ಸುದ್ದಿಗಳು

ಸಿನಿಮಾಕ್ಕಾಗಿ ಈ ನಟ ಒಂದು ರೂಪಾಯಿ ಸಂಭಾವನೆ ಪಡೆದುಕೊಂಡರಂತೆ!!

‘ಮಾಂಟೋ’ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಉರ್ದು ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

ನಟ ಹಣದಾಸೆಯನ್ನು ಬಯಸದೆ ಒಂದು ಚಿತ್ರಕ್ಕೆ ಕೇವಲ ಒಂದು ರೂಪಾಯಿ ತೆಗೆದುಕೊಂಡಿದ್ದಾರಂತೆ

ಮುಂಬೈ,ಆ.30: ಹಲವಾರು ಕೋಟಿ ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಎಲ್ಲರೂ ತಮ್ಮ ಜೇಬು ತುಂಬಿಸುವುದರಲ್ಲೇ  ಕಾಯುತ್ತಿರುತ್ತಾರೆ.,ಇದರಲ್ಲಿ ಒಂದಷ್ಟು ಕೋಟಿಗಳು ಆತ ಚಿತ್ರದಲ್ಲಿನ ನಟರ ಜೇಬು ಸೇರುತ್ತವೆ. ಆದರೆ ಇಲ್ಲೊಬ್ಬ ನಟ ಹಣದಾಸೆಯನ್ನು ಬಯಸದೆ ಒಂದು ಚಿತ್ರಕ್ಕೆ ಕೇವಲ ಒಂದು ರೂಪಾಯಿ ತೆಗೆದುಕೊಂಡಿದ್ದಾರಂತೆ.. ಯಾರಾದರೂ ಒಂದು ರೂಪಾಯಿ ತೆಗೆದುಕೊಳ್ಳಬಹುದೇ ಎಂದು ನೀವು ಆಲೋಚಿಸುತ್ತಿದ್ದೀರಾ? ಹೌದು ಕೆಲವು ನಟರು ಏನನ್ನೂ ಬಯಸದೆ ಚಿತ್ರವನ್ನು ಒಪ್ಪಿಕೊಂಡು ಅಚ್ಚಕಟ್ಟಾಗಿ ಮುಗಿಸಿದ ಉದಾಹರಣೆಗಳು ಹಲವಾರು ಇವೆ.

Image result for manto movie

ಕೇವಲ ಒಂದು ರೂಪಾಯಿ

ತಮ್ಮ ವಿಶಿಷ್ಟ ನಟನೆಯ ಮೂಲಕ ಬಾಲಿವುಡ್​ನಲ್ಲಿ ಛಾಪು ಮೂಡಿಸಿರುವ ನಟ ನವಾಜುದ್ದೀನ್ ಸಿದ್ದಿಕಿ ‘ಮಾಂಟೋ’ ಸಿನಿಮಾದಲ್ಲಿ ನಟಿಸಲು ಕೇವಲ ಒಂದು ರೂಪಾಯಿ ಪಡೆದಿದ್ದಾಗಿ ಚಿತ್ರದ ನಿರ್ದೇಶಕಿ ನಂದಿತಾ ದಾಸ್ ಹೇಳಿದ್ದಾರೆ.

ಮಾಂಟೋ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಉರ್ದು ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಸೆಪ್ಟೆಂಬರ್​ನಲ್ಲಿ ತೆರೆಗೆ ಅಪ್ಪಳಿಸಲಿದೆ. ರಣ್​ವೀರ್ ಶೋರೆ, ದಿವ್ಯಾ ದತ್ತಾ, ಪುರಬ್ ಕೊಹ್ಲಿ, ರಾಜಶ್ರೀ ದೇಶ್​ಪಾಂಡೆ ಸೇರಿದಂತೆ ಹಲವು ನಟ- ನಟಿಯರು ಚಿತ್ರದಲ್ಲಿ ಸಂಭಾವನೆ ಪಡೆಯದೇ ನಟಿಸಿದ್ದಾರೆ.

 

Tags