ಚಿತ್ರ ವಿಮರ್ಶೆಗಳುಸುದ್ದಿಗಳು

ಸ್ವಚ್ಚ ಪ್ರೀತಿಯಲ್ಲಿ ಸ್ವೇಚ್ಛೆಯನ್ನು ಮೀರುವ ಕಾಮದ ಮುಖವಾಡ!

ಕಾಮುಕ ವ್ಯಾಘ್ರತನದ ಮೇಲೆ ಪ್ರೇಮದ ಮುಖವಾಡ ಧರಿಸಿ ಹೆಣ್ಣನ್ನು ಮೋಹಿಸಿ, ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಮಾತ್ರವಲ್ಲದೇ ಗತಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ….! ರೀತಿಯ ಕಥಾನಕಗಳು ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಹಲವು ರೀತಿಯಲ್ಲಿ ವಾಸ್ತವಾಗಿ ತೆರೆಯ ಮೇಲೆ ಪ್ರದರ್ಶಿಸುವುದರ ಮೂಲಕ ಹೆಣ್ಣಿನ ಮೇಲೆ ನಡೆಯುತ್ತಿರುವ ಹತ್ಯಾಚಾರಗಳನ್ನು ಪ್ರೇಮ ನಾಟಗಳನ್ನು ಪ್ರತಿರೋಧಿಸುವ ಧ್ವನಿಗಳನ್ನು ಹಲವಾರು ಸಿನಿಮಾಗಳಲ್ಲಿ ನೋಡುತ್ತಲೇ ಬಂದಿದ್ದೇವೆ, ಆದರೆ ಸಿನಿಮಾ ನೋಡುವಾಗ ಮಾತ್ರ ಹೆಣ್ಣಿನ ಮೇಲೆ ಕನಿಕರದ ಕಣ್ಣೀರು ಬರುತ್ತವೆ ಜೊತೆಗೆ ಅವರಿಗೆ ಪಾಪದ ಪಾಲನ್ನು ಹಾಕುವುದರ ಮೂಲಕ ಕೇವಲ ಸಿನಿಮಾ ಮುಗಿಯುವವರೆಗೆ ಮಾತ್ರ ಈ ಹೆಣ್ಣಿನ ಪ್ರತಿಭಟನೆಗೆ ಧ್ವನಿ ಸೇರಿಸುತ್ತಾರೆ ಅಷ್ಟೇ.! ನಾನ್ಯಾಕೆ ಈ ವಿಷಯನ್ನು ಹೇಳುತ್ತಿದ್ದೇನೆ ಎಂದರೆ ಇತ್ತೀಚಿಗೆ ಈ ತರಹದ ವಿಷಯಗಳಿಗೆ ಹೆಣ್ಣಿನಿಂದಲೇ ಸಮರ್ಥ ಪ್ರತಿಭಟನೆ ವ್ಯಕ್ತವಾಗುವ, ಅವಳೇ ಸಿಡಿದೆದ್ದು ‘ಪಾಠ’ ಕಲಿಸುವುದನ್ನು ತೋರಿಸುವಂಥ ಸಿನಿಮಾಗಳು ಕೊಂಚ ಕಡಿಮೆಯಾಗಿವೆ.

ಆದರೆ 2014ರಲ್ಲಿ ಬಿಡುಗಡೆಯಾಗಿ ಸಾಕಷ್ಟು ವಿಮರ್ಶೆಗಳಿಗೆ ಒಳಗಾಗಿದ್ದ ‘ಮಾಲಿನಿ 22 ಪಲಯಮ್‌ಕೊಟ್ಟೈ’ ಸಿನಿಮಾ ಹೀಗೆ ಅನ್ಯಾಯಕ್ಕೊಳಗಾದ ಹೆಣ್ಣುಮಗಳೊಬ್ಬಳು ದುರುಳರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯ ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಶ್ರೀಪ್ರಿಯಾ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಮೋಸ ಹೋದ ಹೆಣ್ಣಿನ ಕತೆಯನ್ನು ಹೇಳುವ ಮತ್ತು ಅದನ್ನು ಮೆಟ್ಟಿ ನಿಲ್ಲುವ ರೀತಿಯನ್ನು ಈ ಸಿನಿಮಾದಲ್ಲಿ ಕಾಣಬಹುದು.

ಈ ಚಿತ್ರದಲ್ಲಿ ನಾಯಕಿ ಮಾಲಿನಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು. ಕೆನಡಾ ದೇಶಕ್ಕೆ ಹೋಗಿ ವೃತ್ತಿಬದುಕನ್ನು ರೂಪಿಸಿಕೊಳ್ಳುವ ಕನಸು ಕಟ್ಟಿಕೊಂಡಿರುತ್ತಾಳೆ. ಆ ಸಮಯದಲ್ಲಿ ಅವಳನ್ನು ಟ್ರಾವೆಲಿಂಗ್ ಏಜನ್ಸಿಯ ವರುಣ್ ಪ್ರೇಮಿಸುವ ನಾಟಕವಾಡಿ ಮೋಹಿಸಿ ಮೋಸಗೊಳಿಸುತ್ತಾನೆ. ಈ ಕಾಮುಕ ವ್ಯಾಘ್ರನ ಜೊತೆ ಅವನ ಮೇಲಾಧಿಕಾರಿಯೂ ಶಾಮೀಲಾಗಿರುತ್ತಾನೆ. ಪ್ರೀತಿ ಮಾಡಿ ತಪ್ಪಿಗೆ ಕೊನೆಗೆ ಅವರ ತಂತ್ರಕ್ಕೆ ಬಲಿಯಾಗಿ ಮಾಲಿನಿ ಜೈಲಿಗೂ ಸೇರಬೇಕಾಗುತ್ತದೆ. ಜೈಲಿನಿಂದ ಹೊರಬಂದ ಮಾಲಿನಿ ತನ್ನನ್ನು ವಂಚಿಸಿದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಈ ಚಿತ್ರದ ಕಥೆ.

ಬಿಗಿಯಾದ ಚಿತ್ರಕಥೆ, ಹದವಾದ ಸಂಗೀತ ಮತ್ತು ನಿತ್ಯಾ ಮೆನನ್‌ಳ ಪ್ರಬುದ್ಧ ನಟನೆ ಈ ಚಿತ್ರವನ್ನು ಒಂದು ರೀತಿಯ ಹುಡುಗಿರ ಕನಸುಗಳನ್ನು ಹಾಗು ಅವರ ಕನಸುಗಳ ಕತ್ತು ಹಿಸುಕಿ ಮೋಹಕತೆಯಿಂದ ಕೊಲೆ ಮಾಡಿರುವ ಪಾತ್ರಗಳನ್ನು ಕಣ್ಣಿಗೆ ಕಟ್ಟುವ ಹಾಗೆ ನೈಜತೆಯಲ್ಲಿ ನಿರ್ದೇಶಕರು ತೆರೆಯ ಮೇಲೆ ತಂದಿರುವುದು ನಿಜಕ್ಕೂ ವಿಮರ್ಶಾತ್ಮಕ…. ಹುಡುಗಿಯಾಗಿ, ಅಸಹಾಯಕ ಹೆಣ್ಣಾಗಿ, ಸಿಡಿದೆದ್ದ ರೋಷಾಗ್ನಿಯ ಮುಖವಾಗಿ ಅವರು ಮೂರು ಛಾಯೆಗಳಲ್ಲಿ ನಿತ್ಯಾ ಮೆನನ್ ಕಾಣಿಸಿಕೊಂಡಿರುವುದು ನಿಜಕ್ಕೂ ಹೆಣ್ಣಿನ ರೋಚಕತೆಯ ರೋಧನೆಯನ್ನು ಎತ್ತಿ ಹಿಡಿಯುವಂತಿದೆ.

Tags