ಸುದ್ದಿಗಳು

‘ಮಾಲ್ಗುಡಿ ಡೇಸ್’ ಕನ್ನಡಕ್ಕೆ ಡಬ್ ಆಗಲಿ : ಟ್ವಿಟರ್ ಅಭಿಯಾನ

ಆರ್.ಕೆ.ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನವೇ ‘ಮಾಲ್ಗುಡಿ ಡೇಸ್’. ಇದೇ ಸಂಕಲನವನ್ನು ಆಧಾರಿಸಿ ಕನ್ನಡ ನಟ, ನಿರ್ದೇಶಕ ಶಂಕರ್ ನಾಗ್ ಟಿವಿ ಧಾರಾವಾಹಿ ನಿರ್ದೇಶಿಸಿದರು.

ಬೆಂಗಳೂರು, ಆ. 07: 1986 ರಲ್ಲಿ ದೂರದರ್ಶನ ವಾಹಿನಿಯಲ್ಲಿ ಜನಪ್ರಿಯವಾಗಿದ್ದ ಧಾರಾವಾಹಿ ‘ಮಾಲ್ಗುಡಿ ಡೇಸ್’ . ಟಿ.ಎಸ್.ನರಸಿಂಹನ್ ನಿರ್ಮಾಣದಲ್ಲಿದ್ದ ಈ ಧಾರಾವಾಹಿಯಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಹಿಂದಿ ಭಾಷೆಯಲ್ಲಿ ತಯಾರಾಗಿರುವ ‘ಮಾಲ್ಗುಡಿ ಡೇಸ್’ ಇದೀಗ ಕನ್ನಡಕ್ಕೂ ಬರಲಿ ಎಂಬ ಕೂಗು ಕೇಳಿ ಬರುತ್ತಿದೆ.

ಡಬ್ಬಿಂಗ್ ಗೆ ಅವಕಾಶಗಳಿಲ್ಲ

ಬೇರೆಲ್ಲಾ ಭಾಷೆಯಲ್ಲಿರುವಂತೆ ಕನ್ನಡದಲ್ಲಿ ಡಬ್ಬಿಂಗ್ ಕುರಿತಂತೆ ಪೂರ್ಣ ವಿರಾಮ ಬಿದ್ದಿಲ್ಲ. ಮೊದಲಿನಿಂದಲೂ ಈ ಡಬ್ಬಿಂಗ್ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ನಡುವೆ ನ್ಯಾಯಾಲಯವು ಡಬ್ಬಿಂಗ್ ಬಗ್ಗೆಯೇ ತೀರ್ಪನ್ನು ನೀಡಿತ್ತು. ಚಂದನವನದಲ್ಲಿ ಡಬ್ಬಿಂಗ್ ಸಿನಿಮಾ/ಕಾರ್ಯಕ್ರಮಗಳಿಗೆ ಅಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಹಲವಾರು ವಿರೋಧಗಳ ನಡುವೆಯೂ ‘ಧೀರ’,’ವೇಗ ಮತ್ತು ಉದ್ವೇಗ’,’ಸತ್ಯದೇವ್ ಐಪಿಎಸ್’ ಸೇರಿದಂತೆ ಹಲವು ಡಬ್ಬಿಂಗ್ ಚಿತ್ರಗಳು ಕನ್ನಡದಲ್ಲಿ ತೆರೆ ಕಂಡಿದೆ.

ಮಾಲ್ಗುಡಿ ಡೇಸ್

ಕನ್ನಡಿಗರೇ ನಿರ್ದೇಶಿಸಿ,ಕನ್ನಡ ಕಲಾವಿದರೇ ಅಭಿನಯಿಸಿ ಕರ್ನಾಟಕದಲ್ಲೇ ಚಿತ್ರೀಕರಿಸಲ್ಪಟ್ಟ ಧಾರಾವಾಹಿ ಮಾಲ್ಗುಡಿ ಡೇಸ್. ಇದೀಗ ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಬರಲಿ ಎಂಬ ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿದೆ. ಮಾಲ್ಡುಡಿಡೇಸ್ ಇನ್ ಕನ್ನಡ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ, ಬೆಂಬಲ ಸೂಚಿಸಲು ಕನ್ನಡ ಗ್ರಾಹಕರ ಕೂಟ ಕರೆ ನೀಡಿದೆ.

”ಶಂಕರನಾಗ್ ಅವರು ನಿರ್ದೇಶಿಸಿರುವ ಮಾಲ್ಗುಡಿ ಡೇಸ್ ಕನ್ನಡಿಗರಿಗೆ ಕನ್ನಡದಲ್ಲಿ ಆನಂದಿಸಲು ಅವಕಾಶವಿರಬೇಕಲ್ಲವೇ? ಹಾಗಿದ್ದರೆ 8 ಆಗಸ್ಟ್ 2018 ಸಂಜೆ 6 ರಿಂದ 8 ರವರೆಗೆ ಟ್ವೀಟ್ ಮಾಡಲು ಮರೆಯದಿರಿ” ಅಂತ ಕರೆ ಕೊಟ್ಟಿದೆ.

ಮತ್ತೆ ಡಬ್ಬಿಂಗ್ ಕೂಗು

‘ಮಾಲ್ಗುಡಿ ಡೇಸ್’ ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಬೇಕೆಂಬ ಕೂಗು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. 2012ರಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು ಕನ್ನಡದ ಸಬ್ ಟೈಟಲ್ ನಲ್ಲಿ ಪ್ರಸಾರ ಮಾಡಿತ್ತು. ಅನಂತನಾಗ್, ರಮೇಶ್ ಭಟ್, ಲೋಕನಾಥ್, ವೈಶಾಲಿ ಕಾಸರವಳ್ಳಿ, ಮನದೀಪ್ ರಾಯ್, ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್ ಮುಂತಾದವರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

Tags

Related Articles