ಸುದ್ದಿಗಳು

‘ರಾಜಸ್ಥಾನ್ ಡೈರಿಸ್’ ನಲ್ಲಿ ಮಾನ್ವಿತಾ ಹರೀಶ್!!

ಬೆಂಗಳೂರು,ಫೆ.20: ‘ಕೆಂಡ ಸಂಪಿಗೆನಾಯಕಿ ಮಾನ್ವಿತಾ ಹರೀಶ್ ‘ಟಗರು’  ಚಿತ್ರದ ಬಳಿಕ ಚಿತ್ರರಂಗದಲ್ಲಿ ಫುಲ್ ಬ್ಯುಸಿ.. ಹಲವಾರು ಚಿತ್ರಗಳ ಆಫರ್ ಗಳಿ ಬರುತ್ತಿದ್ದರೂ ಮಾನ್ವಿತಾ ಮಾತ್ರ ತುಂಬಾ ಚ್ಯೂಸಿ.. ಈಗಾಗಲೇ ದಾರಿ ತಪ್ಪಿದ ಮಗ್ , ಹಾಗೂ ನ್ನೂ ಹೆಸರಿಡದ ಚಿತ್ರ ವಸಿಷ್ಠ ಸಿಂಹ ಜೊತೆ ಕೂಡ ಕಾಣಿಸಲಿದ್ದಾರೆ..

ರಾಜಸ್ಥಾನ್ ಡೈರೀಸ್ಚಿತ್ರದಲ್ಲಿ ಚೆಲುವೆ ಮಾನ್ವಿತಾ

ಇತ್ತೀಚೆಗೆ ಮಾನ್ವಿತಾ ಮುಂಬೈಗೆ ಹೋಗಿದ್ದರು.. ಅನೇಕರು ಮಾನ್ವಿತಾ ಬಾಲಿವುಡ್ ಗೆ ಎಂಟ್ರಿ ನೀಡಿದಳು ಎಂದು ಅಂದುಕೊಳ್ಳುವಾಗಲೇ ಮಾನ್ವುತಾ ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.. ಹೌದು, ಮರಾಠಿ ಜತೆಗೆ ಕನ್ನಡದಲ್ಲೂ ನಿರ್ಮಾಣವಾಗುತ್ತಿರುವ ‘ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ಚೆಲುವೆ ಮಾನ್ವಿತಾ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಇಡೀ ಚಿತ್ರೀಕರಣ ರಾಜಸ್ಥಾನದ ಜೈಪುರ್, ಜೋಧಪುರ್ ಹಾಗೂ ಜೈಸಲ್ಮೇರ್ ಸುತ್ತಮುತ್ತ ನಡೆಯಲಿದೆ.

Related image

ಮಾನ್ವಿತಾಗೆ ನಾಯಕನಾಗಿ ಸುಮುಖ್

ಮಾನ್ವಿತಾಗೆ ನಾಯಕನಾಗಿ ಸುಮುಖ್ ಕಾಣಿಸಲಿದ್ದು ಇವರು ಕೂಡ ಕನ್ನಡದವರೇ.. ಹುಟ್ಟಿ , ಬೆಳೆದಿದ್ದು ಮಾತ್ರ ಮುಂಬೈ. ಚಿತ್ರದ ನಿರ್ದೇಶಕಿ ನಂದಿತಾ ಯಾದವ್ ಪುತ್ರ. ಕನ್ನಡ ಕಿರುತೆರೆಯಲ್ಲಿ ನಂದಿತಾ ಯಾದವ್ ಪರಿಚಿತ ಹೆಸರು. ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ..

ಬಾಳ ಠಾಕ್ರೆ ಕುಟುಂಬದ ಜೀತೇಂದ್ರ ಠಾಕ್ರೆ ನಿರ್ಮಾಣದಲ್ಲಿ ಮಾನ್ವಿತ ಕಾಮತ್ ನಾಯಕಿಯಾಗಿ ಆಯ್ಕೆ ಆಗಿರುವ ಚಿತ್ರದ ಹೆಸರು ‘ರಾಜಸ್ಥಾನ್ ಡೈರಿಸ್’ ಎಂದು ಹೇಳಲಾಗುತ್ತಿದೆ.

 

 

Tags