ಸುದ್ದಿಗಳು

ಮೋದಿಜಿ ಬಯೋಪಿಕ್ ನಲ್ಲಿ ಅಮಿತ್ ಷಾ ಪಾತ್ರ ನಿರ್ವಹಿಸಲಿರುವ ಮನೋಜ್ ಜೋಶಿ

ಮುಂಬೈ, ಫೆ.14:

ಬಯೋಪಿಕ್ ಸಿನಿಮಾಗಳಿಗೆ ಸದ್ಯ ಸಿನಿಮಾ ರಂಗದಲ್ಲಿ ಕಡಿಮೆ ಇಲ್ಲ. ಯಾಕಂದ್ರೆ ಈಗಾಗಲೇ ಅದೆಷ್ಟೋ ರಾಜಕೀಯ ಮುಖಂಡರ ಸಿನಿಮಾಗಳು ತೆರೆ ಕಂಡಿವೆ. ಇನ್ನು ಕೆಲವೊಂದಿಷ್ಟು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿದೆ. ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ಬರುತ್ತಿರುವುದು ಗೊತ್ತಿರುವ ವಿಚಾರವೇ. ಇದೀಗ ಈ ಸಿನಿಮಾದಲ್ಲಿ ಅಮಿತ್ ಷಾ ಪಾತ್ರವನ್ನು ಮನೋಜ್ ಜೋಶಿ ನಿರ್ವಹಿಸುತ್ತಿದ್ದಾರೆ.

ಅಮಿತ್ ಷಾ ಪಾತ್ರದಲ್ಲಿ ಮನೋಜ್ ಜೋಶಿ

ಹೌದು, ಮೋದಿಯ ರಾಜಕೀಯ ಜೀವನದಲ್ಲಿ ಸದ್ಯ ಅಮಿತ್ ಷಾ ಅವರ ಪಾತ್ರ ತುಂಬಾ ಮುಖ್ಯವಾದ್ದದು. ಯಾಕಂದ್ರೆ ಮೋದಿಯ ಜೊತೆ ಸದಾ ಇರುವಂತಹ ಪಾತ್ರಗಳಲ್ಲಿ ಅಮಿತ್ ಷಾ ಕೂಡ ಒಬ್ಬರು. ಇದೀಗ ಈ ಪಾತ್ರ ನಿರ್ವಹಿಸಬೇಕೆಂದರೆ ಅದಕ್ಕೆ ತಕ್ಕುದಾದ ವ್ಯಕ್ತಿತ್ವ, ತಕ್ಕುದಾದ ಪಾತ್ರ ತುಂಬಾ ಮುಖ್ಯವಾಗಿದೆ. ಇದೀಗ ಇಂಥಹ ಜವಬ್ದಾರಿಯನ್ನು ನಟ ಮನೋಜ್ ಜೋಶಿ ನಿಭಾಯಿಸುತ್ತಿದ್ದಾರೆ.

ಒಮುಂಗ್ ಕುಮಾರ್ ನಿರ್ದೇಶನದ ಸಿನಿಮಾ

ರಾಜಕೀಯ ರಂಗದಲ್ಲಿ ಇದೊಂದು ಮುಖ್ಯವಾದ ಸಿನಿಮಾ ಅನ್ನೋದು ಹಲವರ ಮಾತು. ಇದೀಗ ಈ ಸಿನಿಮಾದಲ್ಲಿ ಮಾಡುವಂತಹ ಪಾತ್ರಗಳು ಕೂಡ ತುಂಬಾ ಮುಖ್ಯವಾಗಿರುವಂತಹದ್ದು. ಇದೀಗ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಒಮುಂಗ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. ಇನ್ನು ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಿರ್ವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ನಟಿ ರಾಖಿ ಸಾವಂತ್ ಸಲಹೆ

#narendramodi #narendramodibiopic #bollywood #hindimovies #manojjoshi #amitashahandmanojjoshi #balkaninews

Tags

Related Articles