ಸುದ್ದಿಗಳು

‘ಮಣಿಕರ್ಣಿಕಾ’ ಸಿನಿಮಾ ನೋಡಲಿದ್ದಾರೆ ರಾಷ್ಟ್ರಪತಿ ರಾಮ್‌ ನಾಥ್ ಕೋವಿಂದ್

ಮುಂಬೈ, ಜ.18: ಬಾಲಿವುಡ್‌ ನಲ್ಲಿ ಸದ್ಯ ದೊಡ್ಡ ದೊಡ್ಡ ಚಿತ್ರಗಳನ್ನು ಮಾಡುವ ಮೂಲಕ ಬಹಳಷ್ಟು ನೀರೀಕ್ಷೆ ಹುಟ್ಟಿಸಿರುವ ಕಂಗನಾ ಇದೀಗ ‘ಮಣಿಕರ್ಣಿಕಾ’ ಸಿನಿಮಾ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್‌ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದ್ದು, ವಿಶೇಷವಾಗಿದೆ. ಯಾಕಂದರೆ ಈ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ರಾಷ್ಟ್ರಪತಿಗಳು.

ವಿಶೇಷ ಪರದೆಯಲ್ಲಿ ವೀಕ್ಷಣೆ

ಹೌದು, ‘ಮಣಿಕರ್ಣಿಕಾ’ ಚಿತ್ರದ ಟ್ರೇಲರ್ ರಿಲೀಸ್ ಆದಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟಿಸಿತ್ತು. ಅಷ್ಟೆ ಅಲ್ಲ ಅವರ ಬೋಲ್ಡ್ ಆಕ್ಟಿಂಗ್ ಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದರು. ಈಗಾಗಲೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಷ್ಟೆ ಅಲ್ಲ ಇದೇ ತಿಂಗಳ 25 ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಇದರ ಬೆನ್ನಲ್ಲೇ ಇದೀಗ ರಾಷ್ಟ್ರಪತಿ ರಾಮ್‌ ನಾಥ್ ಕೋವಿಂದ್ ಈ ಸಿನಿಮಾವನ್ನು ವಿಶೇಷ ತೆರೆಯಲಿ ವೀಕ್ಷಣೆ ಮಾಡಲಿದ್ದಾರೆ. ಇನ್ನು ಈ ಸಿನಿಮಾ ವಿಶೇಷ ತೆರೆಯ ಅವಕಾಶವನ್ನು ಜೀ ಎಂಟಟೈನರ್ ಮಾಡಿಕೊಟ್ಟಿದೆ.

ರೋಮಾಂಚನವಾಗಿತ್ತು ಟ್ರೇಲರ್

ಝಾನ್ಸಿರಾಣಿ ಲಕ್ಷ್ಮೀಬಾಯಿ ಪಾತ್ರವೇ ಸಖತ್ ಪವರ್‌ ಫುಲ್, ಆ ಪಾತ್ರಕ್ಕಾಗಿ ಕಂಗನಾ ಶ್ರದ್ಧೆಯಿಂದ ತಯಾರಾಗಿರೋದು ಟ್ರೇಲರ್‌ನಲ್ಲಿ ಎದ್ದು ಕಾಣಿಸುತ್ತಿದೆ. ಯುದ್ಧದ ಸುತ್ತವೇ ಈ ಸಿನಿಮಾ ಸುತ್ತುತ್ತೆ. ಇಲ್ಲಿ ಯುದ್ಧ ಸನ್ನಿವೇಶಗಳೇ ಹೆಚ್ಚಾಗಿವೆ. ಈ ಯುದ್ದ ಸನ್ನಿವೇಶಗಳಿಗಾಗಿ ಕಂಗನಾ, ಕುದುರೆ ಸವಾರಿ, ಕತ್ತಿ ವರಸೆ ಕಲಿತು, ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಝಾನ್ಸಿರಾಣಿಯ ಜೀವನ ಕತೆಯಾಧರಿಸಿದ ಈ ಸಿನಿಮಾವನ್ನು ಇಬ್ಬರು ನಿರ್ದೇಶಕರು, ನಿರ್ದೇಶನ ಮಾಡಿದ್ಧಾರೆ. ಅರ್ಧ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ರೆ, ಇನ್ನರ್ಧ ಸಿನಿಮಾವನ್ನು ಕಂಗನಾ ಅವರೇ ನಿರ್ದೇಶನ ಮಾಡಿರೋದು ವಿಶೇಷ. ಕೆ.ವಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರಂತೆ. ‘ಮಣಿಕರ್ಣಿಕಾ’ ಸಿನಿಮಾ ಜನವರಿ 25ಕ್ಕೆ ರಿಲೀಸ್ ಆಗ್ತಿದೆ. ಬಿಡುಗಡೆಯಾಗುವ ಮೊದಲೇ ಈ ಮಟ್ಟಿಗೆ ಸದ್ದು ಮಾಡುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ಮಟ್ಟಕ್ಕೆ ಸೌಂಡ್ ಮಾಡುತ್ತೆ ಅಂತಾ ಕಾದು ನೋಡಬೇಕು.

#manikarnikahindimovie #bollywood #kanganaranaut #balkaninews

Tags