ಸುದ್ದಿಗಳು

ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಮಾಲಾಶ್ರೀ, ರಾಮು ದಂಪತಿಗಳು

ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ ದಂಪತಿಗಳು

ಬೆಂಗಳೂರು.ಫೆ.10

ಕನಸಿನ ರಾಣಿ ಎಂದೇ ಖ್ಯಾತಿ ಗಳಿಸಿರುವ ನಟಿ ಮಾಲಾಶ್ರೀ ಈಗ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಸದ್ಯಕ್ಕೆ ತಮ್ಮ ಹೋಮ್ ಬ್ಯಾನರ್ ಸಿನಿಮಾಗಳ ನಿರ್ಮಾಣದ ಕೆಲಸ ಹಾಗೂ ತಮ್ಮ ಕುಟುಂಬದ ಜೊತೆಗೆ ಖುಷಿಯಾಗಿ ಇದ್ದಾರೆ.

ಇಂದು ಮರೆಯಲಾಗದ ದಿನ

ನಟಿ ಮಾಲಾಶ್ರೀ ಹಾಗೂ ಹಾಗೂ ನಿರ್ಮಾಪಕ ರಾಮು ಕುಟುಂಬದಲ್ಲಿ ಇಂದು ಮರೆಯಲಾಗದ ದಿನವಾಗಿದೆ. ಕಾರಣ, ಇಂದು ಅವರ ಮದುವೆಯ ವಾರ್ಷಿಕೋತ್ಸವದ ದಿನ. ಹೀಗಾಗಿ ಅವರಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಸಿನಿಮಾ ಕುಟುಂಬದವರು

ಎಲ್ಲರಿಗೂ ತಿಳಿದಿರುವಂತೆ, ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದವರು. ಮೊದಲಿಗೆ ಬಾಲ ನಟಿಯಾಗಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

1989 ರಲ್ಲಿ ಸಾರ್ವಕಾಲಿಕ ಜನಪ್ರಿಯ “ನಂಜುಂಡಿ ಕಲ್ಯಾಣ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು.
ನಂತರ ‘ಗಜಪತಿ ಗರ್ವಭಂಗ’, ‘ಪ್ರತಾಪ್’, ‘ಕಿತ್ತೂರಿನ ಹುಲಿ’, ‘ತವರು ಮನೆ’ ‘ಚಾಮುಂಡಿ’, ‘ಕಿರಣ್ ಬೇಡಿ ಶಕ್ತಿ’, ‘ವೀರ’ ಸೇರಿದಂತೆ ಅನೇಕ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ.

ಹೀಗೆ ಯಶಸ್ಸಿನಲ್ಲಿರುವಾಗಲೇ ಅವರು ನಿರ್ಮಾಪಕರಾದ ರಾಮುರನ್ನು ವಿವಾಹವಾದರು. ಈಗ ಅವರಿಗೆ ಆರತಿಗೆ ಒಬ್ಬಳು, ಕೀರ್ತಿಗೆ ಒಬ್ಬ ಎನ್ನುವ ಹಾಗೆ ಇಬ್ಬರು ಮಕ್ಕಳಿದ್ದಾರೆ. ಅನನ್ಯ ಹಿರಿಯ ಪುತ್ರಿಯಾದರೆ, ಆರ್ಯನ್ ಕಿರಿಯ ಪುತ್ರನಾಗಿದ್ದಾನೆ,.

ಈಗಾಗಲೇ ರಾಮು ತಮ್ಮದೇ ಬ್ಯಾನರ್ ನಲ್ಲಿಯೇ ಮಾಲಾಶ್ರೀಯವರ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇನ್ನು ಮಾಲಾಶ್ರೀ ಇತ್ತೀಚಿಗೆ ನಟಿಸಿದ್ದ ಸಿನಿಮಾ ಅಂದರೆ ‘ಉಪ್ಪಿ ಹುಳಿ ಖಾರ’. ಈ ಸಿನಿಮಾ 2017 ರಲ್ಲಿ ಬಿಡುಗಡೆಯಾಗಿತ್ತು. ಇಲ್ಲಿ ಕನಸಿನ ರಾಣಿ ಪೊಲೀಸ್ ಆಫೀಸರ್ ಆಗಿ ನಟಿಸಿದ್ದರು. ಇವರಿಬ್ಬರೂ ಹೀಗೆಯೇ ನಗು ನಗುತಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಫ್ಯಾನ್ಸಿ ಕಿವಿಯೋಲೆಗೆ ಡಿಮಾಂಡಪ್ಪೋ ಡಿಮ್ಯಾಂಡ್!!

#malashree, #ramu, #balkaninews, #kannadasuddigalu, #filmlife

Tags