ಸುದ್ದಿಗಳು

ನಿರಾಶ್ರಿತರಿಗೆ ದೈರ್ಯ ತುಂಬುವ ಕಾರ್ಯದಲ್ಲಿ ಮಾಲಿವುಡ್ ಸೂಪರ್ ಸ್ಟಾರ್!

ತಿರುವನಂತಪುರ, ಆ.12: ಕೇರಳದ ಹಲವೆಡೆ ಕಳೆದ ರಾತ್ರಿಯಿಂದ ಮಳೆಯ ಆರ್ಭಟ ಸ್ವಲ್ಪ ತಗ್ಗಿದ್ದು, ಪ್ರವಾಹದ ಅಬ್ಬರ ಇಳಿಮುಖವಾಗುತ್ತಿದೆ. ಇಡುಕ್ಕಿ ಜಲಾಶಯದ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಆದರೂ, ರಾಜ್ಯ ಸರ್ಕಾರ ಇಡುಕ್ಕಿ ಮತ್ತು ವೈನಾಡು ಸೇರಿದಂತೆ 14 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯಿಂದ ರೆಡ್‌ ಅಲರ್ಟ್‌ ಘೋಷಿಸಿದೆ. ಇದರಿಂದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಮನೆಗಳಿಗೆ ಮರಳಲು ಹಿಂಜರಿಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಂಮತ್ರಿ ಪರಿಹಾರ ನಿಧಿಗೆ ಸಾರ್ವಜನಿಕ ವಲಯದಿಂದ ದೇಣಿಗೆ ಹರಿದು ಬರುತ್ತಿದೆ. ಜೊತೆಗೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿಯವರು ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರಿಗೆ ದೈರ್ಯ ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನೂ ಮಳೆಯಾಗುವ ಸಾಧ್ಯತೆ

ರಾಜ್ಯದ 14 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ನೆಲೆ ಕಳೆದುಕೊಂಡಿದ್ದಾರೆ. ಅಲಪುರ, ಎರ್ನಾಕುಲಂ, ಕೋಟ್ಟಾಯಂ, ಮಲಪ್ಪುರಂ, ಕಲ್ಲಿಕೋಟೆ ಮತ್ತು ಪಾಲಕ್ಕಾಡ್‌ ನಲ್ಲಿ ಪ್ರವಾಹ ಮುಂದುವರಿದಿದೆ. ಆಗಸ್ಚ್ 14ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸೆಲೆಬ್ರೆಟಿಗಳ ಸಹಾಯ ಹಸ್ತ

ಹವಾಮಾನ ವೈಫರಿತ್ಯಕ್ಕೆ ಸಾರ್ವಜನಿಕ ಜೀವನ ಅಸ್ಥವ್ಯಸ್ತಗೊಂಡಿದೆ.  ಖ್ಯಾತ ನಟ ಮಮ್ಮೂಟ್ಟಿ ಸೇರಿದಂತೆ ಅನೇಕ ನಟ-ನಟಿಯರು ಹಸ್ತ ಚಾಚಿದ್ದಾರೆ ಎನ್ನಲಾಗಿದೆ. ಜೊತೆಗೆ ಕಾಲಿವುಡ್ ಸ್ಟಾರ್ ಬ್ರದರ್ಸ್ ಸೂರ್ಯಾ ಹಾಗೂ ಕಾರ್ತಿಕ್ 25 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಜೊತೆಗೆ ಕನ್ನಡ ಸಿನಿಮಾ ನಟರು ಸಹ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags