ಸುದ್ದಿಗಳು

ಹೊಸ ಕಥೆಯ ಹುಡುಕಾಟದಲ್ಲಿ ‘ಟಗರು’ ಪುಟ್ಟಿ ಮಾನ್ವಿತಾ..!!!

ಸದ್ಯ ಮೂರು ಚಿತ್ರಗಳಲ್ಲಿ ಮಾನ್ವಿತಾ ಅಭಿನಯ

ಬೆಂಗಳೂರು.ಮೇ.23: ‘ಕೆಂಡಸಂಪಿಗೆ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಮಾನ್ವಿತಾ ಹರೀಶ್ ಆನಂತರ ‘ಟಗರು’, ‘ತಾರಕಾಸುರ’, ‘ಕನಕ’ ಚಿತ್ರಗಳಲ್ಲಿ ನಟಿಸಿ ಮನೆ ಮಾತಾದರು. ಆದರೆ, ಇತ್ತಿಚೆಗೆ ಅವರು ನಟಿಸಿರುವ ಯಾವ ಸಿನಿಮಾಗಳೂ ತೆರೆಗೆ ಬಂದಿರಲಿಲ್ಲ.

ಹೌದು, ‘ತಾರಕಾಸುರ’ ಚಿತ್ರದ ಬಳಿಕ ಮಾನ್ವಿತಾ ಎಲ್ಲಿಗೆ ಹೋದರು ಎಂಬ ಕುತೂಹಲವಿತ್ತು. ಅದಕ್ಕೆ ಉತ್ತರವೆಂಬಂತೆ ಅವರ ಮೂರು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಐದಾರು ತಿಂಗಳಲ್ಲಿ ಅವರು ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳು ತೆರೆಗೆ ಬರಬೇಕಷ್ಟೇ..

Image result for manvitha harish

‘ನಾನು ‘ಟಗರು’ ಚಿತ್ರದ ಬಳಿಕ ‘ದಾರಿ ತಪ್ಪಿದ ಮಗ’ ಹಾಗೂ ‘ರಾಜಸ್ಥಾನ ಡೈರೀಸ್’, ಹಾಗೂ ‘ಲವ್ ಇನ್ ಲಂಡನ್’ (ಹೆಸರು ಬದಲಾಗಬಹುದು) ಚಿತ್ರಗಳಲ್ಲಿ ನಟಿಸಿದ್ದೇನೆ. ಅದಲ್ಲದೇ ‘ರಿಲಾಕ್ಸ್ ಸತ್ಯ’ ಕೂಡಾ ತೆರೆಗೆ ಬರಬೇಕಿದೆ. ಹೀಗೆ ಒಂದು ಸಿನಿಮಾ ಒಪ್ಪಿಕೊಂಡಾಗ ಮತ್ತೊಂದು ಚಿತ್ರದಲ್ಲಿ ನಟಿಸುವುದಿಲ್ಲ’ ಎಂದಿದ್ದಾರೆ ಮಾನ್ವಿತಾ.

Image result for manvitha harish

ಇನ್ನು ಇತ್ತಿಚೆಗಷ್ಟೇ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡು ಮಾನ್ವಿತಾ ಮಿಂಚಿದ್ದರು. ಅದಲ್ಲದೇ ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿ ಗ್ಲಾಮರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಇವೆಲ್ಲಾ ಸಿನಿಮಾಗಳೊಂದಿಗೆ ಗಂಗಾಧರ್ ಹಿರೇಮಠ ಎನ್ನುವವರು ಬರೆದಿರುವ ಕಥೆ ಇಷ್ಟವಾಗಿದೆಯಂತೆ. ಈ ಸಿನಿಮಾ ಶುರುವಾದರೆ, ಇದರಲ್ಲಿ ನಟಿಸುತ್ತಾರಂತೆ..!!

ಕೃಷ್ಣ ಮೃಗ ಭೇಟೆ ಪ್ರಕರಣ, ಸೆಲೆಬ್ರಿಟಿಗಳಿಗೆ ನೋಟೀಸ್ ಜಾರಿ

#manvithaharish, #looking, #new, #movies, #balkaninews #filmnews, #kannadasuddigalu, #tagaru, #kendasampige

Tags