ಸುದ್ದಿಗಳು

‘ಮನೆ ಮಾರಾಟಕ್ಕಿದೆ’ ಟ್ರೈಲರ್ ರಿಲೀಸ್: ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಶೃತಿ ಹರಿಹರನ್

ಮಂಜು ಸ್ವರಾಜ್ ನಿರ್ದೇಶನದ ‘ಮನೆ ಮಾರಾಟಕ್ಕಿದೆ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದು ಒಳ್ಳೆಯ ಕಾಮೆಂಟ್ ಗಳನ್ನು ಪಡೆಯುತ್ತಿದೆ.

ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಸಾಧು ಕೋಕಿಲಾ, ಚಿಕ್ಕಣ್ಣ, ರವಿಶಂಕರ ಗೌಡ, ಕುರಿ ಪ್ರತಾಪ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಯಕಿಯರಾಗಿ ಶೃತಿ ಹರಿಹರನ್ ಮತ್ತು ಕಾರುಣ್ಯ ರಾಮ್ ಅಭಿನಯಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಮೋಡಿ ಮಾಡಿತ್ತು. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಸಾಮಾನ್ಯವಾಗಿ ಒಂದು ಸಿನಿಮಾವೆಂದರೆ ಒಬ್ಬರು ಅಥವಾ ಇಬ್ಬರು ಹಾಸ್ಯ ಕಲಾವಿದರಿರುತ್ತಾರೆ. ಹೀಗಿರುವಾಗ ಪ್ರಮುಖ ಹಾಸ್ಯ ನಟರೆಲ್ಲರೂ ಒಗ್ಗೂಡಿದರೆ ಹೇಗಿರಬೇಡ..?.. ಖಂಡಿತಾ ಅಲ್ಲೊಂದು ಕುತೂಹಲಕಾರಿ ವಿಷಯವನ್ನೇ ಒಳಗೊಂಡಿರುತ್ತದೆ.

ಇನ್ನು ಈ ಟ್ರೈಲರ್ ಸಹ ಕುತೂಹಲಕಾರಿಯಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಇದೇ ನವೆಂಬರ್ 15 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಎಸ್. ವಿ ಬಾಬು ಬಂಡವಾಳ ಹೂಡಿದ್ದಾರೆ.

ಅಮೆರಿಕಾದಲ್ಲಿ ಸ್ಯಾಂಡಲ್ ವುಡ್ ಸೀತಾರಾಮ

#ManeMaratakkide #ManeMaratakkideMovie  #Chikkanna #Sadhukokila #ShruthiHariharan ‍#kannadaSuddigalu

Tags