸಮತೋಲಿತವಾಗಿ, ನೀವು ದೈನಂದಿನ ಕಾರ್ಡಿಯೋ ಎಕ್ಸರ್ಸೈಸ್ ಜೊತೆಗೆ ವಾಕಿಂಗ್, ಸೈಕ್ಲಿಂಗ್ ಅಥವಾ ಜಾಗಿಂಗ್ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.

Tags