ಸುದ್ದಿಗಳು

ಪುಲ್ವಾಮಾ ಹುತಾತ್ಮರಿಗೆ ಗೌರವ ಸಲ್ಲಿಸುವ ಹಿಂದಿ ಹಾಡಿನಲ್ಲಿ ಮಾನ್ವಿತಾ ಹರೀಶ್

‘ಕೆಂಡಸಂಪಿಗೆ’, ‘ಟಗರು’, ‘ಕನಕ’.. ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ನಟಿ ಮಾನ್ವಿತಾ ಹರೀಶ್ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಇವರು ಪುಲ್ವಾಮಾ ಹುತಾತ್ಮರಿಗೆ ಗೌರವ ಸಲ್ಲಿಸುವ ಹಿಂದಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಮಾನ್ವಿತಾ ಇದೀಗ ಪುಲ್ವಾಮ ದಾಳಿಯಲ್ಲಿ ಮಡಿದ ಭಾರತೀಯ ಯೋಧರಿಗಾಗಿ ಗೌರವ ಸಲ್ಲಿಸುವ ವಿಶೇಷ ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕುವುದಕ್ಕೆ ರೆಡಿಯಾಗಿದ್ದಾರೆ. ಈ ಹಾಡಿಗೆ ಗಣೇಶ್ ಆಚಾರ್ಯ ಡ್ಯಾನ್ಸ್ ಕಂಪೋಸ್ ಮಾಡುತ್ತಿದ್ದು, ಮಾನ್ವಿತಾರೊಂದಿಗೆ ಕೃಷ್ಣ ಅಭಿಷೇಕ್ ಸ್ಟೆಪ್ ಹಾಕಲಿದ್ದಾರೆ.ಇನ್ನು ಈ ಹಾಡು ತುಂಬಾನೇ ವಿಶೇಷತೆ ಒಳಗೊಂಡಿದ್ದು, ಕಳೆದ ಫೆಬ್ರವರಿಯಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಈ ಹಾಡಿನ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಹಾಡಿನಲ್ಲಿ ಮಾನ್ವಿತಾ ಯೋಧನ ಪತ್ನಿಯಾಗಿ ಕಾಣಿಸಿಕೊಂಡು, ಯುದ್ಧಕ್ಕೆ ಹೋದ ಪತಿ ಮರಳಿ ಬರುವುದನ್ನೇ ಕಾಯುತ್ತಿರುತ್ತಾರೆ. ಇದನ್ನು ಈ ಹಾಡಿನ ಮೂಲಕ ಕಟ್ಟಿಕೊಡಲಾಗುತ್ತಿದೆ. ಸದ್ಯದಲ್ಲಿಯೇ ಈ ಹಾಡು ಬಿಡುಗಡೆಯಾಗಲಿದೆ.

ಇನ್ನು ಮಾನ್ವಿತಾ ‘ದಾರಿ ತಪ್ಪಿದ ಮಗ’, ‘ರಿಲ್ಯಾಕ್ಸ್ ಸತ್ಯ’, ‘ಲವ್ ಇನ್ ಲಂಡನ್’ ಚಿತ್ರಗಳು ಸೇರಿದಂತೆ ಮರಾಠಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಕಥೆ ಕೂಡ ಬರೆಯುತ್ತಿದ್ದಾರೆ. ಇದೀಗ ಆಲ್ಬಂ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ.

ಒಂದೇ ವಾರದಲ್ಲಿ ಮೂರು ಟಾಲಿವುಡ್ ನಟರಿಗೆ ಚಿತ್ರೀಕರಣದ ವೇಳೆ ಗಾಯ!!

#manvithaharish, #albumsong, #balkaninews #filmnews, #kannadasuddigalu

Tags