ಸುದ್ದಿಗಳು

ಟ್ರೋಲ್ ಆಯ್ತು ನಟಿ ಮಲೈಕಾ ಅರೋರಾ ಯೋಗ ಪೋಸ್​

ಬಾಲಿವುಡ್ ನಲ್ಲಿ ಶಾರೂಖ್ ಪುತ್ರಿ ಸುಹಾನ ಖಾನ್ ಬಿಟ್ಟರೆ, ಅತಿ ಹೆಚ್ಚು ಸುದ್ದಿಯಲ್ಲಿರುವವರು ಮಲೈಕಾ ಅರೋರಾ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ಬೆಡಗಿ ಇದೀಗ ಯೋಗ ಅಥವಾ ಧ್ಯಾನದ ಭಂಗಿಯನ್ನು ಹೋಲುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಸದ್ಯ ಸಿಕ್ಕಾಪಟ್ಟೆ ಕಮೆಂಟ್ ಗಳನ್ನು ಪಡೆಯುವುದರ ಜೊತೆಗೆ ಟ್ರೋಲ್ ಕೂಡ ಆಗುತ್ತಿದೆ.

ಇನ್ಸ್ಟಾಗ್ರಾಂನಲ್ಲಿ ಫೋಟ್ ಶೇರ್ ಮಾಡಿರುವ ಮಲೈಕಾ, “ಅಭ್ಯಾಸ ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ. ನನ್ನ ಕಾರ್ಯ ಪ್ರಗತಿಯಲ್ಲಿದೆ..” ಎಂದು ಯೋಗದ ಭಂಗಿಗಳ ಕುರಿತು ಹ್ಯಾಶ್ ಟ್ಯಾಗ್ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಲೈಕಾ ಫೋಟೋದಲ್ಲಿ ಅಸಭ್ಯತೆ ಕಾಣುತ್ತಿಲ್ಲ. ಯೋಗಕ್ಕೆ ಸ್ಫೂರ್ತಿ ನೀಡುವ ತರಹವೇ ಇದೆ. ಆದರೂ ನೆಟ್ಟಿಗರು ಇಲ್ಲಸಲ್ಲದ ಕಮೆಂಟ್ ಗಳನ್ನು ಮಾಡಿರುವುದು ಬೇಸರದ ಸಂಗತಿ.

ಕೆಲವು ಕಮೆಂಟ್ ಗಳನ್ನು ಹೊರತುಪಡಿಸಿದರೆ ಮಲೈಕಾಗೆ ಪ್ರಶಂಸೆಗಳ ಸುರಿಮಳೆಯೇ ಬಂದಿದೆ. “ನೀವು ಎಷ್ಟು ಫಿಟ್ ಆಗಿದ್ದೀರಿ, ನಿಮ್ಮ ಲೈಫ್ ಸ್ಟೈಲ್ ಚೆನ್ನಾಗಿದೆ, ನಾವು ಈ ತರಹ ಪ್ರಯತ್ನಿಸಿದೆವು ಆಗಲಿಲ್ಲ” ಎಂದು ಸಲಹೆಗಳನ್ನು ಕೂಡ ಕೇಳಿದ್ದಾರೆ.

ಅದೇನೇ ಇರಲಿ, ಬಾಲಿವುಡ್ ನಲ್ಲಿ ಅತ್ಯಂತ ಸುಂದರವಾದ ಮೈಮಾಟವನ್ನು ಹೊಂದಿರುವ ನಟಿಯರ ಪೈಕಿ ಮಲೈಕಾ ಕೂಡ ಒಬ್ಬರು.

ಮಲೈಕಾ ಅರೋರಾ ಕೈಯೆತ್ತಿ ಪೋಸ್ ಕೊಟ್ಟಿದ್ದೇ ತಪ್ಪಾಯ್ತಾ?

#balkaninews #yoga #malaikaarora #troll #malaikaarorainstagram  #malaikaaroratwitter #bollywoodlifestyle

Tags