ಸುದ್ದಿಗಳು

ಬಾಲಿವುಡ್ ಗೆ ಜಿಗಿದ ‘ಟಗರು’ ಪುಟ್ಟಿ!!

ಬಾಲಿವುಡ್ ನಿಂದ ಮಾನ್ವಿತಾಗೆ ಅವಕಾಶಗಳು ಬಂದಿವೆಯಾ?

ಮುಂಬೈ,ಜ.7: ಈಗ ಇನ್ನೊಂದು ಕನ್ನಡ ನಾಯಕಿ ಬಿ-ಟೌನ್ ಗೆ ಲಗ್ಗೆ ಇಟ್ಟಿದ್ದಾಳೆ .. ಸೂರಿ ಅವರ ‘ಟಗರು’ ಚಿತ್ರದಲ್ಲಿ ಮಿಂಚಿದ ಮಾನ್ವಿತಾ ಕಾಮತ್  ಈಗ ಮುಂಬೈಗೆ ಹಾರಿದ್ದು ಕೆಲ ದಿನಗಳು ಅಲ್ಲೇ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.. ಇತ್ತೀಚೆಗೆ ಮೋಹಿತ್ ಹೊಲನಿ ಮಾನ್ವಿತಾಳ ಫೋಟೋವನ್ನು ಕ್ಲಿಕ್ಕಿಸಿದ್ದು ಬಹಳ ವೈರಲ್ ಆಗಿತ್ತು

ನಾನು ಮುಂಬೈನಲ್ಲಿದ್ದೇನೆ

ಇನ್ನು ಈ ಬಗ್ಗೆ ಮಾತನಾಡಿದ ಮಾನ್ವಿತಾ,  “ಹೌದು, ನಾನು ಮುಂಬೈನಲ್ಲಿದ್ದೇನೆ, ಚಲನಚಿತ್ರ ಕೇಂದ್ರವಾಗಿದೆ, ಮತ್ತು  ಇದು ಎಲ್ಲಾ ಹೊಸ ಅನುಭವ.” ಎಂದು ಹೇಳಿದ್ದಾಳೆ..


ಮೂಕ ಪ್ರೇಕ್ಷಕ ನಾನು

ಬಾಲಿವುಡ್ ನಿಂದ ಮಾನ್ವಿತಾಗೆ ಅವಕಾಶಗಳು ಬಂದಿವೆಯಾ? ಎಂಬ ಪ್ರಶ್ನೆಗೆ ಮಾನ್ವಿತಾ “ಸಾಕಷ್ಟು ಕುತೂಹಲಕಾರಿ ಸಂಗತಿಗಳು ನಡೆಯುತ್ತಿರುವುದಕ್ಕೆ ನಾನು ಖುಷಿಯಾಗಿದ್ದೇನೆ, ಆದರೆ ನಾನು ಈಗ ಏನನ್ನೂ ಹೇಳುವಂತಿಲ್ಲ, ಬಾಯಿಗೆ ಬೆರಳಿಟ್ಟು ನೋಡು ಮೂಕ ಪ್ರೇಕ್ಷಕ ನಾನು..  ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ, ಆದರೆ ಸರಿಯಾದ ಸಮಯದಲ್ಲಿ ಮಾತ್ರ “ಎಂದು ಅವರು ಉತ್ತರಿಸುತ್ತಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿ ವಸಿಷ್ಠ ಸಿಂಹ ಎದುರು ಜೋಡಿಯಾಗಲಿದ್ದಾಳೆ. 10 ದಿನಗಳಷ್ಟು ಕಾಲ ಕೆಲಸ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿವೆ..

Tags

Related Articles