ಸುದ್ದಿಗಳು

‘ಮಾರ್ಲಾಮಿ’ ಚಿತ್ರಕ್ಕೆ ಚಾಲನೆ ನೀಡಿದ ಬಿಗ್ ಬಾಸ್ ಪ್ರಥಮ್

ಮಾರ್ಲಾಮಿ.. ಈ ಹೆಸರನ್ನು ಎಲ್ಲಿಯೋ ಕೇಳಿದಂತಿದೆ ಅಲ್ಲವೇ.. ಹೌದು, ಈ ಹೆಸರಿನ ವಿಶೇಷವೆಂದರೆ, ಮನೆಯ ಹಿರಿಯರನ್ನು ಸ್ಮರಿಸುವುದಕ್ಕಾಗಿ ಒಂದು ತಿಂಗಳನ್ನು ಹಿಂದೂ ಶಾಸ್ತ್ರದಲ್ಲಿ ‘ಪಿತೃ ಪಕ್ಷ’ವೆಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಈ ಆಚರಣೆಗೆ ಮಾರ್ಲಾಮಿ ಹಬ್ಬವೆಂದೂ ಕರೆಯುತ್ತಾರೆ.

ಅಂದ ಹಾಗೆ ಈ ಆಚರಣೆ ಹೇಗೆ ಬಂತು? ಇದರ ಹಿನ್ನೆಲೆ ಏನು?.. ಹೀಗೆ ಎಲ್ಲಾ ಅಂಶಗಳನ್ನು ಆಧರಿಸಿ ಸ್ಯಾಂಡಲ್ ವುಡ್ ನಲ್ಲೊಂದು ಸಿನಿಮಾ ಮೂಡಿ ಬರುತ್ತಿದೆ. ಅದಕ್ಕೆ ‘ಮಾರ್ಲಾಮಿ’ ಎಂದೇ ಹೆಸರಿಡಲಾಗಿದೆ. ಈ ಚಿತ್ರಕ್ಕೆ ಸರಿಗಮಪ ರಿಯಾಲಿಟಿ ಶೋ ವಿನ್ನರ್ ಚನ್ನಪ್ಪ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತಿಚೆಗಷ್ಟೇ ಈ ಚಿತ್ರದ ಮೂಹೂರ್ತ ಸಮಾರಂಭವು ನಗರದ ಗವಿಪುರಂ ಗುಟ್ಟಹಳ್ಳಿಯ ಬಂಡೆ ಮಹಾಕಾಳಿಯ ದೇವಸ್ಥಾನದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಕನ್ನಡ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕ್ಲ್ಯಾಪ್ ಮಾಡಿದರೆ, ಧಾತ್ರಿ ಮಂಜುನಾಥ್ ಕ್ಯಾಮರಾ ಚಾಲನೆ ಮಾಡಿದರು.

ಇನ್ನು ಈ ಚಿತ್ರಕ್ಕೆ ನಾಯಕಿಯಾಗಿ ವರ್ಷಿತ ವರ್ಮ ನಟಿಸುತ್ತಿದ್ದು, ಚಿತ್ರಕ್ಕೆ ಎರಿಕ್ ವಿ.ಜಿ. ಛಾಯಾಗ್ರಹಣ ಹಾಗೂ ಅರುಣ್ ಆಂಡ್ರೋ ಸಂಗೀತವಿದೆ. ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕಿದ್ದಾರೆ.

ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪ್ರಥಮ್ ಚಿತ್ರದ ಬಗ್ಗೆ ಹೀಗೆ ಹೇಳಿದ್ದಾರೆ, ‘ನಮ್ಮನ್ನಗಲಿರುವ ಹಿರಿಯರನ್ನು ನೆನಪಿಸಿಕೊಂಡು ಮಾಡುವ ಪೂಜೆಯನ್ನು ಮಾರ್ಲಾಮಿ ಎನ್ನುತ್ತೇವೆ. ಈ ರೀತಿಯ ಹಳ್ಳಿ ಸೊಗಡಿನ ಸಿನಿಮಾಗಳು ಇನ್ನು ಹೆಚ್ಚು ಬರಬೇಕು’.

‘ನಮ್ಮ ಈ ಚಿತ್ರದಲ್ಲಿ ಕಥೆಯೇ ಹೀರೋ. ಇದನ್ನು ನಾವು ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ಮಾಡುತ್ತಿದ್ದೇವೆ. ಹಾಗೆಯೇ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಇದೆ. ಚೆನ್ನಪ್ಪ ಅವರ ಪಾತ್ರ ಚಿತ್ರಕ್ಕೆ ಹೊಸ ತಿರುವು ಕೊಡುತ್ತದೆ. ಇದರ ಜೊತೆಗೆ ಹಾರರ್ ಟಚ್ ಕೂಡ ಇದೆ” ಎಂದು ನಿರ್ದೇಶಕರಾದ ವಿನಯ್ ಕುಮಾರ್ ಹೇಳಿದ್ದಾರೆ.

ಉಳಿದಂತೆ ಚಿತ್ರದಲ್ಲಿ ವರುಣ್, ಮೋಹನ್ ಜುನೇಜ, ಶೋಭರಾಜ್, ಮುನಿ ಕೆಂಪೇಗೌಡ, ಸುಧಾ, ದಿನೇಶ್ ಗುರೂಜಿ, ರೆಮೋ ಸೇರಿದಂತೆ ಅನೇಕರು ನಟಿಸುತ್ತಿದ್ದು, ಚಿತ್ರವನ್ನು ಚೆನ್ನರಾಯ ಪಟ್ಟಣದ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ.

ರಣ್ ವೀರ್ ಬದಲಾಗಲಿಲ್ಲ, ಆದರೆ ದೀಪಿಕಾಳನ್ನು ಬದಲಾಯಿಸಿದರು ಎಂದ ಟ್ರೋಲಿಗರು

#marlaami, #movie, #muhurtha, #balkaninews #filmnews, #kannadasuddigalu, #pratham,  #channappahuddara

Tags