ಸುದ್ದಿಗಳು

2019 ರಲ್ಲಿ ಮನೋರಂಜನ್ ಬ್ಯುಸಿ: ಒಟ್ಟು ನಾಲ್ಕು ಚಿತ್ರಗಳಿಗೆ ಸಹಿ

‘ಸಾಹೇಬ’, ‘ಬೃಹಸ್ಪತಿ’ ಚಿತ್ರಗಳ ನಂತರ ಚ್ಯೂಸಿಯಾದ ಮನು

ಬೆಂಗಳೂರು,ನ.29: ವಿ. ರವಿಚಂದ್ರನ್ ಅವರ ಸುಪುತ್ರ ಮನೋರಂಜನ್ ಇದೀಗ ಚ್ಯೂಸಿಯಾಗಿದ್ದಾರೆ. ಈ ಮೊದಲು ಅಭಿನಯಿಸಿದ್ದ ‘ಸಾಹೇಬ’, ಹಾಗೂ ‘ಬೃಹಸ್ಪತಿ’ ಚಿತ್ರಗಳ ತಕ್ಕ ಮಟ್ಟಿಗಿನ ಯಶಸ್ಸಿನ ನಂತರ ಅವರು ಜೆ. ಚಂದ್ರಕಲಾ ನಿರ್ದೇಶನ ಮಾಡುತ್ತಿರುವ ‘ಚಿಲ್ಲಂ’ ನಲ್ಲಿ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಂದಿನ ವರ್ಷ ನಾಲ್ಕು ಚಿತ್ರಗಳು

ಕೆಲವು ದಿನಗಳ ಹಿಂದೆಯಷ್ಟೇ ಮನೋರಂಜನ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೀಗ ಸುಧಾರಿಸಿಕೊಂಡಿರುವ ಅವರು ‘ಚಿಲ್ಲಂ’ ನಲ್ಲಿ ತೊಡಗಿಕೊಂಡಿದ್ದು, ಮುಂದಿನ ವರ್ಷ ಒಟ್ಟು ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ನಾಲ್ಕು ಸಿನಿಮಾಗಳ ಕಥೆಯನ್ನು ಮೆಚ್ಚಿಕೊಂಡಿರುವ ಅವರು ಇನ್ನು ಮುಂದೆ ಬ್ಯೂಸಿಯಾಗಲಿದ್ದಾರೆ.ಸಂಕ್ರಾಂತಿಯಂದು ಮುಹೂರ್ತ

ಹೊಸಬರಾದ ಮನು ನಿರ್ದೇಶನದ ಚಿತ್ರದಲ್ಲಿ ಮನೋರಂಜನ್ ನಟಿಸಲಿದ್ದು, ಸಂಕ್ರಾಂತಿ ದಿನ ಮುಹೂರ್ತ ಆರಂಭವಾಗಲಿದೆ. ಅದರೊಂದಿಗೆ ಅವರ ಜನ್ಮದಿನದಂದು ಮತ್ತೊಂದು ಚಿತ್ರದ ಹೆಸರು ಘೋಷಣೆಯಾಗಲಿದೆ.

‘ಚಿಲ್ಲಂ’ಗಾಗಿ ಗೆಟೆಪ್ ಬದಲಾವಣೆ

ಸದ್ಯ ಮನು ಅಭಿನಯಿಸುತ್ತಿರುವ ‘ಚಿಲ್ಲಂ’ ಚಿತ್ರಕ್ಕಾಗಿ ಗೆಟೆಪ್ ಬದಲಿಸಿಕೊಂಡಿದ್ದಾರೆ. ಈ ಹಿಂದೆ ಲವ್ವರ್ ಬಾಯ್ ಆಗಿ ನಟಿಸಿದ್ದ ಅವರು ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪಾತ್ರಕ್ಕೆ ತಕ್ಕಂತೆ ದೇಹ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

“ಸ್ವಲ್ಪ ಅನಾರೋಗ್ಯ ಕಾರಣ 20 ದಿನಗಳ ಕಾರಣ ಆಸ್ಪತ್ರೆಯಲ್ಲಿಬೇಕಾಗಿತ್ತು. ಮೂರು ತಿಂಗಳ ಕಾಲ ಮೆಡಿಟೇಷನ್ ನಲ್ಲಿದ್ದ ಕಾರಣ ಬಾರ ಎತ್ತದಂತೆ ಸಲಹೆ ನೀಡಲಾಗಿತ್ತು. 10 ದಿನಗಳ ನಂತರ ಇದರಿಂದ ಮುಕ್ತಿ ಸಿಕ್ಕಿದ್ದು, ಮುಂದಿನ ಮೂರು ತಿಂಗಳ ನಂತರ ಚಿತ್ರೀಕರಣ ಆರಂಭವಾಗಲಿದೆ” ಎಂದು ಮನೋರಂಜನ್ ಹೇಳುತ್ತಾರೆ.

Tags

Related Articles