ಸುದ್ದಿಗಳು

ರಜನಿಕಾಂತ್ ಮುಂದಿನ ಚಿತ್ರದಲ್ಲಿ ಈ ನಟಿ!!

ಚೆನ್ನೈ,ಆ.18: ರಜನಿಕಾಂತ್ ‘ಕಾಲ’ ಸಿನಿಮಾದ ನಂತರ 2.0 ಸಿನಿಂಆ ಬಿಡುಗೆಡೆಯಾಗಬೇಕಿದೆ. ಇದಾದ ನಂತರ ರಜನಿ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದರೆ ಎಂಬ ಕುತೂಹಲವಿತ್ತು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಸಿದ್ಧ ಸಿನಿಮಾಟೋಗ್ರಾಫರ್‌ ಕೆ.ಯು. ಮೋಹನನ್‌ ಪುತ್ರಿ ಮಾಳವಿಕಾ ಮೋಹನನ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಪ್ರಣಯ ಮಾಡಲಿದ್ದಾರೆ.

ರಜನೀಕಾಂತ್‌ ರ ಮುಂಬರುವ ಆಕ್ಷನ್-ಡ್ರಾಮಾ ಚಿತ್ರದ ಹೆಸರು ಮಾತ್ರ ಇನ್ನೂ ಅಧಿಕೃತವಾಗಿಲ್ಲ.ಆದರೆ ಈ ಚಿತ್ರದಲ್ಲಿ ಮಾಳವಿಕಾ ನಟಿಸಲಿದ್ದು, ರಜನಿಕಾಂತ್‌ ಜೊತೆ ಪ್ರಣಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶಿಸುತ್ತಿರುವ, ಕಾಲಿವುಡ್‌ ನ ಅತಿ ಹೆಚ್ಚು ಬಜೆಟ್‌ ನ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಲಿದ್ದಾರೆ. ಶೂಟಿಂಗ್‌ ಡೆಹರಾಡೂನ್‌, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯಲಿದೆ. ಡಾರ್ಜಲಿಂಗ್‌ನಲ್ಲೂ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದ್ದು ರಜನೀಕಾಂತ್‌ -ಮಾಳವಿಕಾ ನಡುವಿನ ರೊಮ್ಯಾಂಟಿಕ್‌ ಹಾಡನ್ನು ಯುರೋಪ್‌ನಲ್ಲಿ ಚಿತ್ರೀಕರಿಸಲು ಚಿತ್ರ ತಂಡ ಆಲೋಚಿಸಿದೆಯಂತೆ..

 

Tags