ಸುದ್ದಿಗಳು

ದಸರಾ: ಮ್ಯಾರಥಾನ್ ನಲ್ಲಿ ಮುಗ್ಗರಿಸಿಬಿದ್ದ ಸಚಿವ ಜಿ.ಟಿ.ದೇವೇಗೌಡ..!

ನನಗೆ ಏನು ಆಗಿಲ್ಲ...

ಮೈಸೂರು,ಅ.14: ಜಗತ್ ಪ್ರಸಿದ್ಧ ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ್ದ ಓಟದ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಓಡುವ ಭರದಲ್ಲಿ ಮುಗ್ಗರಿಸಿ ಬಿದ್ದ ಘಟನೆ ನಡೆಯಿತು. ಓಟದ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಅವರೇ ಚಾಲನೆ ನೀಡಿದ್ದರು. ಬಳಿಕ ಹಿರಿಯರ ವಿಭಾಗದಲ್ಲಿ ಅವರು ಸ್ಪರ್ಧಿಸಿದ್ದರು.

ದಸರಾ ಮ್ಯಾರಥಾನ್

ಐದನೇ ದಿನವಾದ ಇಂದು ದಸರಾ ಮ್ಯಾರಥಾನ್ ಏರ್ಪಡಿಸಲಾಗಿತ್ತು. ಈ ವೇಳೆ ಸಚಿವರು ಕೂಡ ಪಂಚೆ ಎತ್ತಿಕಟ್ಟಿ, ಕಾಲಲ್ಲಿ ಬ್ಲ್ಯಾಕ್ ಶೂ ಧರಿಸಿ ಮ್ಯಾರಥಾನ್​ಗೆ ಚಾಲನೆ ನೀಡುತ್ತಿದ್ದಂತೆಯೇ ಫುಲ್ ಸ್ಪೀಡಿನಲ್ಲಿ ಓಡಲು ಶುರುಮಾಡಿದ್ದರು. ಆದರೆ ಸ್ವಲ್ಪ ದೂರ ಹೋಗುತ್ತಲೇ ತೊಡರುಗಾಲು ಆಗಿ ಮುಗ್ಗರಿಸಿ ಬಿದ್ದಿದ್ದಾರೆ.

Image result for ಜಿ.ಟಿ.ಡಿ

ಮೊಣಕಾಲಿಗೆ ತರಚಿ ಗಾಯ         

ಪಂಚೆ ಎತ್ತಿಕಟ್ಟಿ ಓಡುವ ವೇಳೆ ಜಿ.ಟಿ.ಡಿ ಮುಗ್ಗರಿಸಿ ಬಿದ್ದಿದ್ದಾರೆ. ಕ್ಯಾಮರಾಮೆನ್ಗಳು, ಮ್ಯಾರಥಾನ್ ಸ್ಫರ್ಧಿಗಳು ಸಚಿವರ ನೆರವಿಗೆ ಬಂದು ಮೇಲಕ್ಕೆತ್ತಿದರು. ಈ ವೇಳೆ ಜಿಟಿಡಿ ಅವರ ಮೊಣಕಾಲಿಗೆ ತರಚಿದ ಗಾಯವಾಗಿದ್ದು, ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಿಟಿಡಿ, ನನಗೆ ಏನು ಆಗಿಲ್ಲ. ಯಾರು ಗಾಬರಿಯಾಗುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ಉಮ್ಮಸ್ಸಿನಲ್ಲಿ ಓಡುತ್ತಿದ್ದಾಗ ಶೂ ಸ್ಲಿಪ್ ಆಗಿದೆ. ನನಗೇನು ಆಗಿಲ್ಲ. ಆಸ್ಪತ್ರೆಗೂ ಹೋಗಿಲ್ಲ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Tags