ಸುದ್ದಿಗಳು

ದಿಗ್ಗಿ ಮತ್ತು ಆ್ಯಂಡಿ ಮದುವೆ ಆಮಂತ್ರಣ ನೋಡಿ ಆಶ್ಚರ್ಯ ಪಟ್ಟ ಮಾಳವಿಕಾ

ನಟಿ ಮಾಳವಿಕ ಇದೀಗ ಐಂದ್ರಿತಾ ಹಾಗೂ ದಿಗಂತ್ ಮದುವೆ ಆಮಂತ್ರಣ ನೋಡಿ ಟ್ವಿಟ್ ಮಾಡಿದ್ದಾರೆ

ಬೆಂಗಳೂರು, ಡಿ.06: ನಟಿ ಐಂದ್ರಿತಾ ಹಾಗೂ ದಿಗಂತ್ ಇದೇ ತಿಂಗಳು 12ರಂದು ಹಸೆಮಣೆ ಏರುತ್ತಿರುವುದು ಗೊತ್ತಿರುವ ವಿಚಾರ. ಸೆಲಿಬ್ರಿಟಿಗಳ ಮದುವೆ ಅಂದ್ರೆ ಕೇಳಬೇಕಾ..? ಅಲ್ಲಿ ಅದ್ದೂರಿತನಕ್ಕೇನೂ ಕಡಿಮೆ ಇರುವುದಿಲ್ಲ. ಆದರೆ ಈ ಮಾತಿಗೆ ಆಂಡಿ ಹಾಗೂ ಪಿಗ್ಗಿ ವಿರುದ್ದವಾಗಿದ್ದಾರೆ. ಯಾಕೆಂದರೆ ಈ ತಾರಾ ಜೋಡಿ ಇದೀಗ ತುಂಬಾ ಸರಳವಾಗಿ ಎರಡು ಸಂಪ್ರದಾಯದಂತೆ ಮದುವೆಯಾಗುತ್ತಿದ್ದಾರೆ.

ವಿಶೇಷವಾಗಿದೆ ದಿಗ್ಗಿ-ಆಂಡಿ ಆಮಂತ್ರಣ

ಈಗಾಗಲೇ ಈ ಜೋಡಿ ಮದುವೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಕೂಡ ಮಾಡಿಕೊಂಡಿದೆ. ಚಿಕ್ಕಬಳ್ಳಾಪುರ ಬಳಿ ಇರುವ ನಂದಿ ಗಿರಿಧಾಮದಲ್ಲಿ ಮದುವೆಗೆ ರೆಸಾರ್ಟ್ ಕೂಡ ಬುಕ್ ಆಗಿದೆ. ಹಸಿರುಮಯದಲ್ಲಿ ಈ ಜೋಡಿ ಮದುವೆಯಾಗುತ್ತಿದೆ. ಇದರ ಜೊತೆಗೆ ಮದುವೆ ಆಮಂತ್ರಣ ಕೂಡ ಎಲ್ಲರಿಗೂ ಹಂಚಿಕೆಯಾಗುತ್ತಿದೆ. ಈ ಮದುವೆ ಆಮಂತ್ರಣ ಸರಳವಾಗಿದ್ದರೂ ವಿಶೇಷವಾಗಿದೆ.

ಮಾಳವಿಕ ಟ್ವಿಟ್ಟರ್‌ನಲ್ಲಿ ಏನಿದೆ..?

ಇದೀಗ ಈ ಆಮಂತ್ರಣ ನೋಡಿ ನಟಿ ಮಾಳವಿಕ ಇಂಥಹ ಆಮಂತ್ರಣವನ್ನು ನಾನು ಇದುವರೆಗೂ ನೋಡಿಲ್ಲ. ಹೌದು, ಈ ಮದುವೆ ಆಮಂತ್ರಣದ ಜೊತೆಗೆ ಕೆಲವೊಂದು ಚಿಕ್ಕ ಚಿಕ್ಕ ಡಬ್ಬಗಳನ್ನು ಈ ಜೋಡಿ ನೀಡಿದೆ. ಒಂದು ಡಬ್ಬದಲ್ಲಿ ತೀರ್ಥಹಳ್ಳಿ ಉಪ್ಪಿನಕಾಯಿ, ಮತ್ತೊಂದರಲ್ಲಿ ಬಂಗಾಳದ ಸ್ಪೆಷಲ್ ರಸಗುಲ್ಲ, ಮತ್ತು ದಾಸವಾಳದ ಬೀಜಗಳನ್ನು ನೀಡಿದ್ದಾರೆ.  ಮರದ ಒಂದು ಟ್ರೇನಲ್ಲಿ ಇಷ್ಟೆಲ್ಲಾ ವಸ್ತುಗಳನ್ನು ನೋಡಿ ತುಂಬಾ ಖುಷಿಯಾಯ್ತು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags