ಸುದ್ದಿಗಳು

ಟ್ರೈಲರ್ ನಿಂದ ಮೋಡಿ ಮಾಡುತ್ತಿರುವ ‘ಮಳೆಬಿಲ್ಲು’ ಸಿನಿಮಾ

‘ಮಳೆಬಿಲ್ಲು’.. ಈ ಹೆಸರು ಕೇಳುತ್ತಿದ್ದಂತೆ ತಟ್ಟನೇ ನಮಗೆ ನೆನಪಾಗುವುದು ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯಿಸಿದ್ದ ‘ಚಕ್ರವರ್ತಿ’ ಚಿತ್ರದ ‘ಒಂದು ಮಳೆಬಿಲ್ಲು..” ನೆನಪಾಗುತ್ತದೆ. ಈಗ ಅದೇ ಹೆಸರಿನಲ್ಲೊಂದು ಸಿನಿಮಾ ಬರುತ್ತಿದ್ದು, ಚಿತ್ರಕ್ಕೆ ಹೊಸಬರಾದ ನಾಗರಾಜ್ ಹಿರಿಯೂರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇತ್ತಿಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯ ಕಾರ್ಯಕ್ರಮ ಸಮಾರಂಭ ನಡೆದಿದ್ದು, ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಫಿಲಂ ಛೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ್ರು, ಭಾಮಾ ಹರೀಶ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಇಲ್ಲಿ ಒಂದು ನವಿರಾದ ಪ್ರೇಮಕಥೆಯಿದೆ. ಈ ಚಿತ್ರವು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಸದ್ಯ ಸೆನ್ಸಾರ್ ಹಂತದಲ್ಲಿದೆ. ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತ ನಿರ್ದೇಶನವಿದ್ದು, ಚಿತ್ರದಲ್ಲಿ 10 ಹಾಡುಗಳಿವೆಯಂತೆ.

ನಿರ್ದೇಶಕರು ಈ ಚಿತ್ರದಲ್ಲಿ ಪ್ರತಿಯೊಬ್ಬ ಯುವಕನ ಜೀವನದಲ್ಲಿಯೂ 7 ಬಣ್ಣಗಳಿಂದ ರಚನೆಯಾಗುವ ‘ಮಳೆಬಿಲ್ಲು’ವಿನಂತಹ ಹುಡುಗಿಯೊಬ್ಬಳು ಇದ್ದೇ ಇರುತ್ತಾಳೆ. ಅಂತಹ ಒಂದು ಹುಡುಗಿಯೊಬ್ಬಳು ನಾಯಕನ ಜೀವನದಲ್ಲಿ ಬಂದಾಗ ಆತನ ಬದುಕು ಹೇಗೆ ಬದಲಾವಣೆಯಾಗುತ್ತದೆ ಎಂಬುದನ್ನು ತೋರಿಸಲಿದ್ದಾರೆ.

ಇನ್ನು ನಾಯಕ ಶರತ್ ಈ ಹಿಂದೆ ‘ಕ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಹೈಸ್ಕೂಲ್ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದು, ‘ಶಂಖನಾದ’ ಖ್ಯಾತಿಯ ನಯನರಿಗೆ ಇದು ಮೂರನೇಯ ಸಿನಿಮಾ. ಮತ್ತೊಬ್ಬ ನಾಯಕಿ ಸಂಜನಾ ಇಲ್ಲಿ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಕಿರ್ಲೋಸ್ಕರ್ ಸತ್ಯನಾರಾಯಣ್, ಮೈಕೋ ನಾಗಾರಾಜ್, ಶ್ರೀನಿವಾಸ ಪ್ರಭು, ಮಹಾದೇವ್, ಚಂದನ್, ಡಿಫರೆಂಟ್ ಡ್ಯಾನಿ, ಮೀಸೆ ಅಂಜನಪ್ಪ, ಕೃಷ್ಣ ಮೂರ್ತಿ, ಡಿ.ಕೆ.ಯಶೋಧ, ರವಿತೇಜ, ಹರ್ಷಿತ, ಪ್ರಜ್ವಲ್, ದಮಯಂತಿ ನಾಗಾರಾಜ್, ಸೌಮ್ಯ, ಸೇರಿದಂತೆ ಇತರರು ಅಭಿನಯಿಸಿದ್ದಾರೆ.

ಪ್ರಥಮ ಚುಂಬನದ ಬಗ್ಗೆ ಹೇಳಿಕೊಂಡ ‘ಶೃಂಗಾರದ ಹೂವು’ ಸೋನಲ್ ಮೊಂಥೆರೋ..!!!

#malebillu, #kannada, #movie, #trailor, #realsed,#balkaninews #filmnews, #kannadasuddigalu

Tags